ಬೆಂಗಳೂರು ಮ್ಯಾರಥಾನ್: ಸಂಚಾರ ನಿಷೇಧ ಎಲ್ಲೆಲ್ಲಿ
ಬೆಂಗಳೂರು, ಮೇ. 17: ಟಿಸಿಎಸ್ ವರ್ಲ್ಡ್ 10-ಕೆ ಬೆಂಗಳೂರು ಮ್ಯಾರಥಾನ್ ಮೇ.18 ಭಾನುವಾರ ನಡೆಯಲಿರುವುದರಿಂದ ನಗರದ ಕೆಲವು ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಮ್ಯಾರಥಾನ್ ನಡೆಯುವ ದಿನ ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಡಿಕೆನ್ಸನ್ ರಸ್ತೆ, ಹಲಸೂರು ರಸ್ತೆ, ಕ್ವೀನ್ಸ್ ರೋಡ್, ಅಂಬೇಡ್ಕರ್ ರಸ್ತೆ (ಪೂರ್ವ ಭಾಗ) ಹಾಗೂ ಕಬ್ಬನ್‌ಪಾರ್ಕ್ ಒಳ ಭಾಗದ ರಸ್ತೆ, ಕಸ್ತೂರಬಾ ರಸ್ತೆ, ಎಂ.ಜಿ.ರಸ್ತೆ (ಅನಿಲ್ ಕುಂಬ್ಳೆ ವೃತ್ತದವರೆಗೆ) ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು , ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಯಾವ ರೀತಿ ತೆರಳಬಹುದು:
ಜೆ.ಸಿ. ರಸ್ತೆ ಮತ್ತು ನೃಪತುಂಗ ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ, ಎಂ.ಜಿ. ರಸ್ತೆ, ಹಲಸೂರು, ಮಾರತ್‌ಹಳ್ಳಿ ಕಡೆಗೆ ಹೋಗುವವರು, ಹಡ್ಸನ್ ವೃತ್ತದಿಂದ ದೇವಾಂಗ ರಸ್ತೆ, ಮಿಷನ್ ರಸ್ತೆ ಮೂಲಕ ಸಾಗಿ ರಿಚ್ಮಂಡ್ ಮೇಲ್ಸೇತುವೆ ತಲುಪಿ ರೆಸಿಡೆನ್ಸಿ ರಸ್ತೆಯ ಕ್ಯಾಷ್ ಫಾರ್ಮಸಿಗೆ ಮೂಲಕ ಮುಂದೆ ತೆರಳಬಹುದು.
ಜೆ.ಸಿ. ರಸ್ತೆಯಿಂದ ವಿಧಾನಸೌಧ, ಶಿವಾಜಿನಗರ ಮತ್ತು ರಾಜಭವನ ರಸ್ತೆ ಕಡೆಗೆ ಹೋಗುವವರು ಪೊಲೀಸ್ ಕಾರ್ನರ್ ವೃತ್ತ ಬಳಸಿ ಕೆ.ಜಿ. ರಸ್ತೆ, ಹಳೇ ಅಂಚೆ ಕಚೇರಿ ರಸ್ತೆ, ಕೆ.ಆರ್. ವೃತ್ತ, ಅಂಬೇಡ್ಕರ್ ವೀದಿ ಮೂಲಕ ಸಾಗಬಹುದು.
ಶಿವಾಜಿನಗರ ಕಡೆಯಿಂದ ಹೋಗುವ ವಾಹನಗಳು, ಬಾಳೆಕುಂದ್ರಿ ವೃತ್ತಕ್ಕೆ ಬರಬೇಕು. ಅಲ್ಲಿ ಬಲಕ್ಕೆ ತಿರುಗಿಸಿ ಕನ್ನಿಂಗ್ ಹ್ಯಾಂ ರಸ್ತೆ ಮೂಲಕ ಚಂದ್ರಿಕಾ ಹೋಟೆಲ್ ವೃತ್ತ, ಬಸವೇಶ್ವರ ವೃತ್ತಕ್ಕೆ ಹೋಗಿ ಮುಂದೆ ಸಾಗಬಹುದು.[ಬೆಂಗಳೂರಿನಲ್ಲಿ ಮೇ 18ರಂದು 10K ಮ್ಯಾರಥಾನ್ ಏನು ವಿಶೇಷ?]
ಕೆ.ಆರ್.ವೃತ್ತದಿಂದ ಕಬ್ಬನ್‌ಪಾರ್ಕ್ ಒಳಗೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ವಾಹನಗಳು ನೃಪತುಂಗ ರಸ್ತೆ ಮೂಲಕ ಚಲಿಸಬಹುದು.
ಅನಿಲ್ ಕುಂಬ್ಳೆ ವೃತ್ತದಿಂದ ಬರುವ ವಾಹನಗಳು ಕ್ವೀನ್ಸ್ ವೃತ್ತದಲ್ಲಿ ಎಡಕ್ಕೆ ತಿರುಗಿ ಲ್ಯಾವೆಲ್ಲೆ ರಸ್ತೆ ಅಥವಾ ಕಸ್ತೂರ ಬಾ ರಸ್ತೆ ಮೂಲಕ ಮುಂದೆ ಸಾಗಬಹುದು.
ಜೆ.ಸಿ.ರಸ್ತೆಯಲ್ಲಿ ಮಿನರ್ವ ಸರ್ಕಲ್ ಕಡೆಯಿಂದ ಬಂದು ಶಿವಾಜಿನಗರ, ಎಂ.ಜಿ. ರಸ್ತೆ, ಹಲಸೂರು ಕಡೆಗೆ ಹೋಗುವ ಎಲ್ಲ ರೀತಿಯ ವಾಹನಗಳಿಗೆ ಜೆ.ಸಿ. ರಸ್ತೆ ಭಾರತ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು, ಎಚ್. ಸಿದ್ದಯ್ಯ ರಸ್ತೆ, ಊರ್ವಶಿ ಚಿತ್ರಮಂದಿರ ಜಂಕ್ಷನ್, ಕೆಂಗಲ್ ಹನುಮಂತಯ್ಯ ರಸ್ತೆ , ರಿಚ್ಮಂಡ್ ಸರ್ಕಲ್ ಮೂಲಕ ತೆರಳಬಹುದು.
ಹಳೆ ಮದ್ರಾಸ್ ರಸ್ತೆಯಿಂದ ನಗರ ಪ್ರವೇಶಿಸುವ ಸರಕು ಸಾಗಣೆ ಹಾಗೂ ಇನ್ನಿತರೆ ವಾಹನಗಳು ಸುರಂಜನ್ ದಾಸ್ ರಸ್ತೆ ಮೂಲಕ ವಿಮಾನ ನಿಲ್ದಾಣ ರಸ್ತೆಗೆ ಹೋಗಿ ಮುಂದೆ ಚಲಿಸಬಹುದು.












Click it and Unblock the Notifications