ಟ್ಯಾಂಕರ್ ನೀರು ಬೇಕಾ? ಜಲಮಂಡಳಿಗೆ ಕರೆ ಮಾಡಿ

ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಿರುವ ಬೆಂಗಳೂರು ಜಲಮಂಡಳಿ ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಿದೆ. ಮೇ 26ರಿಂದ ಈ ಸೇವೆ ಆರಂಭವಾಗಲಿದ್ದು, ಪ್ರಸ್ತುತ ಮಂಡಳಿಯ ಒಂದೊಂದು ಉಪ ವಿಭಾಗಕ್ಕೆ ಒಂದೊಂದು ಟ್ಯಾಂಕರ್ ಅನ್ನು ಈ ಸೇವೆಗಾಗಿ ಮೀಸಲಿಡಲಾಗಿದೆ.
ನಿಮಗೆ ನೀರಿನ ಕೊರತೆ ಉಂಟಾದರೆ, ನಿಮ್ಮ ವ್ಯಾಪ್ತಿಯ ಉಪವಿಭಾಗಕ್ಕೆ ಕರೆ ಮಾಡಿ ಟ್ಯಾಂಕರ್ ನೀರು ಮನೆಗೆ ತರಿಸಿಕೊಳ್ಳಬಹುದು. ಕರೆ ಮಾಡಿದಾಗ ನಿಮ್ಮ ಮನೆಯ ನೀರಿನ ಸಂಪರ್ಕದ ಆರ್.ಆರ್. ನಂಬರ್ ಅನ್ನು ನೀವು ನೀಡಬೇಕಾಗುತ್ತದೆ. ಒಂದು ಟ್ಯಾಂಕರ್ ನೀರಿಗೆ 360 ರೂ. ದರ ನಿಗದಿಪಡಿಸಲಾಗಿದೆ. [ನೀರಿನ ದರ ಹೆಚ್ಚಳ ಮಾಡಿದ ಜಲಮಂಡಳಿ]
ಮೊದಲು ಟ್ಯಾಂಕರ್ ನೀರಿಗಾಗಿ ಕಚೇರಿಗೆ ಬಂದು ಓಚರ್ ಬರೆದು ಕೊಡಬೇಕಾಗಿತ್ತು. ಸದ್ಯ ಕೇವಲ ದೂರವಾಣಿ ಕರೆ ಮಾಡಿದರೆ, ಟ್ಯಾಂಕರ್ ನೀರು ಮನೆಗೆ ಬಂದು ತಲುಪಲಿದೆ. ಮೇ 26ರಿಂದ ಈ ಸೇವೆ ಆರಂಭವಾಗಲಿದೆ.
ಮೊದಲು ನೀರಿಗಾಗಿ ಕರೆ ಮಾಡಿ, ಟ್ಯಾಂಕರ್ ಬಂದ ನಂತರ ಅದನ್ನು ತಿರಸ್ಕರಿಸಿದರೆ, ಅವರ ಆರ್.ಆರ್ ಸಂಖ್ಯೆಯ ಬಿಲ್ಲಿಗೆ ಟ್ಯಾಂಕರ್ ನೀರಿನ ಮೊತ್ತವನ್ನು ಸೇರಿಸಲಾಗುತ್ತದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ವಿವರಗಳಿಗೆ 080- 22238888 ನಂಬರ್ ಗೆ ಕರೆ ಮಾಡಬಹುದು.












Click it and Unblock the Notifications