ಬಿಎಂಟಿಸಿ ಬಸ್ ಬಳಕೆದಾರರು ಹೊರಗೆಡವಿರುವ ಆಸಕ್ತಿಕರ ಅಂಕಿ-ಅಂಶ

ಬೆಂಗಳೂರು, ಫೆಬ್ರವರಿ 18: ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯು ಬೆಂಗಳೂರಿನ ಬಸ್ ಬಳಕೆದಾರರ ಸಮೀಕ್ಷೆ ನಡೆಸಿ ಆಸಕ್ತಿಕರ ಅಂಕಿ-ಅಂಶವನ್ನು ಹೊರಹಾಕಿದೆ.

ನಗರದಲ್ಲಿ ಬಸ್ ಬಳಕೆ ಮಾಡುತ್ತಿರುವವರು ಯಾವ ವರ್ಗದವರು, ಅವರ ಬೇಡಿಕೆಗಳೇನು, ಬಸ್ ಪ್ರಯಾಣಿಕರು ಸರ್ಕಾರದಿಂದ ಏನೇನು ನಿರೀಕ್ಷಿಸುತ್ತಿದ್ದಾರೆ, ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನೆಲ್ಲಾ ಪಟ್ಟಿ ಮಾಡಿ ನೀಡಿದೆ.

ಸಮೀಕ್ಷೆಯಿಂದ ತಿಳಿದುಬಂದಿರುವ ವಿಚಾರಗಳೆಂದರೆ
* ಶೇ 80% ರಷ್ಟು ಮಂದಿ ಬಸ್ ದರಗಳು ಹೆಚ್ಚಾಗಿವೆ ಎಂದಿದ್ದಾರೆ. ಬಸ್ ಅಲ್ಲದೆ ಬೇರೆ ವಾಹನಗಳನ್ನು, ಖಾಸಗಿ ವಾಹನಗಳನ್ನು ಬಳಸುತ್ತಿರುವವರು, ದರ ಕಡಿಮೆ ಮಾಡಿದರೆ ಬಸ್ ಅನ್ನೇ ಪ್ರಯಾಣಕ್ಕೆ ಬಳಸುವುದಾಗಿ ಹೇಳಿದ್ದಾರೆ.

* ಖಾಸಗಿ ವಾಹನಗಳು (ಬೈಕ್, ಮಧ್ಯಮ ಕಾರುಗಳು) ಬಳಸುವವರಿಗಿಂತಲೂ ಬಸ್ ಪ್ರಯಾಣಿಕರು ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ. ತಮ್ಮ ಮಾಸಿಕ ಆದಾಯದ 21% ಬಸ್ ಪ್ರಯಾಣಕ್ಕೆ ಬಳಸುತ್ತಾರೆ. ಇತರೆ ಪ್ರಯಾಣಿಕರು ಮಾಸಿಕ ಆದಾಯದ 9% ಅನ್ನು ಖರ್ಚು ಮಾಡುತ್ತಿದ್ದಾರೆ.

60% ಮಂದಿ ಬಸ್ ದರ ಹೆಚ್ಚು ಎಂದಿದ್ದಾರೆ

60% ಮಂದಿ ಬಸ್ ದರ ಹೆಚ್ಚು ಎಂದಿದ್ದಾರೆ

* ಸಮೀಕ್ಷೆಗೆ ಒಳಪಟ್ಟವರಲ್ಲಿ 60% ರಷ್ಟು ಮಂದಿ ಬಸ್ ದರ ಹೆಚ್ಚಳ ಎಂದಿದ್ದಾರೆ. ಅನುಕೂಲಕರ ಮಾರ್ಗಗಳ ಕೊರತೆ ಎಂದು 17.3% ಮಂದಿ ಹೇಳಿದ್ದಾರೆ. 16% ಮಂದಿ ಸೇವಾ ಆವರ್ತನ ಸಮಸ್ಯೆ ಹೇಳಿದ್ದಾರೆ. ಸಂಚಾರ ದಟ್ಟಣ ಸಮಸ್ಯೆಯಿಂದ ತಡವಾಗುತ್ತದೆಂದು 6.7% ಮಂದಿ ದೂರು ಹೇಳಿದ್ದಾರೆ.

71% ಬಳಕೆದಾರರ ಪ್ರಕಾರ ಇತರ ಆಯ್ಕೆಗಳು ದುಬಾರಿ

71% ಬಳಕೆದಾರರ ಪ್ರಕಾರ ಇತರ ಆಯ್ಕೆಗಳು ದುಬಾರಿ

* ಬಸ್ ಬಳಸುತ್ತಿರುವ ಶೇ 71% ಮಂದಿ ಹೇಳುವ ಪ್ರಕಾರ ಅವರು ಬಸ್ ಅನ್ನು ಬಳಸುತ್ತಿರುವುದಕ್ಕೆ ಕಾರಣ, ಇತರ ಆಯ್ಕೆಗಳು ದುಬಾರಿ ಎಂಬ ಕಾರಣಕ್ಕೆ. 17.3% ಮಂದಿ ಬಸ್ ಪ್ರಯಾಣ ಅನುಕೂಲಕರ ಎಂದು ಬಳಸುತ್ತಾರೆ. ಬಸ್ ಪ್ರಯಾಣ ದರ ಹೆಚ್ಚು ಖರ್ಚಿನದ್ದಲ್ಲ ಎಂಬ ಕಾರಣಕ್ಕೆ 5.8% ಜನ ಬಳಸುತ್ತಾರೆ. 3.8% ಮಂದಿ ದೂರ ಪ್ರಯಾಣಕ್ಕೆ ಸೂಕ್ತ ಎಂಬ ಕಾರಣಕ್ಕೆ ಬಳಸುತ್ತಾರೆ.

ಸಮೀಕ್ಷೆ ನಡೆಸಿರುವ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಒತ್ತಾಯಗಳು

ಸಮೀಕ್ಷೆ ನಡೆಸಿರುವ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಒತ್ತಾಯಗಳು

* ಈಗಿರುವ ಬಿಎಂಟಿಸಿ ಬಸ್ ಸಂಖ್ಯೆ ಮುಂಬರುವ ವರ್ಷದಲ್ಲಿ ದ್ವಿಗುಣಗೊಳ್ಳಬೇಕು. * ಪ್ರಯಾಣ ದರವನ್ನು ಕಡಿಮೆ ಮಾಡಲು ಮತ್ತು ಕಾರ್ಯಾಚರಣೆ ವೆಚ್ಚ (ಆಪರೇಷನಲ್ ಎಕ್ಸ್‌ಪೆನ್ಸ್‌) ಕಡಿಮೆ ಮಾಡಲು ಬಿಎಂಟಿಸಿಗೆ ಸಹಾಯ ಮಾಡಲು ಬೆಲೆ ಸ್ಥಿರೀಕರಣ ನಿಧಿಯನ್ನು ಸ್ಥಾಪಿಸಬೇಕು.

ಬೇಡಿಕೆ ಮ್ಯಾಪಿಂಗ್ ಮೂಲಕ ಫ್ರೀಕ್ವೆನ್ಸಿ ಹೆಚ್ಚಳ

ಬೇಡಿಕೆ ಮ್ಯಾಪಿಂಗ್ ಮೂಲಕ ಫ್ರೀಕ್ವೆನ್ಸಿ ಹೆಚ್ಚಳ

* ಈಗಿರುವ ಬಸ್ ಲೇನ್‌ಗಳನ್ನು ಬೇರೆ ಕಡೆಗಳಿಗೂ ವಿಸ್ತರಿಸಬೇಕು. * ಬೇಡಿಕೆ ಮ್ಯಾಪಿಂಗ್ ಮೂಲಕ ಬಸ್‌ಗಳ ಫ್ರೀಕ್ವೆನ್ಸಿ ಮತ್ತು ರೂಟಿಂಗ್ ಹೆಚ್ಚಿಸಬೇಕು. ಬಜೆಟ್ ಮಾಡುವ ಮುನ್ನಾ ಬಳಕೆದಾರರೊಂದಿಗೆ ಚರ್ಚೆ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+