DA Hike: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್! ತುಟ್ಟಿಭತ್ಯೆ 3% ಹೆಚ್ಚಳ, ವೇತನ ಏರಿಕೆ
ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ದೀಪಾವಳಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ನೌಕರರ 'ತುಟ್ಟಿಭತ್ಯೆ'ಯನ್ನು ಏರಿಕೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇದು ಜುಲೈ ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ನೌಕರರ ಮೂಲ ವೇತನದಲ್ಲೂ ಹೆಚ್ಚಳವಾಗಲಿದೆ.
ಪ್ರತಿ ವರ್ಷದಂತೆ ಜನವರಿಯಿಂದ ಈ ಹಿಂದೆ ತುಟ್ಟಿಭತ್ಯೆ ಹೆಚ್ಚಿಸಲಾಗಿತ್ತು. ಇದೀಗ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗುವಂತೆ ಶೇ.3ರಷ್ಟು ತುಟ್ಟಿಭತ್ಯೆ (Dearness Allowence) ಏರಿಕೆ ಮಾಡಿದೆ. ಇದರಿಂದ ನೌಕರರ ತುಟ್ಟಿಭತ್ಯೆ (DA) ಪ್ರಮಾಣವು 60% ರಿಂದ 63ಕ್ಕೆ ಏರಿಕೆ ಆಗಿದೆ.

ಈ ಏರಿಕೆಯು 7ನೇ ವೇತನ ಆಯೊಗದ (7th Pay Commission) ಅಡಿಯಲ್ಲಿ ತುಟ್ಟಿ ಭತ್ಯೆ ಹೆಚ್ಚಿಸಲಾಗಿದೆ. ಈ ಏರಿಕೆ ಆರ್ಥಿಕ ಸೌಲಭ್ಯವು ಕೇಂದ್ರದ ಸುಮಾರು 48 ಲಕ್ಷ ನೌಕರರಿಗೆ ಹಾಗೂ 68 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ ಒದಗಿಸುತ್ತದೆ. ಈ ಹೆಚ್ಚಳದಿಂದ ರಾಷ್ಟ್ರೀಯ ಖಜಾನೆ ಮೇಲೆ 10,016 ಕೋಟಿ ರೂಪಾಯಿ ಸಂಚಿತ ಆರ್ಥಿಕ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.
ಪ್ರತಿ ವರ್ಷ 2 ಬಾರಿ ಡಿಎ ಹೆಚ್ಚಳ
ಅರ್ಹ ನೌಕರರು ಹಾಗೂ ಪಿಂಚಣಿದಾರರಿಗೆ ಈ ಏರಿಕೆಯು ಇಂದಿನ ಹಣದುಬ್ಬರದ ಸನ್ನಿವೇಶದಲ್ಲಿ ಆರ್ಥಿಕ ಸ್ಥಿತಿಗತಿ ಎದುರಿಸಲು ಸಹಾಯ ಮಾಡುತ್ತದೆ. ಪ್ರತಿ ವರ್ಷ ಜನವರಿ 1 ರಿಂದ ಹಾಗೂ ಜುಲೈ 1 ರಿಂದ ಅನ್ವಯವಾಗುವಂತೆ ಎರಡು ಬಾರಿ ತುಟ್ಟಿಭತ್ಯೆಯನ್ನು ಹೆಚ್ಚಿಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಅಂದರೆ ಇದೇ ವರ್ಷ 2026ರ ಏಪ್ರಿಲ್‌ನಲ್ಲಿ 3%ರಷ್ಟು ತುಟ್ಟಿಭತ್ಯ ಏರಿಕೆ ಮಾಡಿ, ಅದನ್ನು ಜ.1ರಿಂದ ಜಾರಿಗೆ ಬರುವಂತೆ ಅನುಮೋದನೆ ನೀಡಲಾಗಿತ್ತು.
ಮೂರು ತಿಂಗಳ ಡಿಎ ಬಾಕಿ ಜಮೆ
ಪ್ರಸ್ತುತ ಹೆಚ್ಚಳ ಜಾರಿ ಆದೇಶದನ್ವಯ ನೌಕರರು ಮತ್ತು ಪಿಂಚಣಿದಾರರಿಗೆ ಕಳೆದ ಜುಲೈ, ಆಗಸ್ಟ್, ಸೆಪ್ಟಂಬರ್ ತಿಂಗಳ ಭತ್ಯ ಏರಿಕೆಯೊಂದಿಗೆ ಅವರ ಖಾತೆ ಜಮೆ ಆಗಲಿದೆ. ತುಟ್ಟಿಭತ್ಯ ಹೆಚ್ಚಾಗುತ್ತಿದ್ದಂತೆ ಅದರೊಂದಿಗೆ ಸಾರಿಗೆ, ಮನೆ ಬಾಡಿಗೆ ಭತ್ಯೆಗಳು ಸಹಜವಾಗಿ ಹೆಚ್ಚಾಗಲಿವೆ.


Click it and Unblock the Notifications
