ಡಾನ್ ಸಂಸ್ಕೃತಿನಾ ಅಥವಾ ಡೆವೆಲಪ್‌ಮೆಂಟ್ ಸಂಸ್ಕೃತಿನಾ: ಅನಂತ್‌ಕುಮಾರ್
ಬೆಂಗಳೂರು, ಮೇ 03: ಚಿಕ್ಕಪೇಟೆಯಲ್ಲಿ ಪ್ರಚಾರ ಬಿಜೆಪಿ ಅಭ್ಯರ್ಥಿಪರ ಪ್ರಚಾರ ನಡೆಸಿದ ಕೇಂದ್ರ ಸಚಿವ ಅನಂತ್‌ಕುಮಾರ್ ಅವರು, ಚಿಕ್ಕಪೇಟೆಗೆ ಗೂಂಡಾ ಸಂಸ್ಕೃತಿ ಬೇಕಾ ಅಥವಾ ಅಭಿವೃದ್ಧಿ ಬೇಕಾ ಎಂದು ಪ್ರಶ್ನಿಸಿದರು.
ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ ಎಂದ ಕೇಂದ್ರ ಸಚಿವ ಅನಂತ್‌ಕುಮಾರ್ ಅವರು, ಬೆಂಗಳೂರಿಗೆ ಡಾನ್ ಸಂಸ್ಕೃತಿ ಬೇಕಾ ಅಥವಾ ಡೆವಲಪ್‌ಮೆಂಟ್ ಸಂಸ್ಕೃತಿ ಬೇಕಾ ಎಂದು ಮತದಾರರು ನಿರ್ಣಯಿಸಬೇಕು ಎಂದರು.
ಹಿಂದಿನ ಗೃಹ ಮಂತ್ರಿಗಳಾದ ಕೆ.ಜೆ.ಜಾರ್ಜ್ ಹಾಗೂ ರಾಮಲಿಂಗಾರೆಡ್ಡಿ ರೆಡ್ಡಿ ಆಡಳಿತದಲ್ಲಿ, ಮೊಹಮ್ಮದ್ ಹ್ಯಾರಿಸ್ ಪ್ರಕರಣದಿಂದ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ. ನಗರದಲ್ಲಿ ನಾಗರಿಕರು ವಿಶೇಷವಾಗಿ ಮಹಿಳೆಯರು ಆತಂಕದಿಂದ ಬದುಕುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.

ನಮಗೆ ಸಜ್ಜನ ರಾಜಕಾರಣಿಗಳು ಬೇಕಾಗಿದೆ. ಬೆಂಗಳೂರನ್ನು ಶೋಷಿಸದೆ ಇರುವ ಜನಪ್ರತಿನಿಧಿಗಳು ಬೇಕಾಗಿದೆ ಸುಂದರ ಸ್ವಚ್ಚ ಹಾಗೂ ಶಾಂತಿಯುತ ಬೆಂಗಳೂರು ನಿರ್ಮಾಣ ಮಾಡಬೇಕಾಗಿದೆ ಎಂದರು.












Click it and Unblock the Notifications