ಎಕೋಸ್ಪೇಸ್ ಸರ್ವೀಸ್ ರಸ್ತೆಯಲ್ಲಿ ವಾಹನಕ್ಕಿಂತ ದೋಣಿಯೇ ಭೇಷ್

ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನ ಸಂಚಾರ ಪೊಲೀಸರಿಗೆ ನಮಸ್ಕಾರ ಮಾಡಬೇಕು. ಎಚ್ಎಸ್ಆರ್ ಲೇಔಟ್ ನ ಔಟರ್ ರಿಂಗ್ ರೋಡ್ ಎಕೋಸ್ಪೇಸ್ ಸರ್ವೀಸ್ ರಸ್ತೆಯಲ್ಲಿ ಜನರ ನೆರವಿಗೆ ನಿಂತಿರುವ ಪೊಲೀಸರನ್ನು ನೋಡಿದರೆ, ಬಿಳಿ- ಖಾಕಿ ದಿರಿಸಿನಲ್ಲಿ, ಬೂಟು ತೊಟ್ಟಿರುವ ದೇವರಂತೆ ಕಾಣುತ್ತಿದ್ದಾರೆ.

ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಇದು ಬರೀ ಕಾಲು ತೋಯಿಸುವಷ್ಟಲ್ಲ, ಸರಿ ಸುಮಾರು ಎರಡು ಅಡಿಯಷ್ಟು ಹರಿಯುತ್ತಿದೆ. ಸ್ಥಳದಲ್ಲಿರುವ ಪೊಲೀಸರು ವಾಹನ ಸವಾರರು ಹಾಗೂ ಚಾಲಕರ ನೆರವಿಗೆ ಧಾವಿಸಿದ್ದಾರೆ. ಈ ರಸ್ತೆಯಲ್ಲಿರುವ ಕಂಪನಿಗಳ ಬಳಿಯೂ ಕೂಡ ಚಿಕ್ಕ ಝರಿಯಂತೆ ಮಳೆ ನೀರು ಹರಿಯುತ್ತಿದೆ.

Boat is better option than other vehicles in HSR layout Ecospace service road

ವಿವಿಧ ಕಂಪನಿಗಳ ಉದ್ಯೋಗಿಗಳು ತಾವು ಕಚೇರಿಗೆ ತೆರಳುವಾಗ ಕಂಡ ದೃಶ್ಯಾವಳಿಗಳನ್ನು ಸೆರೆ ಹಿಡಿದು, ಫೇಸ್ ಬುಕ್ ನಲ್ಲಿ ಹಾಕುತ್ತಿದ್ದಾರೆ. ಇದರ ಜತೆಗೆ ತಮ್ಮ ಗೆಳೆಯ-ಗೆಳತಿಯರ ಟೆಲಿಗ್ರಾಮ್, ವಾಟ್ಸಾಪ್ ಗಳಿಗೂ ಫೋಟೋ- ವಿಡಿಯೋಗಳನ್ನು ಕಳಿಸುತ್ತಿದ್ದಾರೆ. ಒಟ್ಟಿನಲ್ಲಿ ಸ್ಕೂಟರ್-ಬೈಕ್ -ಕಾರು-ಆಟೋಗಿಂತ ತೆಪ್ಪ, ದೋಣಿಗಳ ಬಳಕೆ ಒಳ್ಳೆಯದೇನೋ ಎಂಬ ಸ್ಥಿತಿ ಏರ್ಪಟ್ಟಿದೆ.

Boat is better option than other vehicles in HSR layout Ecospace service road

ಎಕೋಸ್ಪೇಸ್ ನಲ್ಲಿರುವ ಆಕ್ಸೆಂಚರ್ ಕಂಪನಿ ಎದುರಿಗೆ ಸೋಮವಾರ ಮಧ್ಯಾಹ್ನವಾದರೂ ಇನ್ನೂ ನೀರು ಹಾಗೇ ನಿಂತಿತ್ತು. ಕೆಲವು ಕಂಪನಿಯವರು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಈಗಾಗಲೇ ಸೂಚನೆ ನೀಡಿದ್ದಾರೆ. ಆದರೆ ಈ ರೀತಿ ಅವಕಾಶ ಎಲ್ಲ ಕಂಪನಿ ಉದ್ಯೋಗಿಗಳಿಗೆ ಸಿಕ್ಕಿಲ್ಲ.

ಇನ್ನು ಕೆಂಗೇರಿಯ ಗ್ಲೋಬಲ್ ವಿಲೇಜ್ ಒಳಗಿರುವ ಆಕ್ಸೆಂಚರ್ ಕಂಪನಿಯ ಒಳಗೆ ಭಾರೀ ಪ್ರಮಾಣದದಲ್ಲಿ ನೀರು ಹರಿದಿದ್ದು, ಅದನ್ನು ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ. ಆ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+