ಬೆಂಗಳೂರು ಪ್ರಕೃತಿ ಮಡಿಲಲ್ಲಿ ಅಪಾರ್ಟ್ ಮೆಂಟ್

ಬೆಂಗಳೂರು, ಜೂ.9: ಭಾರತದ ಮುಂಚೂಣಿ ರಿಯಲ್ ಎಸ್ಟೇಟ್ ಡೆವಲಪರ್ ಗಳ ಪೈಕಿ ಒಂದಾಗಿರುವ ಬ್ರಿಗೇಡ್ ಗ್ರೂಪ್, ಬೆಂಗಳೂರಿನ ಬನಶಂಕರಿ 6ನೇ ಹಂತದಲ್ಲಿರುವ ತುರಹಳ್ಳಿ ಬಳಿ ತನ್ನ ಪ್ರೀಮಿಯಂ ಟವರ್ ವೈಟ್ ಮಿಸ್ಟ್ ಶುರು ಮಾಡಿದೆ. ಈ ಪ್ರಾಜೆಕ್ಟ್ ತನ್ನ ನಿವಾಸಿಗಳಿಗೆ ಪ್ರಕೃತಿಯ ಮಧ್ಯೆ ಇದ್ದುಕೊಂಡು ಅತ್ಯಾಧುನಿಕ ಸೌಲಭ್ಯಗಳು ಹಾಗೂ ವೈಭೋಗವನ್ನು ಅನುಭವಿಸುವ ಅವಕಾಶವನ್ನು ಒದಗಿಸುವ ಭರವಸೆ ನೀಡುತ್ತಿದೆ.

'ವೈಟ್ ಮಿಸ್ಟ್' ಸುಂದರವಾದ 600 ಎಕರೆ ವ್ಯಾಪ್ತಿಯ ತುರಹಳ್ಳಿ ಕಾಡಿನ ಅದ್ಭುತ ನೋಟದೊಂದಿಗಿನ ಲಕ್ಷುರಿ 2, 3 ಹಾಗೂ 4 ಬೆಡ್ ರೂಂ ಅಪಾರ್ಟ್ ಮೆಂಟ್ ಗಳನ್ನು ಆಫರ್ ಮಾಡುತ್ತಿದೆ. ಅಪಾರ್ಟ್ ಮೆಂಟ್ ಗಳು 1320 ಚದರ ಅಡಿಯಿಂದ 2390 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಗ್ರಾಹಕರು ಈಗ ಅಕ್ಷರಶಃ ಪ್ರಕೃತಿಯ ಮಡಿಲಲ್ಲೇ ವಾಸಿಸಬಹುದು.

ಇದು ಬನ್ನೇರುಘಟ್ಟ ರಸ್ತೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ಸ್ಥಳಗಳಿಂದ ಕೇವಲ 15 ನಿಮಿಷಗಳಲ್ಲಿ ಕ್ರಮಿಸುವಷ್ಟು ದೂರದಲ್ಲಿದೆ. ಈ ಪ್ರೀಮಿಯಂ ಟವರ್ ಸ್ಥಳದೊಂದಿಗೆ ನಗರದ ಸಂಪರ್ಕವು ಕನಕಪುರ ರಸ್ತೆ, ನೈಸ್ ರಸ್ತೆ ಹಾಗೂ ಮೈಸೂರು ರಸ್ತೆ ಮೂಲಕ ತುಂಬಾ ಅನುಕೂಲಕರವಾಗಿದೆ.

ಬ್ರಿಗೇಡ್ ಒಮೇಗಾದಲ್ಲಿನ ಅಪಾರ್ಟ್ ಮೆಂಟ್ ಗಳು ಲಕ್ಷುರಿ ಫಿಟ್ಟಿಂಗ್ಸ್, ಕ್ಲಬ್ ಹೌಸ್ ಹಾಗೂ ಕ್ರೀಡಾ ಸೌಕರ್ಯಗಳನ್ನು ಹೊಂದಿವೆ. ಈ ಅಪಾರ್ಟ್ ಮೆಂಟ್ ಗಳ ಮಾದರಿ ಬೆಲೆ ರು.72 ಲಕ್ಷ ರೂ.ನಿಂದ ಆರಂಭವಾಗುತ್ತದೆ.

ಕಾನನದಿಂದ ಬೀಸುವ ಹಿತವಾದ ತಂಗಾಳಿ ಹಾಗೂ ನಿಮ್ಮ ಕಿಟಕಿಯ ಹೊರಗಿಂದ ಪ್ರಕೃತಿಯ ಸೊಬಗನ್ನು ಮುಂಜಾನೆಯ ಹಕ್ಕಿಗಳ ಚಿಲಿಪಿಲಿಯ ಧ್ವನಿಯೊಂದಿಗೆ ಆಸ್ವಾದಿಸಬಹುದು. ಬ್ರಿಗೇಡ್ ಒಮೇಗಾ ಪ್ರಕೃತಿಯ ಮಡಿಲಲ್ಲಿ ಇದ್ದರೂ, ನಗರಪ್ರದೇಶಕ್ಕೂ ಆದಷ್ಟು ಶೀಘ್ರವಾಗಿ ಸಂಪರ್ಕ ಕಲ್ಪಿಸುತ್ತದೆ.

Brigade Group White Mist
ಬ್ರಿಗೇಡ್ ಗ್ರೂಪ್ ಸೇಲ್ಸ್ ಹಾಗೂ ಮಾರ್ಕೆಟಿಂಗ್ ಉಪಾಧ್ಯಕ್ಷ ವಿಶ್ವ ಪ್ರತಾಪ್ ದೇಸು ಮಾತನಾಡುತ್ತಾ, "ನಗರಕ್ಕೆ ಸನಿಹದಲ್ಲೇ ಇರಬೇಕು, ಆದರೆ ಪ್ರಾಕೃತಿಕ ಸಂಪತ್ತಾದ ಶುದ್ಧ ಗಾಳಿ ಹಾಗೂ ಬೆಚ್ಚನೆಯ ಸೂರ್ಯರಶ್ಮಿಯನ್ನು ಅನುಭವಿಸಬೇಕು ಎಂದು ಬಯಸುವ ಮಂದಿಗಾಗಿ ಗುಣಮಟ್ಟದ ಹಾಗೂ ವೈಯಕ್ತಿಕ ಸ್ಥಳವನ್ನು ಒದಗಿಸುವ ರೀತಿಯಲ್ಲಿ ಬ್ರಿಗೇಡ್ ಒಮೇಗಾವನ್ನು ವಿನ್ಯಾಸಗೊಳಿಸಲಾಗಿದೆ'' ಎಂದರು.

ಈ ಪ್ರಾಜೆಕ್ಟ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮ್ಯಾಥ್ಯೂ ಅಬ್ರಾಹಂ- 080-4046 7600 ಅವರಿಗೆ ಕರೆ ಮಾಡಿ. ಅಥವಾ www.BrigadeOmega.com ಭೇಟಿ ನೀಡಿ ಮತ್ತು ಗ್ರೂಪ್ ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು www.BrigadeGroup.com ಭೇಟಿ ನೀಡಿ. (ಒನ್ಇಂಡಿಯಾ ಕನ್ನಡ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+