ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಪ್ಪಲಿ ವ್ಯಾಪಾರಕ್ಕೂ ಲಂಚ ಕೇಳಿ ಸಿಕ್ಕಿಬಿದ್ದ ಬಿಬಿಎಂಪಿ ಅಧಿಕಾರಿ !

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ಚಪ್ಪಲಿ ವ್ಯಾಪಾರ ನಡೆಸಲು ಪರವಾನಗಿ ನೀಡಲು ಹದಿನೈದು ಸಾವಿರ ಲಂಚ ಕೇಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಎಸಿಬಿಗೆ ಸಿಕ್ಕಿಬಿದ್ದಿದ್ದಾನೆ. ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಬಿಬಿಎಂಪಿ ಕಚೇರಿ ಆರೋಗ್ಯ ಅಧಿಕಾರಿ ಲೋಕೇಶ್ ಎಸಿಬಿ ಬಲೆಗೆ ಬಿದ್ದವರು.

ಜಯನಗರದ ನಿವಾಸಿ ಲಿಬರ್ಟಿ ಶೂ ವಹಿವಾಟು ನಡೆಸಲು ಅನುಮತಿ ಕೋರಿ ಬಿಬಿಎಂಪಿ ಆರೋಗ್ಯ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಹದಿನೈದು ಸಾವಿರ ಲಂಚ ನೀಡಿದರೆ ಪರವಾನಗಿ ನೀಡುವುದಾಗಿ ಆರೋಗ್ಯ ಅಧಿಕಾರಿ ಲೋಕೇಶ್ ಬೇಡಿಕೆ ಇಟ್ಟಿದ್ದರು. ಅರ್ಜಿದಾರ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.

Bribe: Bbmp Health Inspector Caught By Acb

Recommended Video

ಮಂಡ್ಯ: ಬೆಲ್ಲಕ್ಕೆ ಕಂಟಕವಾದ ಕಳಪೆ ಸಕ್ಕರೆ...! | Oneindia Kannada

ಸೋಮವಾರ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿ ಅಧಿಕಾರಿಯಿಂದ ಲಂಚದ ಹಣ ವಶಪಡಿಸಿಕೊಂಡಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿಕೊಳ್ಳಲಾಗಿದೆ. ಲೋಕೇಶ್ ಅವರನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

English summary
BBMP Health inspector has been caught by the ACB asking bribes to issue license for slippery business,know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X