ಪ್ರೇಯಸಿಯ ಕೊಂದು, ಕಿಟಕಿಯಿಂದ ಹಾರಿದ್ದ ಕ್ಯಾಬ್ ಡ್ರೈವರ್ ಸಿಕ್ಕಿಬಿದ್ದಿದ್ಹೇಗೆ?

ಬೆಂಗಳೂರು, ಮೇ 19: ಪ್ರೇಯಸಿ ಬೇರೆ ಮದುವೆಯಾಗುತ್ತಾಳೆ ಎಂದು ತಿಳಿದ ಬಳಿಕ ಹಳೆಯ ಪ್ರೀತಿಯನ್ನು ಮರೆತು ಜನರು ಕೊಲ್ಲುವ ಮಟ್ಟಕ್ಕೆ ಹೋಗುತ್ತಾರೆ ಎಂದರೆ ಮನುಷ್ಯನ ಆಲೋಚನೆ ಕುರಿತು ಆಶ್ಚರ್ಯವಾಗುತ್ತದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಹೌದು ಎಲೆಕ್ಟ್ರಾನಿಕ್ಸ್‌ ಸಿಟಿ ನಿವಾಸಿ, ಮಾರತ್ತಹಳ್ಳಿಯ ಖಾಸಗಿ ಕಂಪನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಸೆಲ್ವ , ಆತನ ಪ್ರೇಯಸಿಗೆ ಮದುವೆ ದಿನಾಂಕ ನಿಶ್ಚಯವಾಗಿದೆ, ಇನ್ನುಮುಂದೆ ತನಗೆ ಸಿಗುವುದಿಲ್ಲ ಎಂದು ಆಕೆಯನ್ನು ಕೊಲೆ ಮಾಡಿ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದ.

ಕಳೆದ ಎರಡು ವರ್ಷಗಳ ಹಿಂದೆ ಅವರಿಬ್ಬರ ಪರಿಚಯವಾಗಿತ್ತು. ಇಬ್ಬರ ಮಧ್ಯೆ ಸಂಬಂಧವೂ ಇತ್ತು. ಆಕೆಯ ಮದುವೆ ಇನ್ನೊಬ್ಬ ವ್ಯಕ್ತಿಯ ಜೊತೆಗೆ ನಿಶ್ಚಯವಾಗಿದೆ ಎಂದು ಯಾವಾಗ ತಿಳಿಯಿತೋ ಆಗ, ಆಕೆಯ ಮನೆಗೆ ಹೋಗಿ ನೀನು ಆತನನ್ನು ಮದುವೆಯಾಗಬೇಡ ಎಂದು ಹೇಳಿದ್ದ ಆದರೆ ಆತನ ಮಾತಿಗೆ ಯುವತಿ ಬೆಲೆ ಕೊಡದ ಕಾರಣ ದುಪ್ಪಟ್ಟದಿಂದ ಆಕೆಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ.

Cab driver kills girl friend tries to pass it off as suicide

ಆಕೆಯ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ರೂಮಿನ ಒಳಗಿಂದಲೇ ಬಾಗಿಲು ಲಾಕ್ ಮಾಡಿ, ಕಿಟಕಿಯಿಂದ ಹಾರಿ ಪರಾರಿಯಾಗಿದ್ದ. ಆಕೆಯ ಮದುವೆಯಾಗಬೇಕಿದ್ದ ವ್ಯಕ್ತಿ ಸಂಜೆ ಏಳು ಗಂಟೆ ಸುಮಾರಿಗೆ ಅವರ ಮನೆಗೆ ಬಂದಾಗ ಬಾಗಿಲು ಒಳಗಿಂದ ಲಾಕ್ ಆಗಿತ್ತು, ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.

ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಯುವತಿ ತಾಯಿ ಮನೆಗೆ ಬಂದ ಬಳಿಕ ಮಗಳ ಹಳೆಯ ವಿಚಾರ ತಿಳಿದಿದ್ದ ಅವರು ಸೆಲ್ವ ಮೇಲೆ ದೂರು ದಾಖಲಿಸಿದ್ದಾರೆ. ಬಳಿಕ ಸೆಲ್ವ ಕೊಲೆ ಮಾಡಿರುವುದು ತಾನೇ ಎಂದು ಒಪ್ಪಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+