ನೂತನ ಪೊಲೀಸ್ ಆಯುಕ್ತರಾಗಿ ಸಿ.ಎಚ್ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ
ಬೆಂಗಳೂರು, ಮೇ17: ಬೆಂಗಳೂರು ನಗರದ ಆಯುಕ್ತರಾಗಿ ಸಿ.ಎಚ್ ಪ್ರತಾಪ್ ರೆಡ್ಡಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿರ್ಗಮಿತ ಆಯುಕ್ತರಾದ ಕಮಲ್ ಪಂಥ್ ರವರು ಸಿ.ಎಚ್ ಪ್ರತಾಪ್ ರೆಡ್ಡಿಯವರಿಗೆ ಬ್ಯಾಟನ್ ಹಸ್ತಾಂತರಿಸುವ ಮೂಲಕ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ನೂತನ ಪೊಲೀಸ್ ಆಯುಕ್ತ ಸಿ.ಎಚ್ ಪ್ರತಾಪ್ ರೆಡ್ಡಿಯವರಿಗೆ ಶುಭವನ್ನು ಕೋರಿದರು. ಪ್ರತಾಪ್ ರೆಡ್ಡಿಯವರಿಗೆ ಶುಭವನ್ನು ಕೋರಲು ನಗರದ ಎಲ್ಲಾ ವಲಯದ ಡಿಸಿಪಿಗಳು ಖುದ್ದು ಹಾಜರಿದ್ದರು.
ನೂತನ ಪೊಲೀಸ್ ಆಯುಕ್ತರ ಸರ್ವಿಸ್ ಹಿಸ್ಟರಿ: ಸಿ ಹೆಚ್ ಪ್ರತಾಪ್ ರೆಡ್ಡಿಯವರು 35ನೇ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. 1991ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾದ ಸಿ. ಹೆಚ್ ಪ್ರತಾಪ್ ರೆಡ್ಡಿಯವರು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾಗಿದ್ದಾರೆ. ಮೊದಲು ಹಾಸನ ಜಿಲ್ಲೆಯಲ್ಲಿ ಹೆಚ್ಚುವರಿ ಎಸ್ಪಿಯಾಗಿ ರಾಜ್ಯದಲ್ಲಿ ಸೇವೆಯನ್ನು ಆರಂಭಿಸಿದ್ದರು. ಬಿಜಾಪುರ, ಕಲ್ಬುರ್ಗಿ, ಮಂಗಳೂರನಲ್ಲಿ ಎಸ್ಪಿಯಾಗಿಯೂ ಕರ್ತವ್ಯವನ್ನು ನಿರ್ವಹಿಸಿದ್ದ ಪ್ರತಾಪ್ ರೆಡ್ಡಿಯವರು ಸೈಬರ್ ವಿಚಾರದಲ್ಲಿ ತಜ್ಞರೆನಿಸಿಕೊಂಡಿದ್ದರು. ಇನ್ನಷ್ಟು ವಿವರ ಮುಂದಿದೆ..

ಸಿಬಿಐನಲ್ಲಿ ಎಸ್ಪಿಯಾಗಿಯೂ ಕೆಲಸವನ್ನು ನಿರ್ವಹಿಸಿದ್ದಾರೆ
ಆ ಬಳಿಕ ಕೇಂದ್ರ ಎರವಲು ಸೇವೆಗೆ ತೆರಳಿದ್ದ ಪ್ರತಾಪ್ ರೆಡ್ಡಿವರು ಸಿಬಿಐನಲ್ಲಿ ಎಸ್ಪಿಯಾಗಿಯೂ ಕೆಲಸವನ್ನು ನಿರ್ವಹಿಸಿದ್ದಾರೆ. ಮೂರು ವರ್ಷಗಳ ಕೇಂದ್ರ ಸೇವೆಯ ಬಳಿಕ ಬೆಂಗಳೂರು ನಗರ ಹೆಚ್ಚುವರಿ ಆಯುಕ್ತರಾಗಿ, ಪಶ್ಚಿವ ವಲಯದ ಐಜಿಪಿಯಾಗಿಯೂ ಕರ್ತವ್ಯವನ್ನು ನಿರ್ವಹಿಸಿದ್ದರು. ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಮತ್ತು ಕಾನೂನು ಸುವ್ಯವವಸ್ಥೆಯ ಎಡಿಜಿಪಿಯಾಗಿ ಸಾಕಷ್ಟು ಸಮರ್ಥವಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಇದೀಗ ಬೆಂಗಳೂರು ನಗರದ ಪೊಲೀಸ್ ಕಮೀಷನರ್ ಆಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.

ಸೈಬರ್ ಸೆಕ್ಯೂರಿಟಿ ವಿಂಗ್ ಸಲಹೆಗಾರ
ಬೆಂಗಳೂರು ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ ವೇರ್ ಆ್ಯಂಡ್ ಸರ್ವೀಸಸ್ ಕಂಪನೀಸ್ (ಸೈಬರ್ ಸೆಕ್ಯೂರಿಟಿ ವಿಂಗ್) ನಲ್ಲಿ ಸಲಹೆಗಾರರಾಗಿಯು ಸೇವೆಯನ್ನು ಸಲ್ಲಿಸಿದ್ದಾರೆ. ಸೈಬರ್ ಸೆಕ್ಯೂರಿಟಿ ಸೆಲ್ ನ ನಿರ್ದೇಶಕರಾಗಿಯು ಸೇವೆಯನ್ನು ಮಾಡಿದ್ದಾರೆ.ಹೀಗಾಗಿ ಪ್ರತಾಪ್ ರೆಡ್ಡಿಯವರಿಗೆ ಸೈಬರ್ ಕುರಿತಾದ ಹೆಚ್ಚು ಜ್ಞಾನವನ್ನು ಹೊಂದಿದ್ದಾರೆ.

ನಿರ್ಗಮಿತ ಆಯುಕ್ತ ಕಮಲ್ ಪಂಥ್ ಹೇಳಿದ್ದೇನು?
ಇನ್ನು ನಿರ್ಗಮಿತ ಪೊಲೀಸ್ ಕಮೀಷನರ್ ಕಮಲ್ ಪಂಥ್,''ಸರ್ಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ನನಗೆ 22 ತಿಂಗಳು ಸೇವೆಯನ್ನು ಮಾಡಲು ಅವಕಾಶವನ್ನು ನೀಡಿದಾರೆ. ಡಿಜಿಪಿಯಾಗಿ ಬಡ್ತಿಯಾದ ಬಳಿಕವು ಬೆಂಗಳೂರು ನಗರ ಆಯುಕ್ತರಾಗಿ ಕೆಲಸ ಮಾಡಲು ಅವಕಾಶ ನೀಡಿದ್ದರು. ಇದೀಗ ನೇಮಕಾತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲಿಯು ಉತ್ತಮ ಕಾರ್ಯವನ್ನು ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ನೂತನ ಪೊಲೀಸ್ ಆಯುಕ್ತರಾದ ಸಿ ಹೆಚ್ ಪ್ರತಾಪ್ ರೆಡ್ಡಿಯವರಿಗೆ ಶುಭವನ್ನು ಕೋರಿದರು.

ನೂತನ ಪೊಲೀಸ್ ಆಯುಕ್ತರಿಗೆ ಇರುವ ಸವಾಲುಗಳೇನು?
ನೂತನವಾಗಿ ಅಧಿಕಾರವನ್ನು ವಹಿಸಿಕೊಂಡರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರಿ ಬಿಬಿಎಂಪಿ ಚುನಾವಣೆ, ಚುನಾವಣೆ ವೇಳೆ ರೌಡಿಗಳ ನಿಯಂತ್ರಣ, ಡ್ರಗ್ಸ್ ದಂಧೆಗೆ ಕಡಿವಾಣ, ಸೈಬರ್ ಕ್ರೈಂ ಕಂಟ್ರೋಲಿಂಗ್ ಸೇರಿದಂತೆ ಹಲವಾರು ಸವಾಲುಗಳು ಎದುರಾಗಿದೆ. ಆಯುಕ್ತರು ಈ ಸವಾಲನ್ನು ಎದುರಿಸಲು ಸಜ್ಜಾಗಿದ್ದು ತಮ್ಮ ಆಡಳಿತದ ಮೂಲಕವೇ ಬೆಂಗಳೂರಿಗರಿಗೆ ಸಾಮರ್ಥ್ಯ ಋಜುವಾತು ಮಾಡಬೇಕಿದೆ.
-
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್











Click it and Unblock the Notifications