ದುಡ್ಡಿದ್ದವರು ಹೀಗೇಕೆ ಮಾಡ್ತಾರೋ ಅರ್ಥವಾಗಲ್ಲ: ಸೋಷಿಯಲ್ ಮೀಡಿಯಾದಲ್ಲಿ ಸಿಜೆ ರಾಯ್ ಸಾವಿನ ಚರ್ಚೆ
CJ Roy Death: ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್‌ನ ಚೇರ್ಮನ್ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಉದ್ಯಮ ವಲಯದ ಪ್ರಮುಖ ವ್ಯಕ್ತಿಯಾಗಿದ್ದ ಅವರ ಅಕಾಲಿಕ ಸಾವಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು, ಅಭಿಪ್ರಾಯಗಳು ಹಾಗೂ ಭಾವನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಎಕ್ಸ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಉದ್ಯಮಿಗಳು, ರಾಜಕೀಯ ನಾಯಕರು, ಸಾಮಾಜಿಕ ಹೋರಾಟಗಾರರು ಮತ್ತು ಸಾಮಾನ್ಯ ನಾಗರಿಕರು ತಮ್ಮ ಸಂತಾಪ ಸೂಚಿಸಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಸಿ.ಜೆ.ರಾಯ್ ಅವರ ಉದ್ಯಮ ಪ್ರಯಾಣವನ್ನು ನೆನಪಿಸಿಕೊಂಡರೆ, ಇನ್ನೂ ಕೆಲವರು ಉದ್ಯಮಿಗಳ ಮೇಲೆ ಬೀರುವ ಮಾನಸಿಕ ಒತ್ತಡ, ತನಿಖಾ ಪ್ರಕ್ರಿಯೆಗಳ ಪರಿಣಾಮ ಹಾಗೂ ವ್ಯವಸ್ಥೆಯ ಹೊಣೆಗಾರಿಕೆ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ರಾಯ್ ನಿಧನಕ್ಕೆ ಸಂತಾಪ: ವಿಶೇಷವಾಗಿ ಉದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳ ಮೇಲೆ ನಡೆಯುವ ನಿರಂತರ ಪರಿಶೀಲನೆಗಳು, ಅದರ ಮಾನಸಿಕ ಪರಿಣಾಮಗಳು ಮತ್ತು ಬೆಂಬಲ ವ್ಯವಸ್ಥೆಗಳ ಅಗತ್ಯತೆಯ ಬಗ್ಗೆ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ. ಕೆಲವು ಬಳಕೆದಾರರು "ಉದ್ಯಮಿಗಳ ಮಾನಸಿಕ ಆರೋಗ್ಯಕ್ಕೂ ರಕ್ಷಣೆ ಅಗತ್ಯ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಸಾವಿನ ನಿಖರ ಹಿನ್ನೆಲೆ ಹಾಗೂ ಕಾರಣಗಳ ಬಗ್ಗೆ ಅಧಿಕೃತ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದು ಕೆಲವರು ಮನವಿ ಮಾಡಿದ್ದಾರೆ. ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟ ಚಿತ್ರಣ ಹೊರಬರಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಮತ್ತೆ ಕೆಲವರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ರಾಯ್ ನಿಧನದ ಕುರಿತು ಭಾರೀ ಚರ್ಚೆ: "ಮನುಷ್ಯನಿಗೆ ಹಣ ಎಲ್ಲವನ್ನೂ ಕೊಡುತ್ತದೆ. ಹಾಗೆಯೇ ಹಣ ಎಲ್ಲವನ್ನೂ ಕೊಡುವುದಿಲ್ಲ. ಅಷ್ಟು ದೊಡ್ಡ ಬಿಸಿನೆಸ್ ಸಾಮ್ರಾಜ್ಯ, ಹಣ, ಲಕ್ಷುರಿ ಕಾರ್‌ಗಳು, ಐಡೆಂಟಿಟಿ ಇಷ್ಟೇ ನಮಗೆ ಕಾಣುವುದು. ಇದನ್ನು ಬಿಟ್ಟು ಒಳಗುಟ್ಟು ನಮಗೇನು ಗೊತ್ತು? ಆದರೂ ಬೇಕು ಬೇಕೆಂದು ಗಳಿಸಿದ್ದನ್ನು ಬಿಟ್ಟು ಹೋಗಲು ಹೇಗೆ ಮನಸು ಬಂತೊ ಈ ಶ್ರೀಮಂತರು ಅರ್ಥವಾಗಲ್ಲಪ್ಪ," ಎಂದು ಫೇಸ್ ಬುಕ್‌ನಲ್ಲಿ ಒಬ್ಬರು ಬರೆದುಕೊಂಡಿದ್ದಾರೆ.
ಜಿತೇಂದ್ರ ಕುಂದೇಶ್ವರ ಎಂಬುವರು "ಎಷ್ಟು ಕೋಟಿ ದುಡ್ಡು ಇದ್ದರೇನು? ನೆಮ್ಮದಿ ಒಂದು ಇಲ್ಲದಿದ್ದರೆ?, ಸಾವಿರಾರು ಕೋಟಿ ಒಡೆಯ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿ ದಾಳಿಯ ಭಯವೇ ಸಿಜೆ ರಾಯ್ ಆತ್ಮಹತ್ಯೆಗೆ ಕಾರಣ?," ಎಂದು ಬರೆದುಕೊಂಡಿದ್ದಾರೆ.
ನಗರದ ಗಗನಚುಂಬಿ ಕಟ್ಟಡಗಳು, ಐಷಾರಾಮಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಮೂಲಕ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿದ್ದ ಕಾನ್ಫಿಡೆಂಟ್ ಗ್ರೂಪ್ ಚೇರ್‌ಮೆನ್ ಸಿಜೆ ರಾಯ್ ಅವರು ಶುಕ್ರವಾರ ಹಠಾತ್ತನೆ ಇಹಲೋಕ ತ್ಯಜಿಸಿದ್ದಾರೆ. ಅವರ ಈ ನಿರ್ಧಾರ ಇಡೀ ಉದ್ಯಮ ಲೋಕವನ್ನು ಬೆಚ್ಚಿಬೀಳಿಸಿದೆ.
ಬೆಂಗಳೂರಿನಲ್ಲಿ ಪ್ರತಿಷ್ಠಿತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಸಿಜೆ ರಾಯ್, ತಮ್ಮ ಕಠಿಣ ಪರಿಶ್ರಮದಿಂದ ಸಾವಿರಾರು ಕೋಟಿ ರೂಪಾಯಿಗಳ ಒಡೆಯರಾಗಿದ್ದರು. ಬಿಗ್‌ಬಾಸ್ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ಬಹುಮಾನಗಳನ್ನ ನೀಡುತ್ತಿದ್ದರು. ಐಟಿ ದಾಳಿ ನಡೆಸುತ್ತಿದ್ದ ವೇಳೆ ತಾನು ಗುಂಡು ಹಾರಿಸಿಕೊಂಡು ಬದುಕನ್ನ ಕೊನೆಗೊಳಿಸಿದ್ದಾರೆ.
ಆದರೆ, ಯಶಸ್ಸಿನ ಶಿಖರದಲ್ಲಿದ್ದಾಗ ಅವರ ಜೀವನದಲ್ಲಿ ವಿಧಿಯಾಟ ಬೇರೆಯೇ ಆಗಿತ್ತು. ಕಳೆದ ಕೆಲವು ಸಮಯದಿಂದ ಆದಾಯ ತೆರಿಗೆ ಇಲಾಖೆಯ ಹದ್ದುಗಣ್ಣು ಸಿಜೆ ರಾಯ್ ಅವರ ಮೇಲೆ ಬಿದ್ದಿತ್ತು. ಅವರ ಕುಟುಂಬ ಮತ್ತು ಉದ್ಯಮಗಳ ಮೇಲೆ ಪದೇ ಪದೇ ನಡೆದ ಐಟಿ ದಾಳಿಗಳು ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು ಎಂದು ಹೇಳಲಾಗುತ್ತಿದೆ. ನಿರಂತರ ಒತ್ತಡ ಮತ್ತು ಭಯದಿಂದ ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂಬ ಅನುಮಾನಗಳು ಬಲವಾಗಿ ಕೇಳಿಬರುತ್ತಿವೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, ಅವರ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಬ್ಬ ಯಶಸ್ವಿ ಉದ್ಯಮಿ, ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾತ, ಇಂತಹ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಗೆ ತಲುಪಿದ್ದು ಯಾಕೆ? ಅವರ ಸಾವಿನ ಹಿಂದಿನ ನಿಜವಾದ ಕಾರಣವೇನು? ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ. ಸಿಜೆ ರಾಯ್ ಅವರ ಅಗಲಿಕೆ ಅವರ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ಅವರ ನಂಬಿದ್ದ ಉದ್ಯೋಗಿಗಳಿಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಿತೇಂದ್ರ ಕುಂದೇಶ್ವರ ಅವರು ಬರೆದುಕೊಂಡದ್ದನ್ನು Shivu Hanakere ಎಂಬುವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮತ್ತೊಬ್ಬರು, ಅವರ ಬಳಿ ತುಂಬಾ ಹಣ ಇತ್ತು. ಅವರಿಗೆ ಕುಟುಂಬವೂ ಇತ್ತು. ಇನ್‌ಸ್ಟಾಗ್ರಾಮ್‌ನಲ್ಲಿ 13 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು. ಆದರೂ ಸಿ.ಜೆ. ರಾಯ್ ತಮ್ಮದೇ ಕಚೇರಿಯಲ್ಲಿ ತಾವು ತಾವೇ ಗುಂಡು ಹಾರಿಸಿಕೊಂಡು ಜೀವ ತೆತ್ತಿದ್ದಾರೆ. ಜೀವನದಲ್ಲಿ ಹಣ, ಹೆಸರು, ಯಶಸ್ಸಿಗಿಂತಲೂ ಮಿಗಿಲಾದದ್ದು ಒಂದಿದೆ, ಅದೇ ಮನಶಾಂತಿ. ದುಃಖಕರ ಸಂಗತಿ ಏನೆಂದರೆ, ಆ ಮನಶಾಂತಿಯನ್ನು ನಾವು ಮಾನವರು ಇನ್ನೂ ಸಂಪೂರ್ಣವಾಗಿ ಸಾಧಿಸಿಲ್ಲ ಎಂದು ಟ್ವಿಟ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಬ್ಬರು, ಕಾನ್ಫಿಡೆಂಟ್ ಗ್ರೂಪ್‌ನ ಚೇರ್ಮನ್ ಡಾ. ಸಿ.ಜೆ. ರಾಯ್ ಅವರು ನಿಧನರಾಗಿದ್ದು, ಇದು ಶಾಕಿಂಗ್ ವಿಚಾರವಾಗಿದೆ. ಬಿಗ್‌ಬಾಸ್ ಕನ್ನಡ ಫಿನಾಲೆಯಲ್ಲಿ ವಿಜೇತರಿಗೆ 50 ಲಕ್ಷ ರೂಪಾಯಿ ಬಹುಮಾನ ನೀಡುತ್ತಿದ್ದ ಕ್ಷಣಗಳಿಂದ ಅವರು ಎಲ್ಲರಿಗೂ ಪರಿಚಿತರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವಿಟ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ, ಸಿ.ಜೆ. ರಾಯ್ ಅವರ ನಿಧನವು ಕೇವಲ ಒಬ್ಬ ವ್ಯಕ್ತಿಯ ಸಾವು ಮಾತ್ರವಲ್ಲದೆ, ಉದ್ಯಮ ವಲಯದಲ್ಲಿ ಕೆಲಸ ಮಾಡುವವರ ಮೇಲೆ ಬೀರುವ ಒತ್ತಡಗಳು, ಜವಾಬ್ದಾರಿಗಳು ಮತ್ತು ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ತನಿಖೆಯ ಮುಂದಿನ ಹಂತಗಳಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯವಾಗುವ ನಿರೀಕ್ಷೆಯಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications