ಬೆಂಗಳೂರಿನ 107 ಬಾರ್ & ರೆಸ್ಟೋರೆಂಟ್, ಪಬ್ ಲೈಸೆನ್ಸ್ ರದ್ದು

ಬೆಂಗಳೂರು, ಆಗಸ್ಟ್ 30 : ಬೆಂಗಳೂರು ನಗರದ 107 ಬಾರ್ & ರೆಸ್ಟೋರೆಂಟ್‌ ಮತ್ತು ಪಬ್‌ಗಳ ಪರವಾನಗಿ ರದ್ದುಪಡಿಸಲಾಗಿದೆ. ಈ ಪಬ್‌ಗಳಲ್ಲಿ ಡ್ಯಾನ್ಸ್ ಸೇರಿದಂತೆ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

'ಸಾರ್ವಜನಿಕ ಮನರಂಜನೆ ಸ್ಥಳದ ನಿಯಂತ್ರಣ ಮತ್ತು ಪರವಾನಗಿ (ಬೆಂಗಳೂರು ನಗರ)' ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಸಿಸಿಬಿ ಪೊಲೀಸರು ಪರವಾನಗಿ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.

ಬಾರ್ & ರೆಸ್ಟೋರೆಂಟ್‌ ಮತ್ತು ಪಬ್‌ ಮಾಲೀಕರಿಗೆ ನೋಟಿಸ್ ನೀಡಿರುವ ಪೊಲೀಸರು ಮೂಲ ಸೇವೆಯನ್ನು ಹೊರತುಪಡಿಸಿ ಸಾರ್ವಜನಿಕರ ಮನರಂಜನೆಗಾಗಿ ಅಥವ ಬೇರೆ ಯಾವುದೇ ಉದ್ದೇಶಕ್ಕೆ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಬಾರದು ಎಂದು ಸೂಚನೆ ಕೊಟ್ಟಿದೆ.

CCB Police Cancelled License Of 107 Bar & Restaurant

ಪರವಾನಗಿ ನವೀಕರಣ ಕೋರಿ ಬಾರ್ & ರೆಸ್ಟೋರೆಂಟ್‌ ಮತ್ತು ಪಬ್‌ಗಳ ಮಾಲೀಕರು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಪೈಕಿ 107 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅವುಗಳಿಗೆ ನೀಡಿದ್ದ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.

ಗಸ್ತು ಹೆಚ್ಚಳ : ಬಾರ್ & ರೆಸ್ಟೋರೆಂಟ್‌ ಮತ್ತು ಪಬ್‌ಗಳ ಪರವಾನಗಿ ರದ್ದುಪಡಿಸಲಾಗಿದೆ ಆದರೂ ಸಹ ಅವುಗಳು ಮನರಂಜನಾ ಚಟುವಟಿಕೆ ಆಯೋಜನೆ ಮಾಡುವುದನ್ನು ತಡೆಯಲು ಪೊಲೀಸರ ಗಸ್ತು ಹೆಚ್ಚಳ ಮಾಡಲಾಗುತ್ತದೆ.

ಎಂ. ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾ ನಗರ, ಕೋರಮಂಗಲದಲ್ಲಿ ಗಸ್ತನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+