ಅಂತಾರಾಷ್ಟ್ರೀಯ ಕರೆ ಪರಿವರ್ತಿಸುತ್ತಿದ್ದ ಗ್ಯಾಂಕ್ ಬಂಧನ
ಬೆಂಗಳೂರು, ಜೂ. 1: ಮೊಬೈಲ್ ಫೋನ್ ಬಳಕೆ ಮಾಡುವವರು ಈ ಸಂಗತಿ ತಿಳಿಯಲೇ ಬೇಕು. ನಿಮಗೆ ಈ ಅನುಭವ ಒಂದಲ್ಲಾ ಒಂದು ದಿನ ಆಗಿರತ್ತೆ, ಯಾವುದೋ ಹೊಸ ಫೋನ್ ನಂಬರ್‌ನಿಂದ ಕರೆ ಬರುತ್ತೆ, ಅವರು ಇಲ್ಲಸಲ್ಲದನ್ನು ಮಾತನಾಡಿ ಕರೆ ಕಟ್ ಮಾಡ್ತಾರೆ. ಆಮೇಲೆ ಮತ್ತೆ ಅದೇ ನಂಬರ್‌ಗೆ ಕರೆ ಮಾಡಿದರೇ ಕಾಲ್ ಸಿಗುವುದಿಲ್ಲ. ಯಾಕೆ ಹೀಗೆ ಅಗುತ್ತೆ ಅನ್ನೋದಕ್ಕೆ ಉತ್ತರವೇ ದೊಡ್ಡ ಮಾಫಿಯಾ. ಸಿಸಿಬಿ ಈ ಮಾಫಿಯಾವನ್ನು ಬಯಲಿಗೆ ತಂದಿದೆ.
ಸಿಮ್ ಬಾಕ್ಸ್ ಮತ್ತು ಸಿಪ್ ಟ್ರಂಕ್ಸ್ ಇವುಗಳು ಸಾಮಾನ್ಯವಾಗಿ ಸಾರ್ವಜನಿಕರಿಗೆ ನೋಡಲು ಸಿಗಲ್ಲ. ಈ ಸಿಮ್ ಬಾಕ್ಸ್ ಸರ್ವಿಸ್ ಪ್ರೊವೈಡರ್‌ಗಳಾದ ಬಿಎಸ್ಎನ್ಎಲ್, ಏರ್ಟೇಲ್ ಜೀಯೊ ನಂತಹ ಕಂಪನಿಗಳ ಬಳಿ ಇರುತ್ತದೆ. ಇನ್ನು ಸಿಪ್ ಬಾಕ್ಸ್ ಗಳು ಕಾಲ್ ಸೆಂಟರ್‌ಗಳಲ್ಲಿ ಇರುತ್ತದೆ. ಸಿಮ್ ಬಾಕ್ಸ್ ಗಳನ್ನು ಚೈನಾದಿಂದ ತರಿಸಿಕೊಳ್ಳುತ್ತಿದ್ದರು.
ಪೇಂಟರ್ ಹೆಸರಿನಲ್ಲಿ ನಕಲಿ ಕಂಪನಿಯೊಂದನ್ನು ನೋಂದಾಯಿಸಿ ಆ ಮೂಲಕ ಸಿಪ್ ಟ್ರಂಕ್ಸ್ ಖರೀದಿಸಿ ದೇಶದ ಭದ್ರತೆಗೆ ಧಕ್ಕೆ ತರುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ರವಿಚಂದ್ರ, ಸುಬೇರ್,ಮನು,ಸಾಹಿರ್, ಜೊಹುರ್ ಶರೀಫ್,ಇಸ್ಮಾಯಿಲ್ ಅಬ್ದುಲ್ಲಾ ಎಂಬ ಆರು ಜನರನ್ನು ಈ ಕೇಸ್ ನಲ್ಲಿ ಅರೆಸ್ಟ್ ಮಾಡಲಾಗಿದೆ.

ಸಿಮ್ ಬಾಕ್ಸ್ ಹಾಗು ಸಿಪ್ ಟ್ರಂಕ್ಸ್ ಬಳಕೆ
ಈ ಸಿಮ್ ಬಾಕ್ಸ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ. ಒಂದು ಆಪ್ ಮೂಲಕ ಮಿಡಲ್ ಈಸ್ಟ್ ದೇಶಗಳಲ್ಲಿ ಇರೋ ಪ್ರಜೆಗಳು ಇದನ್ನು ಬಳಸುತ್ತಾರೆ . ಈ ಆಪ್ ಮೂಲಕ ಕರೆ ಮಾಡಿದಾಗ ಸಿಮ್ ಬಾಕ್ಸ್ ಹಾಗು ಸಿಪ್ ಟ್ರಂಕ್ಸ್ ಮೂಲಕ ಇಂಟರ್ ನೆಟ್ ಬಳಸಿ ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಬದಲಾವಣೆ ಮಾಡಿ ಸಂಭಾಷಣೆ ನಡೆಸಲಾಗುತ್ತದೆ. ಇಲ್ಲಿ ಕರೆ ಸ್ವೀಕರಿಸಿದ ವ್ಯಕ್ತಿಗೆ ಯಾರು ಕರೆ ಮಾಡಿದ್ದಾರೆ ಅನ್ನೊದು ಗೊತ್ತಾಗಲ್ಲಾ. ಒಂದು ವೇಳೆ ಕ್ರೈಮ್‌ಗಳಲ್ಲಿ ಈ ರೀತಿ ಮಾಡಿದಾಗ ಕಾಲ್ ಬಂದಿದ್ದ ನಂಬರ್ ಸಿಡಿಆರ್ ಪಡೆದು ಪರಿಶೀಲನೆ ನಡೆಸಿದರೇ ಪ್ರಾಕ್ಸಿ ಸರ್ವರ್‌ಗಳ ಮೂಲಕ ಎಲ್ಲಿಂದ ಕರೆ ಬಂದಿದೆ ಅನ್ನೊ ಲೊಕೇಶನ್ ಸಿಗೊದಿಲ್ಲಾ. ಅಲ್ಲಿಗೆ ಎಲ್ಲಿಂದ ಕರೆ ಬಂದಿದೆ ಅನ್ನೊದು ಗೊತ್ತಾಗಲ್ಲಾ ಯಾರು ಕರೆ ಮಾಡಿದ್ದಾರೆ ಅನ್ನೋದು ಗೊತ್ತಾಗಲ್ಲಾ.

ಭಯೋತ್ಪಾದನೆಗೂ ಸಹಕಾರಿ
ಡ್ರಗ್ಸ್, ಭಯೋತ್ಪಾದನೆ, ಅಂಡರ್ ವರ್ಡ್, ಆನ್‌ಲೈನ್ ಹನಿ ಟ್ರಾಪ್, ಚೀಟಿಂಗ್ ಹೀಗೆ ಎಲ್ಲಾ ತರಹದ ಕ್ರೈಮ್‌ಗಳಲ್ಲಿ ಬಾಗಿಯಾಗಲು ಈ ಮಾದರಿಗೆ ಕಾಲಿಂಗ್ ವ್ಯವಸ್ಥೆ ಸಹಾಯ ಆಗುತ್ತೆ. ಜೊತೆಗೆ ಪೊಲೀಸರ ಕೈಗೆ ಸಿಕ್ಕಿಹಾಕೊಳ್ಳುವ ಸಾದ್ಯತೆ ತೀರ ಕಡಿಮೆ. ಇದೇ ರೀತಿ ಪುತ್ತೂರಿನ ಚಂದ್ರಹಾಸ ಎಂಬಾತನಿಗೆ ನಿನ್ನನ್ನು ಶರತ್ ಮಡಿವಾಳನ ರೀತಿ ಕೊಲೆ ಮಾಡುತೇವೆ ಎಂದು ಬೆದರಿಕೆ ಹಾಕಲು ಇದೇ ಸಿಮ್ ಬಾಕ್ಸ್ ಮೂಲಕ ಕರೆ ಮಾಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.

ಸರ್ಕಾರಕ್ಕೆ ಕೋಟಿ ಕೋಟಿ ಲಾಸ್
ಒಂದು ಕಡೆ ಆದರೇ ಇಂಟರ್ ನೆಟ್ ಕಾಲ್ ವ್ಯವಸ್ಥೆ ಇಲ್ಲದ ಅನೇಕ ದೇಶಗಳಿಂದ ಭಾರತಕ್ಕೆ ಕರೆ ಮಾಡಬೇಕು ಅಂದಾಗ ಇಂಟರ್ನ್ಯಾಷನಲ್ ಕರೆಗಳ ದರ ಒಂದು ಕರೆಗೆ ಸುಮಾರು ಹದಿನೈದು ರೂಗಳ ತನಕ ಇದೆ. ಆದರೆ ಈ ಆಪ್ ಮೂಲಕ ಕರೆ ಮಾಡಿದಾಗ ಒಂದು ರೂಪಾಯಿ ಅಗುತ್ತೆ. ಈ ಮೂಲಕ ಸರ್ಕಾರಕ್ಕೆ ಕೋಟಿ ಕೋಟಿ ಲಾಸ್ ಆಗುತ್ತೆ, ಎಷ್ಟರ ಮಟ್ಟಿಗೆ ಅಂದರೆ ಈ ಆರೋಪಿಗಳು ಒಂದು ತಿಂಗಳಲ್ಲಿ ಸುಮಾರು ಎಂಟು ಸಾವಿರ ನಿಮಿಷಗಳ ಇಂಟರ್ನ್ಯಾಷನಲ್ ಕರೆಗಳನ್ನು ಸ್ಥಳೀಯ ಕರೆಯಾಗಿ ಪರಿವರ್ತಿಸಿದ್ದಾರೆ.

ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು ವಶಕ್ಕೆ
ಮಹದೇವಪುರ ಹಾಗು ಚಿಕ್ಕಬಾಣವಾರ ಬಳಿಯಲ್ಲಿ ಬಾಡಿಗೆ ಮನೆಯನ್ನು ಪಡೆದಿದ್ದ ಆರೋಪಿಗಳು 204 ಸಿಮ್‌ಗಳನ್ನು ಬಳಕೆ ಮಾಡುತ್ತಿದ್ದರು. ಸಿಸಿಬಿ ಪೊಲೀಸರು ಮನೆಯ ಮೇಲೆ ದಾಳಿಯನ್ನು ಮಾಡಿ ಏಳು ಲ್ಯಾಪ್ ಟಾಪ್, 204 ಸಿಮ್ ಕಾರ್ಡ್, ಹದಿನಾಲ್ಕು ಸಿಮ್ ಬಾಕ್ಸ್, ಇಂಟರ್ ನೆಟ್ ವೈಫೈ ರೂಟರ್ಸ್, ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications