BMTC Accident Video: ಬೆಚ್ಚಿ ಬೀಳಿಸುತ್ತೆ ಬಿಎಂಟಿಸಿ ವೋಲ್ವೋ ಬಸ್ ಆಕ್ಸಿಡೆಂಟ್ ವಿಡಿಯೋ
ಬೆಂಗಳೂರು ಆಗಸ್ಟ್ 13: ಬೆಂಗಳೂರು ಅಂದರೆ ಟ್ರಾಫಿಕ್ ಜಾಮ್. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಬೇಕಾದರೆ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯಬೇಕಾದ ಸ್ಥಿತಿ ಇದೆ. ಈ ನಡುವೆ ಅಪಘಾತಗಳು ಸಂಭವಿಸಿದರೆ ಮುಗಿತು ಜನ ತಾವಂದುಕೊಂಡ ಸ್ಥಳಕ್ಕೆ ಹೋಗುವುದು ಗಂಟೆಗಳವರೆಗೆ ತಡವಾಯಿತು ಅಂತಲೇ ಅರ್ಥ. ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಅಪಘಾತವೊಂದು ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಬಿಎಂಟಿಸಿ ವೋಲ್ವೋ ಬಸ್‌ನಿಂದ ಸರಣಿ ಅಪಘಾತ ಸಂಭವಿಸಿದ್ದು ಆಕ್ಸಿಡೆಂಟ್‌ನ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ನಿನ್ನೆ ಬೆಳಿಗ್ಗೆ 9-25ಕ್ಕೆ ಹೆಬ್ಬಾಳ ಫ್ಲೈ ಓವರ್ ಮೇಲೆ ಈ ಘಟನೆ ನಡೆದಿದೆ. ಏರ್ಪೋರ್ಟ್ ನಿಂದ ಎಚ್ಎಸ್ಆರ್ ಲೇಔಟ್ ಕಡೆ ಸಂಚಾರ ಮಾಡ್ತಿದ್ದ ಬಸ್ ಏಕಾಏಕಿ ಮುಂಬದಿ ವಾಹನ ಸವಾರರ ಮೇಲೆ ನುಗ್ಗಿದೆ. ಹೆಬ್ಬಾಳದ ಎಸ್.ಟಿ ಮಾಲ್ ಬಳಿ ಈ ದುರ್ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

ಬಿಎಂಟಿಸಿ ಚಾಲಕ ರಾಜ ಕುಮಾರ್ ನಾಲ್ಕು ಟೂ ವೀಲರ್, ನಾಲ್ಕು ಕಾರುಗಳಿಗೆ ಗುದ್ದಿದ್ದಾನೆ. ಬಿಎಂಟಿಸಿ ವೋಲ್ವೋ ಬಸ್ ನಂ- KA57F-1794 ಎಂದು ಗುರುತಿಸಲಾಗಿದೆ. ಇದರಿಂದ ಒಬ್ಬ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
A bus driver lost control on the Hebbal Flyover, #Bengaluru crashing into multiple vehicles. Two people were injured, with one hospitalized.pic.twitter.com/Jcn4ugb268
— Nishkama_Karma (@Nishkama_Karma1) August 13, 2024
ಬಸ್ ಗುದಿದ್ದರಿಂದ ನಡುರೋಡಲ್ಲಿ ವಾಹನ ಸವಾರರು ಕಿರುಚಿ ಕೂಗಾಡಿದ್ದಾರೆ. ಚೂರು ಹೆಚ್ಚು ಕಮ್ಮಿ ಆಗಿದ್ರೆ ಹತ್ತಾರು ವಾಹನ ಸವಾರರ ಪ್ರಾಣ ಹೋಗ್ತಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮೊದಲು ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುತ್ತದೆ. ಆಗ ಬಸ್ ಚಾಲಕ ಬ್ರೇಕ್ ಹಾಕಲು ಯತ್ನಿಸುತ್ತಾನೆ. ಆದರೆ ಬ್ರೇಕ್ ಕೈಕೊಟ್ಟು ಬಸ್ ನಿಲ್ಲದೇ ಮುಂದಕ್ಕೆ ಸಾಗಿದೆ. ಇದು ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ಹಲವರಿಗೆ ಗಾಯವಾಗಿದೆ. ಬಸ್ ಮುಂಬದಿಯ ವಾಹನ ಸವಾರರಿಗೆ ಗುದ್ದಿದ್ದರಿಂದ ಬೈಕ್‌ನಲ್ಲಿದ್ದ ಸವಾರರು ಕಿರುಚಾಡಿದ್ದಾರೆ. ಜೊತೆಗೆ ಬಸ್‌ಗೆ ಒಬ್ಬ ಸವಾರ ಸಿಕ್ಕಿಕೊಂಡಿದ್ದು ಆತನ ಕಾಲಿಗೆ ಬಲವಾಗಿ ಬೆಟ್ಟು ಬಿದ್ದಿದೆ.

ಒಂದು ವೇಳೆ ಇದೇ ರೀತಿ ಮುಂದೆ ಬಸ್ ಸಾಗಿದ್ದರೆ ಅಪಘಾತ ದೊಡ್ಡ ಪ್ರಮಾಣದಲ್ಲಿ ಆಗುತ್ತಿತ್ತು. ಹಲವಾರು ಜನರ ಪ್ರಾಣ ಕಳೆದುಕೊಳ್ಳಬೇಕಾಗುತ್ತಿತ್ತು. ಆದರೆ ಬಸ್ ಕೆಲ ವಾಹನಗಳಿಗೆ ಡಿಕ್ಕಿ ಹೊಡೆದು ನಂತರ ಮುಂದೆ ಹೋಗಿ ನಿಂತಿದೆ.
ಈ ಘಟನೆಯಿಂದಾಗಿ ಸವಾರರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿವೆ. ಕೆಲವರು ವಾಹನ ಸವಾರರು ಓವರ್‌ಟೇಕ್ ಮಾಡಿದ್ದಾರೆ ಎಂದು ಹೇಳಿದರೆ, ಇನ್ನೂ ಕೆಲವರು ಬಿಎಂಟಿಸಿ ಬಸ್ ಚಾಲಕನದ್ದೇ ತಪ್ಪು ಎಂದಿದ್ದಾರೆ. ಇನ್ನೂ ಕೆಲವರು ಟ್ರಾಫಿಕ್ ಜಾಮ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications