ಜಲಮಂಡಳಿ ವಿರುದ್ಧ ಬಿಜೆಪಿ ಖಾಲಿ ಕೊಡದ ಪ್ರತಿಭಟನೆ

ಬೆಂಗಳೂರು, ಮಾರ್ಚ್ 10 : ಬೆಂಗಳೂರು ಜಲಮಂಡಳಿ ಪ್ರತಿ ಮನೆಯಿಂದ ಕೊಳವೆ ಬಾವಿ ಶುಲ್ಕ ವಸೂಲಿ ಮಾಡುವುದನ್ನು ಬಿಜೆಪಿ ಖಂಡಿಸಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿರುವ ಮಧ್ಯಮ ವರ್ಗದ ಜನರ ಮೇಲೆ ಹೊರೆ ಹಾಕಬಾರದು, ಶುಲ್ಕ ಸಂಗ್ರಹ ಮಾಡಬಾರದು ಎಂದು ಬಿಜೆಪಿ ಒತ್ತಾಯಿಸಿದೆ.

ಜಲಮಂಡಳಿ ಕಚೇರಿ ಮುಂದೆ ಗುರುವಾರ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಜಲಮಂಡಳಿಯ ವಿವೇಚನಾರಹಿತ ನಿರ್ಧಾರವನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಅವರನ್ನು ಬಿಡುಗಡೆ ಮಾಡಿದರು. [ಪ್ರೋರೇಟಾ ಶುಲ್ಕ ಹೆಚ್ಚಿಸಿದ ಬೆಂಗಳೂರು ಜಲಮಂಡಳಿ]

bjp

ಪ್ರತಿಭಟನೆ ಏಕೆ? : ಬಿಬಿಎಂಪಿ ವ್ಯಾಪ್ತಿಯಲ್ಲಿನ ನಿವೇಶನಗಳ ಮಾಲೀಕರು ಮೊದಲು ಪ್ರತಿ ತಿಂಗಳು 100 ರೂ. ಕೊಳವೆ ಬಾವಿ ಶುಲ್ಕವನ್ನು ಜಲಮಂಡಳಿಗೆ ಪಾವತಿ ಮಾಡುತ್ತಿದ್ದರು. 2016ರ ಜನವರಿಯಲ್ಲಿ ಜಲಮಂಡಳಿ ಈ ನಿಯಮದಲ್ಲಿ ಬದಲಾವಣೆ ಮಾಡಿದೆ. [ಹೊಸ ನೀರಿನ ಸಂಪರ್ಕಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಹಾಕಿ]

ಹೊಸ ನಿಯಮದಂತೆ ಕೊಳವೆ ಬಾವಿ ಹೊಂದಿರುವ ನಿವೇಶನದಲ್ಲಿರುವ ಎಲ್ಲಾ ಮನೆಯವರು 100 ರೂ. ಶುಲ್ಕ ಪಾವತಿ ಮಾಡಬೇಕಿದೆ. ಒಂದು ನಿವೇಶನದಲ್ಲಿ 7 ಮನೆಗಳಿದ್ದರೆ ಪ್ರತಿ ತಿಂಗಳು 700 ರೂ. ಶುಲ್ಕ ಪಾವತಿ ಮಾಡಬೇಕು. ಮನೆಯ ನೀರಿನ ಬಿಲ್ ಜೊತೆಯಲ್ಲಿಯೇ ಕೊಳವೆ ಬಾವಿ ಶುಲ್ಕವನ್ನು ಸೇರಿಸಿ ವಸೂಲಿ ಮಾಡಲಾಗುತ್ತಿದೆ. [ಕುಡಿಯುವ ನೀರಿಗೆ ಪ್ರಧಾನಿಗೆ ಪತ್ರ ಬರೆದ ಬೆಂಗಳೂರಿಗ]

bjp pretest

ಪ್ರತಿಮನೆಯಿಂದ ಕೊಳವೆ ಬಾವಿ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಜಲಮಂಡಳಿ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರಿಗೂ ಈ ಕುರಿತು ಮನವಿ ಸಲ್ಲಿಸಲಾಗಿದೆ.[ಶುದ್ಧ ಕುಡಿಯುವ ನೀರು ನೀಡಿದವರಿಗೆ ಅನಂತ ಧನ್ಯವಾದ]

5 ಲಕ್ಷ ಕೊಳವೆ ಬಾವಿಗಳು : ಬೆಂಗಳೂರು ನಗರದಲ್ಲಿ 5 ಲಕ್ಷ ಕೊಳವೆ ಬಾವಿಗಳು ಇದೆ ಎಂದು ಅಂದಾಜಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿದ 100 ಹಳ್ಳಿಗಳಿಂದ ಜಲಮಂಡಳಿ ಕೊಳವೆ ಬಾವಿ ಶುಲ್ಕವನ್ನು ಸಂಗ್ರಹಣೆ ಮಾಡುತ್ತಿಲ್ಲ. ಕೊಳವೆ ಬಾವಿ ನೀರನ್ನು ಒಳಚರಂಡಿಗೆ ಹರಿಸುವ ಮನೆಗಳಿಂದ ಮಾತ್ರ ಈಗ ಶುಲ್ಕವನ್ನು ಸಂಗ್ರಹ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+