BMTC Free Travel: 2ನೇ ಪಿಯುಸಿ ಪೂರಕ ಪರೀಕ್ಷೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ

ಬೆಂಗಳೂರು, ಆಗಸ್ಟ್ 18: ರಾಜ್ಯದಲ್ಲಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎರಡನೇ ಪೂರಕ ಪರೀಕ್ಷೆ ಆಗಸ್ಟ್ 21 ರಿಂದ ಸೆಪ್ಟೆಂಬರ್ 2ರ ತನಕ ನಡೆಯಲಿವೆ. ಈ ವೇಳೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಿಎಂಟಿಸಿಯು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಒದಗಿಸಲಿದೆ.

ಪರೀಕ್ಷೆ ಬರೆಯುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮನೆಯಿಂದ ಪರೀಕ್ಷಾ ಕೇಂದ್ರವರೆಗೆ ಬಿಎಂಟಿಸಿಯಲ್ಲಿ ಓಡಾಡಬಹುದಾಗಿದೆ. ಪರೀಕ್ಷೆ ದಿನಾಂಕ ಘೋಷಣೆ ಆಗುತ್ತಿದ್ದಂತೆ KSRTC ನಿಗಮ ಸಹ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ನೀಡುವ ಬಗ್ಗೆ ತಿಳಿಸಿತ್ತು. ಅದರ ಬೆನ್ನಲ್ಲೆ BMTC ಸಹ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ನೀಡುವ ಬಗ್ಗೆ ಪ್ರಕಟಣೆ ಹೊರಿಡಿಸಿದೆ.

BMTC Will Be Provide Free Travel For 2nd PUC Supplementary Exam Students From August 21st

ಉಚಿತ ಬಸ್ ಸೇವೆ ಪಡೆಯುವ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರ (Hall Ticket) ತೋರಿಸಿ ಬಿಎಂಟಿಸಿ ಬಸ್​ಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಬಹುದಾಗಿದೆ. ವಿದ್ಯಾರ್ಥಿಗಳಿಗೆ ಎಸಿ ಬಸ್ ಹೊರತಾಗಿ ಸಾಮಾನ್ಯ ಬಿಎಂಟಿಸಿ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಇರಲಿದೆ ಎಂದು ನಿಗಮ ಮಾಹಿತಿ ನೀಡಿದೆ.

ಅನುತ್ತೀರ್ಣರು ಪರೀಕ್ಷೆಗೆ ಅರ್ಹರು

CBSE ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಜುಲೈ 27 ರಂದು ನಡೆದಿತ್ತು. ಕಳೆದ ಆ. 01 ರಂದು ಅದರ ಫಲಿತಾಂಶ ಪ್ರಕಟಗೊಂಡಿತ್ತು. ಕೆಲವು ವಿರೋಧಗಳ ಮಧ್ಯೆ ರಾಜ್ಯ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ 2ನೇ ಪೂರಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ಹಿಂದಿನ ಸಾಲಿನಲ್ಲಿ ಪಾಸಾಗದವರು ಈ ಎರಡನೇ ಪೂರಕ ಪರೀಕ್ಷೆಗೆ ಬರೆಯಬಹುದಾಗಿದೆ.

BMTC Will Be Provide Free Travel For 2nd PUC Supplementary Exam Students From August 21st

ಈ ಪರೀಕ್ಷೆ ಘೋಷಣೆ ಆಗುತ್ತಿದ್ದಂತೆ KSRTC ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ನಿಗಮದ ಬಸ್​ನಲ್ಲಿ ಉಚಿತ ಉಚಿತ ಬಸ್ ಸೇವೆ ನೀಡುವ ಬಗ್ಗೆ ಘೋಷಿಸಿತು. ವಾಸಿಸುವ ಸ್ಥಳ, ಹೊರ ವಲಯದಿಂದ ಪರೀಕ್ಷಾ ಕೇಂದ್ರಗಳಿಗೆ KSRTC ಯ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿತು. ಇದೀಗ ಬಿಎಂಟಿಸಿ ಬಸ್ ಸಹ ಉಚಿತ ಸೇವೆ ನೀಡಲಿದ್ದು, ವಿದ್ಯಾರ್ಥಿಗಳು ಅಗತ್ಯ ದಾಖಲೆ ತೋರಿಸಿ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+