ಕೋರಮಂಗಲ ಬಿಬಿಕ್ಯು ಲಾಂಜ್ ನಲ್ಲಿ ಯುಗಾದಿ ಭೋಜನ

ಬೆಂಗಳೂರು, ಮಾ.19: ಈ ಹೊಸ ವರ್ಷದ ಮನ್ಮಥ ನಾಮ ಸಂವತ್ಸವರವನ್ನು ತೆರೆದ ತೋಳುಗಳಿಂದ ಸ್ವಾಗತಿಸೋಣ ಬನ್ನಿ. ಯುಗಾದಿ ಹಬ್ಬವು ಭರ್ಜರಿ ಸಂಭ್ರಮದ, ಅದ್ಭುತ ಊಟದ ಹಾಗೂ ಉತ್ತಮ ಮನರಂಜನೆಯ ಹಬ್ಬ. ಈ ಯುಗಾದಿಯಂದು, ಅಂದರೆ ಮಾರ್ಚ್ 20, 2015ರಂದು ಕೋರಮಂಗಲದಲ್ಲಿರುವ 100 ಫೀಟ್ ಬಿಬಿಕ್ಯೂ ಲಾಂಜ್ ನಲ್ಲಿ ವಿಭಿನ್ನ ರೀತಿಯಲ್ಲಿ ಹಿಂದೂ ಹೊಸ ವರ್ಷವನ್ನು ಆಚರಿಸಲಾಗುತ್ತಿದೆ.

ಅಂತರ್ ಸಂಸ್ಕೃತಿಯಲ್ಲಿ ಏಕತೆಯನ್ನು ತರುವ ಪ್ರಯತ್ನವಾಗಿ 100 ಫೀಟ್ ಬಿಬಿಕ್ಯೂ ಲಾಂಜ್ 3 ಪ್ರಮುಖ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಭೋಜನದ ನಡುವೆ ಡಿಜೆ ನುಡಿಸುವ ಕನ್ನಡ ಮತ್ತು ಹಿಂದಿ ಸುಮಧುರ ಟ್ಯೂನ್ ಗಳಿರುತ್ತವೆ. ಇದಕ್ಕೆ ಹೆಜ್ಜೆ ಹಾಕುವ ಪ್ರಯತ್ನವನ್ನೂ ಮಾಡಬಹುದು. ಈ ಟ್ರ್ಯಾಕ್ ಗಳ ಹಾಡನ್ನು ಗುನುಗುನಿಸುವ ಜತೆಗೆ ಸಾಧ್ಯವಾದರೆ ಹೆಜ್ಜೆಯನ್ನೂ ಹಾಕಬಹುದು. ಸಂಗೀತಗಾರರು ಪ್ರತ್ಯಕ್ಷವಾಗಿ ಕನ್ನಡ ಹಾಡುಗಳನ್ನು ನುಡಿಸುವ ಕಾರ್ಯವೂ ಕೂಡಾ ಪ್ರಮುಖ ಆಕರ್ಷಣೆಯಾಗಿರುತ್ತದೆ.

Celebrate Ugadi with a new year Eve party – BBQ Lounge

ನೇರವಾಗಿ ನಿಮ್ಮ ಫೇವರಿಟ್ ಹಾಡುಗಳನ್ನು ಆಲಿಸುವುದು ಒಂದು ಅದ್ಭುತವಾದ ಅನುಭವವಾಗಿರುತ್ತದೆ. ಯಾರಿಗೆ ಗೊತ್ತು! ಪ್ರೇಕ್ಷಕರ ಬೇಡಿಕೆಗೆ ತಕ್ಕಂತೆ ಹಾಡುಗಳನ್ನೂ ಹಾಡಬಹುದು. ಅಷ್ಟೇ ಅಲ್ಲ, ಆ ದಿನ 100 ಫೀಟ್ ಬಿಬಿಕ್ಯೂ ಲಾಂಜ್ ನಲ್ಲಿ ಊಟ ಮಾಡುವವರು ಸಾಲ್ಸಾ ಹಾಗೂ ಯಕ್ಷಗಾನ ಸ್ಪರ್ಧೆಗಳಿಗೆ ಸಾಕ್ಷಿಯಾಗಬಹುದು.

ಯಕ್ಷಗಾನವು ಕರ್ನಾಟಕದ ಭಿನ್ನ ಸಂಸ್ಕೃತಿ ಪರಂಪರೆಗೆ ಪರಿಪೂರ್ಣ ಉದಾಹರಣೆಯಾಗಿದೆ. ವರ್ಣರಂಜಿತ ವೇಷಭೂಷಣಗಳು, ಅರ್ಥಪೂರ್ಣ ಮಾತುಗಾರಿಕೆ ಹಾಗೂ ಮನಮೋಹಕ ನೃತ್ಯ ಒಟ್ಟಾಗಿ ದೃಶ್ಯದ ಹಬ್ಬವೇ ಆಗಿರುತ್ತದೆ. ಇದು ಸಾಲ್ಸಾ ನೃತ್ಯಕ್ಕೆ ಆಸಕ್ತಿಕರವಾದ ಎದುರಾಳಿಯಾಗಿದೆ. ಸಾಲ್ಸಾದಲ್ಲಿ ನೃತ್ಯಗಾರರ ನಡುವಿನ ಲಯ ಹಾಗೂ ಹೊಂದಾಣಿಕೆಯೇ ಪ್ರಮುಖವಾದುದು.

Celebrate Ugadi with a new year Eve party – BBQ Lounge

ಖಂಡಿತಾ, ಈ ಎಲ್ಲಾ ಮನರಂಜನೆಯ ಮಧ್ಯೆ, ಸಾಂಪ್ರದಾಯಿಕವಾದ ಕೆಲವು ಅದ್ಭುತ ಆಹಾರಗಳೂ ಇವೆ. ಮೆನುವಿನಲ್ಲಿ ಒಬ್ಬಟ್ಟು, ಕೋಸಂಬರಿ ಮತ್ತು ಮಾವಿನ ಕಾಯಿ ಚಿತ್ರಾನ್ನ ಸೇರಿಕೊಂಡಿದೆ. ಬೇವು-ಬೆಲ್ಲ ಕೂಡಾ ನೀವು ಇಲ್ಲಿ ಮೆಲ್ಲಬಹುದಾಗಿದೆ.

ಇಷ್ಟೆಲ್ಲವೂ ಪ್ರತಿ ವ್ಯಕ್ತಿಗೆ ಕೇವಲ ರು.999 ರೂ.ಗೆ ಲಭ್ಯ ಇದೆ. "ಯುಗಾದಿಯು ಕುಟುಂಬದವರ ಜತೆ ಸೇರಿಕೊಂಡು ಸಂಭ್ರಮಿಸುವ ಹಬ್ಬವಾಗಿದೆ. ನಮ್ಮಲ್ಲಿ ಭೋಜನ ಸವಿಯುವವರಿಗೆ ಕುಟುಂಬದೊಡನೆ ಖುಷಿಯಾಗಿರಲು ವಿಶಿಷ್ಟ ಅನುಭವ ಒದಗಿಸಲು ಬಯಸಿದ್ದೆವು. ಈ ಸಾಂಸ್ಕೃತಿಕ ಸಮ್ಮಿಶ್ರಣವು ಹೊಸ ವರ್ಷದ ಸ್ವಾಗತಕ್ಕೆ ಹಾಗೂ ಸಾಂಸ್ಕೃತಿಕ ಏಕತೆಯನ್ನು ಖುಷಿಪಡಲು ಒಂದು ಪರಿಪೂರ್ಣವಾದ ವಿಧಾನವಾಗಿದೆ ಎಂದು ನಾವು ನಂಬಿದ್ದೇವೆ,'' ಎಂದು ಡಿ ಒರಿಯೆಲ್ ಹೊಟೇಲ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಸಿ.ಮುರಳಿ ಕೃಷ್ಣ ಹೇಳುತ್ತಾರೆ. (ಒನ್ಇಂಡಿಯಾ ಕನ್ನಡ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+