ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋಮೋ ಎಕ್ಸ್ ಕಂಪನಿಯಲ್ಲಿ ಹೂಡಿಕೆ ಸೋಗಿನಲ್ಲಿ ದೋಖಾ: ಸಿಸಿಬಿ ಪೊಲೀಸರಿಂದ ಮೂವರ ಸೆರೆ

|
Google Oneindia Kannada News

ಬೆಂಗಳೂರು, ನ. 07: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಮಾಸಿಕ 20 ರಷ್ಟು ಲಾಭ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ ಮೂವರು ಕ್ಟಿಪ್ಟೋ ಕರೆನ್ಸಿ ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಎಚ್‌ಎಸ್ಆರ್ ಲೇಔಟ್ ನಿವಾಸಿ ರಾಘವೇಂದ್ರ, ಶಿವಮೂರ್ತಿ, ನಾಗರಾಜ್ ಬಂಧಿತ ಆರೋಪಿಗಳು. ಚೈನ್ ಲಿಂಕ್ ಸ್ಕೀಮ್ ಅಡಿಯಲ್ಲಿ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದರು. ಇವರ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

ಪೋಮೋ ಎಕ್ಸ್ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿ ಮೂಲಕ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಗಳಿಸಬಹುದು ಎಂದು ಸಾರ್ವಜನಿಕರನ್ನು ನಂಬಿಸಿದ್ದರು. ಈ ಕುರಿತು ಯಲಹಂಕದ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿ ಕಾರ್ಯಕ್ರಮ ಆಯೋಜಿಸಿ ಅದರಲ್ಲಿ ಪಾಲ್ಗೊಂಡವರಿಗೆ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ಪ್ರೇರಪಣೆ ಮಾಡಿದ್ದರು. ಅಲ್ಲದೇ ಒಮ್ಮೆ ಹೂಡಿಕೆ ಮಾಡಿದವರು, ಇತರರಿಂದ ಹೂಡಿಕೆ ಮಾಡಿಸಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿದ್ದರು.

CCB Police have arrested three cryptocurrency fraudsters, who allegedly defrauded the public

ಫೊಮೋ ಎಕ್ಸ್ ಕಂಪನಿಯಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಸಾರ್ವಜನಿಕರಿಗೆ ಲಾಭದ ಲೆಕ್ಕ ಕೂಡ ನೀಡಿದ್ದರು. ನೂರು ಡಾಲರ್ ಹೂಡಿಕೆ ಮಾಡಿಸಿದರೆ, ಮಾಸಿಕ ಶೇ. 10 ರಷ್ಟು ಲಾಭ, 300 ಡಾಲರ್ ಹೂಡಿಕೆ ಮಾಡಿಸಿದರೆ ಮಾಸಿಕ 11 ರಷ್ಟು ಲಾಭ, 500 ಡಾಲರ್ ಹೂಡಿಕೆ ಮಾಡಿ ಕ್ರಿಪ್ಟೋ ಕರೆನ್ಸಿ ಖರೀದಿಸಿದರೆ ಮಾಸಿಕ 12 ಪರ್ಸೆಂಟ್ ಲಾಭ, ಒಂದು ಸಾವಿರ ಡಾಲರ್ ಹೂಡಿಕೆ ಮಾಡಿಸಿದರೆ, ಶೇ. 13 ರಷ್ಟು ಲಾಭಾಂಶ ಬರಲಿದೆ ಎಂದು ನಂಬಿಸಿದ್ದರು. ಶಿವಮೂರ್ತಿ, ರಾಘವೇಂದ್ರ ಮಾತು ನಂಬಿ ಅನೇಕರು ಹೂಡಿಕೆ ಮಾಡಿದ್ದರು.

ಮೂವರು ತ್ರಿಮೂರ್ತಿಗಳು ಈ ಹಿಂದೆ ಇ ಒರಾಕಲ್ ಎಂಬ ಕಂಪನಿ ಹೆಸರಿನಲ್ಲಿ ಹೂಡಿಕೆ ಮಾಡಿಸಿದ್ದರು. ಚೈನ್ ಲಿಂಕ್ ಪ್ಲಾನ್ ಪ್ರಕಾರ ಅತ್ಯಲ್ಪ ಕಾಲದಲ್ಲಿ ಹೂಡಿಕೆ ಮಾಡಿಸಿ ಮೋಸ ಮಾಡಿದ್ದರು. ಇದೀಗ ಫೋಮೋ ಎಕ್ಸ್ ಕಂಪನಿ ಹೆಸರಿನಲ್ಲಿ ಹೂಡಿಕೆ ಪ್ಲಾನ್ ಕೊಟ್ಟು ನಾಮ ಹಾಕಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹೋಟೆಲ್ ನಲ್ಲಿ ಐಶರಾಮಿ ಪಾರ್ಟಿ ಕೊಟ್ಟು ಜನರನ್ನು ನಂಬಿಸಿದ್ದ ವಂಚಕರು, ಒಂದು ವರ್ಷದಲ್ಲಿ ಶ್ರೀಮಂತರಾಗುವ ಬಗ್ಗೆ ಆಸೆ ಹುಟ್ಟಿಸಿದ್ದರು. ರಾಘವೇಂದ್ರ, ಶಿವಮೂರ್ತಿ ವಂಚನೆ ಮಾಡಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್ ಖಾತೆಗಳು ಜಪ್ತಿ: ಫೋಮೋ ಎಕ್ಸ್ ಕಂಪನಿ ಹೆಸರಿನಲ್ಲಿ ಹೂಡಿಕೆ ಮಾಡಿಸಿಕೊಂಡಿರುವ ಸಂಬಂಧ ಕೆಲವು ಬ್ಯಾಂಕ್ ವಹಿವಾಟಿನ ದಾಖಲೆಗನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆ ಬಳಿಕ ವಂಚನೆ ಮಾಡಿರುವ ಮೊತ್ತ ಗೊತ್ತಾಗಲಿದೆ. ಇದಕ್ಕಿಂತಲೂ ಮೊದಲು ಬಿ ಒರಾಕಲ್ ಹೆಸರಿನಲ್ಲಿ ಮೋಸ ಮಾಡಿದ್ದರು. ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

CCB Police have arrested three cryptocurrency fraudsters, who allegedly defrauded the public

ಚೈನ್ ಲಿಂಕ್ ವಂಚನೆ: ಮೋಸ ಹೋಗುವರು ಇರುವ ವರೆಗೂ ಮೋಸ ಮಾಡುವರು ಸಮಾಜದಲ್ಲಿ ಇದ್ದೇ ಇರುತ್ತಾರೆ. ಸುಲಭವಾಗಿ ಹಣ ಗಳಿಸುವ ಯಾವ ಮಾರ್ಗಗಳು ಇರುವುದಿಲ್ಲ. ಹೂಡಿಕೆ ಮಾಡಿದರೆ ಸುಲಭವಾಗಿ ಹಣ ದುಡಿಯುವ ಆಸೆ ಹುಟ್ಟಿಸಿ ಸಾರ್ವಜನಿಕರನ್ನು ವಂಚನೆ ಮಾಡಲಾಗುತ್ತಿದೆ. ದೇಶದಲ್ಲಿ ಚೈನ್ ಲಿಂಕ್ ವಹಿವಾಟು ನಡೆಸುವುದು ಕಾನೂನು ಅಪರಾಧ. ಈ ಕುರಿತು ಸೆಬಿ ಕಾಲ ಕಾಲಕ್ಕೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಲೇ ಇದೆ. ಆದರೂ ಸುಲಭವಾಗಿ ಹಣ ಮಾಡುವ ಆಸೆಗೆ ಬಿದ್ದು ಸಾರ್ವಜನಿಕರು ಮೋಸ ಹೋಗುತ್ತಿದ್ದಾರೆ. ಅಂಬಿಡೆಂಟ್, ಗುರುಟೀಕ್, ಅಗ್ರಿಗೋಲ್ಡ್, ಐಎಂಎ, ಜಿಕೆ ಡ್ರೀಮ್ಸ್, ರಾಜ್ಯದಲ್ಲಿ ಸುಮಾರು 40 ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಒಮ್ಮೆ ಹೂಡಿಕೆ ಮಾಡಿದ ಹಣ ಕೈ ತಪ್ಪಿದರೆ ವಾಪಸು ಬರುವುದಿಲ್ಲ ಎಂಬ ಸಣ್ಣ ಅರಿವು ಜನರಿಗೆ ಇರಲ್ಲ. ಯಾವುದೇ ಕಾರಣಕ್ಕೂ ಹೆಚ್ಚು ಲಾಭ ಕೊಡುವ ಆಸೆ ತೋರಿಸುವ ಭೋಗಸ್ ಕಂಪನಿಗಳ ಮೇಲೆ ಹೂಡಿಕೆ ಮಾಡಬಾರದು. ಕಷ್ಟ ಪಟ್ಟು ಸಂಪಾದನೆ ಮಾಡಿದ ಹಣವನ್ನು ಕಳೆದುಕೊಳ್ಳದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ತಜ್ಞ ನಾ. ವಿಜಯಶಂಕರ್ ತಿಳಿಸಿದ್ದಾರೆ.

English summary
CCB Police have arrested three cryptocurrency fraudsters, who allegedly invested and defrauded the public know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X