• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲವರ್ ಸ್ನೇಹಿತೆಯ ಬಾಯ್ ಫ್ರೆಂಡ್ ಬಳಿ ರಾಬರಿ ಮಾಡಿದ ಕಿರಾತಕರು !

|

ಬೆಂಗಳೂರು, ಮಾರ್ಚ್‌ 23: ಹಣದ ಮುಂದೆ ಸಂಬಂಧಗಳಿಗೆ ಬೆಲೆಯೇ ಇಲ್ಲ ಬಿಡಿ! ಅಂತದ್ದೊಂದು ಘಟನೆ ಬೆಂಗಳೂರಿನ ಭೈರವೇಶ್ವರ ನಗರದಲ್ಲಿ ನಡೆದಿದೆ. ಅಂದಹಾಗೆ ಲವರ್ ಸ್ನೇಹಿತೆ ನೀಡಿದ ಟಿಪ್ಸ್‌ನಿಂದ ಪಶ್ಚಿಮ ಬಂಗಾಳದ ಯುವಕನನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಮೂವರನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.

   ರಸ್ತೆಯಲ್ಲೇ ಜನರನ್ನ ಅಡ್ಡ ಹಾಕಿ ಹಣ, ಚಿನ್ನಾಭರಣ ದರೋಡೆ ಮಾಡ್ತಿದ್ದ ಗ್ಯಾಂಗ್‌ ಅರೆಸ್ಟ್ | Oneindia Kannada

   ಜಾಕೀರ್ ಹುಸೇನ್, ಶಾಬಾಜ್ ಖಾನ್, ಫಾಜಿಲ್ ಬಂಧಿತ ಅರೋಪಿಗಳು. ಬಂಧಿತರಿಂದ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸಪನ್ ಮಿಥ್ಯಾ, ಚಂದ್ರಾ ಬಡಾವಣೆ ಭೈರವೇಶ್ವರನಗರದಲ್ಲಿದ್ದ ಪ್ರೇಯಸಿ ನಯನಾ ಭೇಟಿ ಮಾಡಲಿಕ್ಕೆ ಫೆ. 13 ರಂದು ಬಂದಿದ್ದಾನೆ. ಚಿಕ್ಕಪೇಟೆ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವ ಈತ ಬರುವಾಗ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ನೆಕ್ಲೇಸ್ ತಂದಿದ್ದ. ಚುನಾವಣೆಗೆ ಹೋಗುವ ಮುನ್ನ ಭೇಟಿ ಮಾಡಲು ಬಂದಿದ್ದ. ಇದನ್ನು ಗಮನಿಸಿದ್ದ ನಯನಾ ಗೆಳತಿ ಮಾಯಿಯ ಪ್ರಿಯತಮ ಜಾಕೀರ್. ತನ್ನ ಇಬ್ಬರು ಸಹಚರರ ಜತೆಗೆ ಬಂದಿದ್ದ ಜಾಕೀರ್, ಮುಖಕ್ಕೆ ಮಾಸ್ಕ್ ಧರಿಸಿ ಸಪನ್‌ನನ್ನು ಅಡ್ಡ ಗಟ್ಟಿ ಹೆದರಿಸಿ ಚಿನ್ನಾಭರಣ ಕಸಿದುಕೊಂಡು ಪರಾರಿಯಾಗಿದ್ದಾರೆ.

   ತನ್ನ ಲವರ್ ಜಾಕಿರ್ ದರೋಡೆ ಮಾಡಿರುವ ಸಂಗತಿ ಗೊತ್ತಿರಲಿಲ್ಲ. ತನ್ನ ಸ್ನೇಹಿತೆ ನಯನಾ ಜತೆ ಹೋಗಿ ಪೊಲೀಸ್ ಠಾಣೆಗೆ ದೂರು ನೀಡುವಾಗಲೂ ಜತೆಗೆ ಇದ್ದಾಳೆ. ಸಿಸಿಟಿವಿ ಆಧರಿಸಿ ಆರೋಪಿ ಜಾಕೀರ್ ಮತ್ತು ಆತನ ಸಹಚರರನ್ನು ಬಂಧಿಸಿದಾಗ ಸಂಗತಿ ಹೊರಗೆ ಬಿದ್ದಿದೆ. ಸಪನ್ ಮಿಥ್ಯಾ ಪ್ರಿಯತಮೆ ನಯನಾ ಗೆಳತಿ ಮಾಯಿ ಬಾಯ್‌ ಫ್ರೆಂಡ್ ಜಾಕಿರ್ ಈ ಕೃತ್ಯ ಎಸಗಿರುವ ಸಂಗತಿ ಬೆಳಕಿಗೆ ಬಂದಿದೆ.

   English summary
   Chandra Layout police have arrested three accused in the robbery case know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X