ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆ ಮಧ್ಯಂತರ ತಡೆ
Recommended Video

ಬೆಂಗಳೂರು, ಡಿಸೆಂಬರ್ 20: ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಕೆ.ಜಿ.ಎಫ್ ಚಿತ್ರದ ಬಿಡುಗಡೆಗೆ ಬ್ರೇಕ್ ಬಿದ್ದಿದೆ.
ಬೆಂಗಳೂರಿನ 10ನೇ ಸಿಟಿ ಸಿವಿಎಲ್ ಕೋರ್ಟಿನಿಂದ ಕೆಜಿಎಫ್ ಚಿತ್ರದ ಬಿಡುಗಡೆಗೆ ಗುರುವಾರ(ಡಿಸೆಂಬರ್ 19) ಮಧ್ಯಂತರ ತಡೆ ನೀಡಲಾಗಿದೆ. ಜನವರಿ 07, 2019ರ ತನಕ ಚಿತ್ರದ ಬಿಡುಗಡೆಗೆ ತಡೆ ನೀಡಲಾಗಿದೆ.
ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರದ ಬಿಡುಗಡೆ ತಡೆ ನೀಡುವಂತೆ ರತನ್ ಮತ್ತು ಲೋಹಿತ್ ಎಂಬುವರು ಸೆಷನ್ಸ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಕೋರ್ಟಿನಲ್ಲಿ ಕೆಜಿಎಫ್ ಚಿತ್ರದ ವಿರುದ್ಧ ಈ ಚಿತ್ರ ರೌಡಿ ತಂಗಂ ಜೀವನ ಆಧಾರಿತ ಚಿತ್ರ ಎಂಬ ಆರೋಪ ಹೊರೆಸಲಾಗಿದೆ. ವೆಂಕಟೇಶ್ ಎಂಬುವರು ರೌಡಿ ತಂಗಂ ಜೀವನ ಕಥೆಯ ಹಕ್ಕು ಪಡೆದುಕೊಂಡಿದ್ದಾರೆ. ಕೆಜಿಎಫ್ ಚಿತ್ರದ ಕಥೆ ಕೂಡಾ ರೌಡಿ ತಂಗಂ ಕಥೆಯಂತೆ ಇದೆ ಎಂದು ವೆಂಕಟೇಶ್ ಅವರು ಆರೋಪಿಸಿದ್ದಾರೆ.

ಮತ್ತೊಂದು ಅರ್ಜಿಯಲ್ಲಿ ಕೋಲಾರ ಗೋಲ್ಡ್ ಫೀಲ್ಡ್ಸ್(ಕೆಜಿಎಫ್) ನ ಹೆಸರು ದುರ್ಬಳಕೆಯಾಗುತ್ತಿದೆ. ಈ ಚಿತ್ರದಲ್ಲಿ ಹಿಂಸೆ, ರಕ್ತಪಾತವನ್ನು ತೋರಿಸಲಾಗಿದೆ.
ಇದರಿಂದ ಕೆಜಿಎಫ್ ಹೆಸರಿಗೆ ಧಕ್ಕೆ ಉಂಟಾಗುತ್ತಿದೆ, ಲಿಟ್ಲ್ ಇಂಗ್ಲೆಂಡ್ ಎಂದು ಕರೆಯಲ್ಪಡುತ್ತಿದ್ದ ಚಿನ್ನದ ಗಣಿ ಹೊಂದಿದ್ದ ವಿಶ್ವದ ಗಣಿಗಾರಿಕೆಗೆ ಮಾದರಿಯಾಗಿದ್ದ ಕೆಜಿಎಫ್ ನ ಘನತೆಯನ್ನು ಉಳಿಸಲು ಈ ಚಿತ್ರದ ಶೀರ್ಷಿಕೆ ಬದಲಾವಣೆ ಅಗತ್ಯವಿದೆ. bloody gold fields of Kolar ಬಳಸಿರುವುದು ತಪ್ಪು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಯಶ್ ಅಭಿನಯದ ಚಿತ್ರದ ಹೆಸರು ಬದಲಾಯಿಸುವ ತನಕ ಬಿಡುಗಡೆ ಮಾಡದಂತೆ ಕೋರಲಾಗಿದೆ. ಈ ಅರ್ಜಿ ನಾಳೆ(ಡಿ.20) ವಿಚಾರಣೆ ನಡೆಯಲಿದೆ.
ಡಿಸೆಂಬರ್ 21ರಂದು ವಿಶ್ವದೆಲ್ಲೆಡೆ 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಕೆಜಿಎಫ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಕೆಜಿಎಫ್ ಚಿತ್ರದ ಟಿಕೆಟ್ ಗಳು ಈಗಾಗಲೇ ಮಾರಾಟವಾಗಿದೆ.












Click it and Unblock the Notifications