ಎಸ್ಐಟಿ ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ

ಬೆಂಗಳೂರು, ಮಾರ್ಚ್‌ 29: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್ಐಟಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಹುಡುಗಿಯ ಜತೆಗಿನ ಸಂಪರ್ಕ, ಹಾಗೂ ಮಾತುಕತೆ ಕುರಿತು ಜಾರಕಿಹೊಳಿಯನ್ನು ಪ್ರಶ್ನೆಗಳ ಮೇಲೆ ಪ್ರಶ್ನೆ ಮುಂದಿಟ್ಟಿದ್ದಾರೆ. ಹಲವು ಸಾಕ್ಷಾಧಾರಗಳ ಸಮೇತ ರಮೇಶ್ ಜಾರಕಿಹೊಳಿ ಉತ್ತರ ನೀಡಿದ್ದಾರೆ. ಆದರೆ ಎಸ್ಐಟಿಯ ಕೆಲವು ಪ್ರಶ್ನೆಗಳಿಗೆ ನನಗೆ ಗೊತ್ತಿಲ್ಲ ಎಂಬ ಉತ್ತರ ನೀಡಿದ್ದಾರೆ.

ಸಿಡಿ ಕೇಸ್ ತಾರ್ಕಿಕ ಅಂತ್ಯಕ್ಕೆ ಬಂದು ತಲುಪಿದೆ. ಒಂದಡೆ ಸಿಡಿಲೇಡಿ ನ್ಯಾಯಾಲಯದ ಮುಂದೆ ಹಾಜರಾಗಿ ಸಿಆರ್ ಪಿಸಿ ಸೆಕ್ಷನ್ 164 ಅಡಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಇಂದು ಮಧ್ಯಾಹ್ನ ಯುವತಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ನೋಟಿಸ್ ಹಿನ್ನೆಲೆಯಲ್ಲಿ ಬೆಳಗಾವಿಯ ಸಾಹುಕಾರ್ ಬೆಳಗ್ಗೆ ಹತ್ತು ಗಂಟೆಗೆ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಂಟರ್‌ನಲ್ಲಿ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಮುಂದಿಟ್ಟು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಎಸ್ಐಟಿ ಕೇಳಿರುವ ಪ್ರಶ್ನೆಗಳಿಗೆ ರಮೇಶ್ ಜಾರಕಿಹೊಳಿ ಗಾಬರಿಯಾಗಿದ್ದಾರೆ. ಸಂತ್ರಸ್ತೆ ಎನ್ನಲಾದ ಯುವತಿ ನಿಮಗೆ ಮೊದಲು ಪರಿಚಯವಿದ್ದರೇ ? ಆಕೆಯ ಜತೆ ನೀವು ಇದಿದ್ದು ನಿಜವೇ ? ನಕಲಿ ಸಿಡಿ ಎಂದು ಯಾವ ಆಧಾರದ ಮೇಲೆ ಹೇಳುತ್ತೀರೀ? ಎಂಬ ಪ್ರಶ್ನೆಗಳನ್ನು ಜಾರಕಿಹೊಳಿ ಮುಂದಿಟ್ಟಿದ್ದಾರೆ. ಇದಕ್ಕೆ ತಬ್ಬಿಬ್ಬಾದ ರಮೇಶ್ ಜಾರಕಿಹೊಳಿ, ನನ್ನನ್ನು ಬ್ಲಾಕ್ ಮೇಲ್ ಮಾಡಿದ್ದಾರೆ. ಮೊದಲು ನಾನು ದಾಖಲಿಸಿರುವ ಪ್ರಕರಣ ಕುರಿತು ತನಿಖೆ ನಡೆಸಿ ಎಂದು ಮನವಿ ಮಾಡಿದ್ದಾರೆ.

CD row: SIT officers drill former minister Ramesh Jarkiholi

ತನಿಖಾಧಿಕಾರಿ :- ಯುವತಿ ಯಾವಾಗಿನಿಂದ ಪರಿಚಯ..?

ಜಾರಕಿಹೊಳಿ:- ನನಗೆ ಯುವತಿಯ ಪರಿಚಯವಿಲ್ಲ.

ತನಿಖಾಧಿಕಾರಿ:- ಮತ್ತೆ ಯುವತಿಗೆ ಕೆಲಸದ ಭರವಸೆ ನೀಡಿದ್ದು ಸುಳ್ಳಾ?

ಜಾರಕಿಹೊಳಿ:- ಪರಿಚಯವೇ ಇಲ್ಲ ಎಂದ ಮೇಲೆ ಕೆಲಸ ಎಲ್ಲಿಂದ ಬಂತು

ತನಿಖಾಧಿಕಾರಿ:- ಹಾಗಿದ್ರೆ ಯುವತಿಯ ಜೊತೆ ವಿಡಿಯೋ ಕಾಲ್‌ ಮಾಡಿ ಮಾತನಾಡಿದ್ದು ಸುಳ್ಳಾ..?

ಜಾರಕಿಹೊಳಿ:- ಅದು ಎಡಿಟೆಡ್ ವಿಡಿಯೋ .

ತನಿಖಾಧಿಕಾರಿ:- ನೀವು ಕಾಲ್ ಮಾಡದೇ ಮಾತನಾಡದೇ ವಿಡಿಯೋ ಹೇಗೆ ಹೊರಗೆ ಹರಿದಾಡಲು ಸಾಧ್ಯ..? ವಿಡಿಯೋ ಕಾಲ್‌ನಲ್ಲಿ ನಿಮ್ಮ ಧ್ವನಿ ಸ್ಪಷ್ಟವಾಗಿ ಇದೆ ಮತ್ತೆ..?

ಜಾರಕಿಹೊಳಿ:- ಇಲ್ಲ ಅದು ಎಡಿಟೇಡ್ ವಿಡಿಯೋ

ತನಿಖಾಧಿಕಾರಿ:- ಯುವತಿಯನ್ನು ಎಷ್ಟು ಬಾರಿ ಭೇಟಿ ಮಾಡಿದ್ದಿರಿ?

ಜಾರಕಿಹೊಳಿ:- ನನಗೆ ಯುವತಿಯ ಪರಿಚಯವೇ ಇಲ್ಲ.

ತನಿಖಾಧಿಕಾರಿ:- ಮತ್ತೆ ಯುವತಿ ಕರೆ ಮಾಡಿದ್ದಾಗ ಕೆಲಸ ಕೊಡಿಸುವ ಭರವಸೆ ನೀಡಿದ್ದಿರಿ ಎಂದು ಆರೋಪಿಸಿದ್ದಾಳೆ ಏನು ಹೇಳ್ತಿರಿ

ಜಾರಕಿಹೊಳಿ:- ನಾನು ಅದನ್ನು ನಮ್ಮ ಲಾಯರ್ ಹತ್ರ ಚರ್ಚಿಸಿ ಉತ್ತರಿಸುವೆ

ತನಿಖಾಧಿಕಾರಿ:- ಉದ್ಯೋಗ ಕೊಡಿಸುವ ನೆಪ ಹೇಳಿ ನನ್ನ ಸುಮಾರು ಐದಾರು ಬಾರಿ ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದಿದ್ದಾಳೆ ನಿಜ ಹೇಳಿ ?

ಜಾರಕಿಹೊಳಿ:- ಅವೆಲ್ಲಾ ಸುಳ್ಳು ಅರೋಪ ನಾನು ಇವನ್ನೆಲ್ಲಾ ನನ್ನ ಲೀಗಲ್ ಅಡ್ವೈಸರ್ ಜೊತೆ ಮಾತನಾಡಿ ಉತ್ತರಿಸುವೆ

ತನಿಖಾಧಿಕಾರಿ:- ಯುವತಿ ನಿಮ್ಮನ್ನು ಹನಿಟ್ರ್ಯಾಪ್ ಮಾಡಿದ್ದಾಳಾ?

ಜಾರಕಿಹೊಳಿ:- ಗೊತ್ತಿಲ್ಲ , ಇದಕ್ಕೆ ನಾನು ಏನನ್ನು ಹೆಳುವುದಿಲ್ಲ

ತನಿಖಾಧಿಕಾರಿ ಕೇಳಿದ ಕೆಲ ಪ್ರಶ್ನೆಗಳಿಗೆ ಲೀಗಲ್ ಅಡ್ವೈಜರ್ ಜೊತೆ ಚರ್ಚಿಸಿ ಉತ್ತರ ನೀಡುವೇ ಎಂದಿರುವ ಜಾರಕಿಹೊಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+