ಬೆಂಗಳೂರಿಗರೇ ಗಮನಿಸಿ.. ಮೇ 14ರಂದು ಈ ಪ್ರದೇಶಗಳಲ್ಲಿ ನೀರು ಸರಬರಾಜು ಸ್ಥಗಿತ
ಬೆಂಗಳೂರು ಮೇ 13: ನಾಳೆ ಬೆಂಗಳೂರಿನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ. ನಗರದ ಹಲವು ಪ್ರದೇಶಗಳಲ್ಲಿ ಶನಿವಾರ (ಮೇ 14ರಂದು) ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸುಮಾರು ಮೂರು ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಶ್ರೀಗಂಧ ಕಾವಲ್ ಪಂಪ್‌ಹೌಸ್‌ನಲ್ಲಿರುವ 375 ಎಚ್‌ಪಿ ಪಂಪ್ ದುರಸ್ತಿ ಕಾರ್ಯಾಚರಣೆ ನಡೆಯುವ ಹಿನ್ನೆಲೆಯಲ್ಲಿ ಮೂರು ಗಂಟೆ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಎಲ್ಲೆಲ್ಲಿ ವ್ಯತ್ಯಯ?:
ಬೋವಿ ಕಾಲನಿ, ಇಂದಿರನಾಗರ ಸ್ಲಂ, ಕಾವೇರಿ ನಗರ, ಕರ್ನಾಟಕ ಲೇಔಟ್, ಶಿವನಹಳ್ಳಿ, ಮಹಾಗಣಪತಿ ನಗರ, ಮಂಜುನಾಥನಗರ, ಜಡ್ಜಸ್ ಕಾಲನಿ, ಗೃಹಲಕ್ಷ್ಮೀ ಲೇಔಟ್, ಎಸ್‌ಬಿಐ ಸ್ಟಾಫ್ ಕಾಲನಿ, ಸಂಜಯಗಾಂಧಿನಗರ, ಶಕ್ತಿ ಗಣಪತಿ ನಗರ, ಬಿಇಎಂಎಲ್ ಲೇಔಟ್, ಕಮಲನಗರ ಸ್ಲಂ, ಕಿರ್ಲೋಸ್ಕರ್ ಲೇಔಟ್, ಕರೆಕಲ್ಲು ಸೇರಿದಂತೆ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ತಿಳಿಸಿದೆ.

ಅಸನಿ ಚಂಡಮಾರುತದ ಪರಿಣಾಮ ಕಳೆದ ಮೂರು ನಾಲ್ಕು ದಿನದಿಂದ ಬೆಂಗಳೂರಿನಲ್ಲಿ ಮೋಡ ಕವಿತ ವಾತಾವರಣ, ಮಳೆ ಜೊತೆಗೆ ಅಧಿಕ ಚಳಿ ದಾಖಲಾಗಿದೆ. ಇದರ ನಡುವೆ ಇನ್ನೂ ಐದು ದಿನಗಳವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಣ್ಣು ಸವೆದು ನೀರು ಹರಿದು ಹಲವೆಡೆ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಜೊತೆಗೆ ಅಲ್ಲಿ ಪೈಪ್‌ಗಳು ಒಡೆದು ಹೋಗಿರುವ ಹಾಳಾಗಿರುವ ದೂರುಗಳಿವೆ. ಇದರಿಂದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇದರ ದುರಸ್ಥಿ ಕಾರ್ಯಕ್ಕೆ ಮುಂದಾಗಿದೆ.

ಮಾತ್ರವಲ್ಲದೇ ಈ ಬೇಸಿಗೆಯಲ್ಲಿ ಬೆಂಗಳೂರಿನ ಅಕಾಲಿಕ ಮಳೆಯು ತೀವ್ರವಾದ ಮಿಂಚು, ಜೋರಾದ ಗುಡುಗು, ವೇಗದ ಗಾಳಿ ಮತ್ತು ಕೆಲವೊಮ್ಮೆ ಆಲಿಕಲ್ಲು ಮಳೆಯನ್ನು ತಂದಿದೆ. ಇಬ್ಬರು ನಿವಾಸಿಗಳನ್ನು ಕೊಲ್ಲುವ ಮೂಲಕ ಮಾರಣಾಂತಿಕವಾಗಿ ಮಾರ್ಪಟ್ಟಿದೆ ಮತ್ತು ಸಾವಿರಾರು ಮನೆಗಳಿಗೆ ಹಾನಿಯಾಗಿದೆ ಮತ್ತು ಹಲವಾರು ವ್ಯಾಪಾರಗಳಿಗೆ ನಷ್ಟ ಉಂಟಾಗಿದೆ. ಭಾನುವಾರ ಸುರಿದ ಭಾರಿ ಮಳೆಗೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಮೇಲಾವರಣದ ಒಂದು ಭಾಗ ಕುಸಿದು ಬಿದ್ದಿರುವುದು ಭತಗ್ಗು ಪ್ರದೇಶದಲ್ಲಿ ಆತಂಕ ಹೆಚ್ಚಾಗಿದೆ.












Click it and Unblock the Notifications