ಅಂತಾರಾಷ್ಟ್ರೀಯ ಮಹಿಳಾ ದಿನದಂದು ಚಾಂದನಿ ಬಿಡುಗಡೆ

ಮೊಟ್ಟ ಮೊದಲ ಬಾರಿಗೆ ಮಹಿಳೆಯರದೇ ಸಾಹಿತ್ಯ, ಸಂಯೋಜನೆ, ಗಾಯನದಲ್ಲಿ ಮೂಡಿಬಂದ ಡಿವಿಡಿಯೊಂದು ಮಹಿಳಾ ದಿನಾಚರಣೆಯಂದು ಬಿಡುಗಡೆಯಾಗಲಿದೆ. ಈ ಡಿವಿಡಿ ಮಹಿಳಾಮಯವೆಂದರೆ ತಪ್ಪಿಲ್ಲ. ತೃತಿಯ ಲಿಂಗಿಯಾದ ಚಾಂದಿನಿ ಅವರ ಕವಿತೆಯನ್ನೂ ಈ ಡಿವಿಡಿಯಲ್ಲಿ ಬಳಸಿಕೊಳ್ಳಲಾಗಿದ್ದು, ಅವರ ಹೆಸರನ್ನೇ ಡಿವಿಡಿಗೂ ಇಡಲಾಗಿದೆ.

ಕಳೆದ ಎರಡು ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ತಲೆಯೆತ್ತಿದ ಬೆರಳೆಣಿಕೆಯ ಮಹಿಳೆಯರ ಮ್ಯೂಸಿಕ್ ಬ್ಯಾಂಡ್ ಗಳ ಹಿಂದಿರುವವರು ಇಂದೂ ವಿಶ್ವನಾಥ್. ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು ಈ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನದ ಹೊತ್ತಲ್ಲಿ ಮತ್ತೊಂದು ಉಡುಗೊರೆಯನ್ನು ನೀಡುತ್ತಿದ್ದಾರೆ.

Chandani a DVD is releasing on International Women's Day

ಮಹಿಳೆಯರೇ ತೊಡಗಿಸಿಕೊಂಡಿರುವ ಇಪ್ಪತ್ತೈದು ಭಾವಗೀತೆಗಳನ್ನು ಒಳಗೊಂಡಿರುವ ಈ ಡಿವಿಡಿ, ಕನ್ನಡ ಸುಗಮ ಸಂಗೀತ ಕ್ಷೇತ್ರದ ಮೊದಲ ಪ್ರಯತ್ನ. ಚಾಂದಿನಿ ಹೆಸರಿನ ಆಲ್ಬಮ್ ಅನ್ನು ಹೃಷಿ ಆಡಿಯೋ ಹೊರತರುತ್ತಿದೆ.

ಕನ್ನಡದ ಹಿರಿಯ ಹಾಗೂ ಹೊಸ ತಲೆಮಾರಿನ ಕವಯಿತ್ರಿಗಳ ಕವನಗಳೊಂದಿಗೆ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರಾದ ಕಮಲಾ ಹಂಪನಾ ಅವರ ಎಂಟು ಆಧುನಿಕ ವಚನಗಳೂ ಇದರಲ್ಲಿವೆ.

ಖ್ಯಾತ ಗಾಯಕಿಯರಾದ ಸಂಗೀತಾ ಕಟ್ಟಿ, ಅರ್ಚನಾ ಉಡುಪ, ನಾಗಚಂದ್ರಿಕಾ ಭಟ್ , ಕೆ ಎಸ್ ಸುರೇಖಾ ಮುಂತಾದವರು ಹಾಡಿದ್ದಾರೆ. ಇದೆಲ್ಲದರ ನಡುವೆ ಈ ಆಲ್ಬಂ ಸಿಡಿಯ ನಿರ್ಮಾಪಕರೂ ಮಹಿಳೆಯೇ. ಹರ್ಷಿ ಆಡಿಯೋ ಸಂಸ್ಥೆಯ ಮಾಲೀಕರಾದ ಹೇಮಾ ಅರುಣ್ ಸಿಂಗ್ ಅವರು ಈ ಸಿಡಿಯನ್ನು ಹೊರತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇಂದೂ ವಿಶ್ವನಾಥ್ ನೇತೃತ್ವದಲ್ಲಿ ರೂಪಗೊಂಡಿರುವ ಈ ಆಲ್ಬಮ್ ಅಂತಾರಾಷ್ಟ್ರೀಯ ಮಹಿಳಾ ದಿನದಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಇಂದು ವಿಶ್ವನಾಥ್, ಖ್ಯಾತ ಗಾಯಕಿ ಮೊ: 99164 82401
ಮಧ್ಯಮ ಸಂಪರ್ಕಕ್ಕಾಗಿ / ಅರುಣ್ ಕುಮಾರ್ ಹೆಚ್ ವಿ/ ಮೊ. 99453 50505

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+