Bengaluru Property: ಬೆಂಗಳೂರಿನ ರಿಯಲ್‌ ಎಸ್ಟೇಟ್‌ಗೆ ಬಂಪರ್: ಆಸ್ತಿ ಖರೀದಿ & ಮಾರಾಟಕ್ಕೆ ಈ ಜಾಗಗಳು ಬೆಸ್ಟ್‌!

Real Estate in Bengaluru: ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ಗೆ ಹೊಸ ಬೂಸ್ಟ್‌ ಸಿಕ್ಕಿದೆ. ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ಗಳ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಇದರೊಂದಿಗೆ ಕೆಲವು ಆಸ್ತಿಗಳ ಬೆಲೆಯು ಡಬಲ್‌ ಆಗುವ ಸಾಧ್ಯತೆ ಇದೆ. ಆಸ್ತಿ ಹಾಗೂ ಮನೆಯನ್ನು ಹೊಂದಿರುವವರು ಬೆಂಗಳೂರಿನಲ್ಲಿ ಮನೆ ಹಾಗೂ ಆಸ್ತಿ ಮಾರಟಕ್ಕೆ ಇದು ಸೂಕ್ತ ಸಮಯವೇ ಎಂದು ನೋಡುತ್ತಿದ್ದಾರೆ. ಹಾಗಾದರೆ ಬೆಂಗಳೂರಿನಲ್ಲಿ ಆಸ್ತಿ ಮಾರಾಟ ಹಾಗೂ ಖರೀದಿ ಪ್ರಕ್ರಿಯೆ ಯಾವ ರೀತಿ ಇದೆ. ಈಗ ಜಾಗ ಮಾರಾಟ ಮತ್ತು ಖರೀದಿಗೆ ಒಳ್ಳೆಯ ಸಮಯವೇ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ನಗರದಲ್ಲಿ ರಿಯಲ್‌ ಎಸ್ಟೇಟ್‌ಗೆ ಮೊದಲಿನಿಂದಲೂ ಭರ್ಜರಿ ಆದಾಯವಿದೆ. ಇದೀಗ ಬೆಂಗಳೂರಿನ ಏಳು ಪ್ರಮುಖ ಪ್ರದೇಶಗಳಲ್ಲಿ ಮನೆ ಹಾಗೂ ಜಾಗಗಳ ಬೆಲೆಯು ಭರ್ಜರಿ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಜಾಗವನ್ನು ಮಾರಾಟ ಮಾಡಿ ಹೊಸದಾಗಿ ಹೂಡಿಕೆ ಮಾಡುವುದಕ್ಕೆ ಇದು ಬೆಸ್ಟ್‌ ಟೈಮ್‌ ಎಂದೇ ಹೇಳಲಾಗುತ್ತಿದೆ. ಮಾರುಕಟ್ಟೆಯ ಬೇಡಿಕೆ ಹೆಚ್ಚಾದಾಗಲೇ ಆಸ್ತಿ ಮಾರಾಟ ಮಾಡುವುದು ಒಳ್ಳೆಯ ಸಮಯ ಎಂದು ಹೇಳಲಾಗುತ್ತದೆ.

Bumper for Real Estate in Bengaluru These Places Best for Buying and Selling Property

ಹೊಸ ಮನೆ / ಅಪಾರ್ಟ್‌ಮೆಂಟ್‌ ನಿರ್ಮಾಣ: ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಭರ್ಜರಿಯಾಗಿ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗುತ್ತಿದ್ದು, ಅದು ಇದೀಗ ಪೂರ್ಣಗೊಂಡಿದೆ. ಇದರಿಂದ ಇವು ಪೂರ್ಣಗೊಂಡಿರುವುದರಿಂದ ಮಾರಾಟದಲ್ಲಿ ಹೊಸ ಅಧ್ಯಯನ ಶುರುವಾಗಲಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಕೇಂದ್ರ ಭಾಗಕ್ಕಿಂತಲೂ ಬೆಂಗಳೂರಿನ ಹೊರ ವಲಯದಲ್ಲಿ ಜಾಗಗಳನ್ನು ಖರೀದಿ ಮಾಡುವುದಕ್ಕೆ ಇದು ಒಳ್ಳೆಯ ಟೈಮ್‌ ಎಂದೇ ಅಂದಾಜಿಸಲಾಗಿದೆ. ಬೆಂಗಳೂರಿನ ಉತ್ತರದ ದೇವನಹಳ್ಳಿ, ರಾಜನಕುಂಟೆ, ಸರ್ಜಾಪುರ (ಪೂರ್ವ) ವೈಟ್‌ಫೀಲ್ಡ್‌, ಕೋರಮಂಗಲ ಹಾಗೂ ಇಂದಿರಾನಗರ ಭಾಗದಲ್ಲಿ ಹೂಡಿಕೆಗೆ ಪೂರಕ ವಾತಾವರಣವಿದೆ.

ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಳ: ಇನ್ನು ಬೆಂಗಳೂರಿನ ಏಳು ಪ್ರದೇಶದಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬಂದಿದೆ. ನೈಟ್ ಫ್ರಾಂಕ್ ಇಂಡಿಯಾದ ವರದಿಯ ಪ್ರಕಾರ, ಜನವರಿ ಮತ್ತು ಮಾರ್ಚ್ 2025 ತಿಂಗಳಿನ ನಡುವೆ ಬೆಂಗಳೂರಿನ ಏಳು ಪ್ರದೇಶಗಳಲ್ಲಿ ಭೂಮಿ ಹಾಗೂ ಆಸ್ತಿಯ ಬೆಲೆಯು ಶೇ 16ರಷ್ಟು ಹೆಚ್ಚಳವಾಗಿದೆ. ಈ ಭಾಗದಲ್ಲಿ ಪ್ರತಿ ಚದರ ಅಡಿಗೆ 7,116 ರೂಪಾಯಿ ಆಗಿದೆ.

ಈ ಭಾಗದಲ್ಲಿ ಭೂಮಿಗೆ ಒಳ್ಳೆಯ ಬೆಲೆ: ಇನ್ನು ಕನಕಪುರದ ದಕ್ಷಿಣ ಭಾಗ ಹಾಗೂ ಸರ್ಜಾಪುರ ಭಾಗದಲ್ಲಿ ಅಪಾರ್ಟ್‌ಮೆಂಟ್‌ ಬೆಲೆ ಭರ್ಜರಿ ಬೆಲೆ ಬಂದಿದೆ. ಈ ಭಾಗದಲ್ಲಿ ಅಪಾರ್ಟ್‌ಮೆಂಟ್‌ ಬೆಲೆಯು 80 ಲಕ್ಷ ರೂಪಾಯಿ ಇದೆ. ಈ ಭಾಗದಲ್ಲಿ ಪ್ರತಿ ಚದರ ಅಡಿಗೆ 5,000 ಸಾವಿರ ರೂಪಾಯಿಯಿಂದ 8,000 ರವರೆಗೆ ಿಇದೆ. ಬೆಂಗಳೂರಿನಲ್ಲಿ ಭೂಮಿಗೆ ಬಂಗಾರವನ್ನು ಮೀರಿಸುವ ಬೆಲೆ ಇದೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಜನ ಭೂಮಿ ಹಾಗೂ ಜಾಗದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+