ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಚಳಿಗಾಲದ ಶಾಪಿಂಗ್‌ ಮೇಳ

ಬೆಂಗಳೂರು ನವೆಂಬರ್‌ 21: ಚಳಿಗಾಲದ ಮುಂಜಾವು ಹಾಗೂ ಇಳಿಸಂಜೆಗಳನ್ನು ಇನ್ನಷ್ಟು ಹಿತವಾಗಿಸುವ ದೇಶದ ವಿವಿಧ ಭಾಗಗಳ ಕರಕುಶಲ ಕರ್ಮಿಗಳಿಂದ ತಯಾರಿಸಲ್ಪಟ್ಟಿರುವ ಚಳಿಗಾಲದ ಉಡುಪುಗಳ ವಿಶೇಷ ಸಂಗ್ರಹವನ್ನು ನಗರದ ಜನರ ಮುಂದಿಡುವ ದೃಷ್ಟಿಯಿಂದ, ನವೆಂಬರ್‌ 22 ರಿಂದ ಡಿಸೆಂಬರ್‌ 1 ರ ವರೆಗೆ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ "ದ ಸೋಕ್‌ - ಮಾರ್ಕೇಟ" ನ್ನು ಆಯೋಜಿಸಲಾಗಿದೆ.

Recommended Video

      ದುರ್ಯೋಧನನ ಅಭಿಮಾನಿಗಳಿಗೆ ಸಿಹಿ ಸುದ್ದಿ

      ದ ಗ್ರಾಂಡ್‌ ಫ್ಲಿಯಾ - ಚಿತ್ತಾರ ಸಹಯೋಗದಲ್ಲಿ ನಡೆಸುತ್ತಿರುವ ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ಎಲ್ಲಾ ಭಾಗಗಳಿಂದಲೂ ಆಗಮಿಸಲಿರುವ ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ಕಾಶ್ಮೀರಿ ಶಾಲುಗಳು, ಮಣಿಪುರಿ ಹಾಗೂ ಈಶಾನ್ಯ ರಾಜ್ಯಗಳ ಕಲಾಕಾರರು ತಯಾರಿಸಿರುವ ಉತ್ಪನ್ನಗಳು ಎಲ್ಲರ ಗಮನ ಸೆಳೆಯಲಿವೆ.

      ಇದಲ್ಲದೆ, ಮಣಿಪುರ, ನಾಗಾಲ್ಯಾಂಡ್ ರಾಜ್ಯದ ಕರಕುಶಲಕಾರರು ತಯಾರಿಸಿದ ಸೀರೆಗಳು ಈ ಬಾರಿಯ ಪ್ರಮುಖ ಆಕರ್ಷಣೆ. ಅಲ್ಲದೆ, ಸ್ಟೋನ್ ಆಭರಣಗಳು ಎಲ್ಲರ ಗಮನ ಸೆಳೆಯಲಿವೆ. ಹಾಗೆಯೇ, ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ.

      Chitrakala Parishat Winter Special The Souq Market

      ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.

      ನವೆಂಬರ್‌ 22 ರಿಂದ ಡಿಸೆಂಬರ್‌ 1 ರವರೆಗೆ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಈ ಮೇಳದ ಪ್ರಮುಖ ಉದ್ದೇಶ ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೊಂದು ಮಾರುಕಟ್ಟೆ ಕಲ್ಪಿಸುವುದಾಗಿದೆ.

      Chitrakala Parishat Winter Special The Souq Market

      ದ ಸೋಕ್‌ - ಮಾರ್ಕೇಟ್‌

      ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್

      (ಶಿವಾನಂದ ವೃತ್ತದ ಬಳಿ)

      ದಿನಾಂಕ: ನವೆಂಬರ್‌ 22 ರಿಂದ ಡಿಸೆಂಬರ್‌ 1 ರ ವರೆಗೆ

      ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ರ ವರೆಗೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+