BMTC: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ, ಅಧಿಕವಾಗಲಿದೆ ಮೆಟ್ರೋ ಫೀಡರ್ ಬಸ್‌ ಸಂಖ್ಯೆ

ಬೆಂಗಳೂರು, ಡಿಸೆಂಬರ್ 14: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಫೀಡರ್ ಬಸ್‌ಗಳನ್ನು ಓಡಿಸುತ್ತಿದೆ. ಈ ಯೋಜನೆಯಡಿ ಬಿಎಂಟಿಸಿ ಮಿಡಿ ಬಸ್‌ಗಳನ್ನು ಖರೀದಿ ಮಾಡುವ ಸಂಸ್ಥೆಯ ಪ್ರಯತ್ನ ವಿಫಲವಾಗಿದೆ. ಆದ್ದರಿಂದ ಎಲೆಕ್ಟ್ರಿಕ್ ಬಸ್‌ಗಳನ್ನು ಲೀಸ್ ಮೇಲೆ ಪಡೆದು, ಅವುಗಳನ್ನು ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಓಡಿಸಲು ತೀರ್ಮಾನಿಸಿದೆ.

ಪ್ರಸ್ತುತ ಬಿಎಂಟಿಸಿ 151 ಮೆಟ್ರೋ ಫೀಡರ್‌ ಬಸ್‌ಗಳನ್ನು ಓಡಿಸುತ್ತಿದೆ. ನಗರದಲ್ಲಿ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದ್ದು, 2025ರಲ್ಲಿ ಹಳದಿ ಮಾರ್ಗದಲ್ಲಿ ಸಹ ಮೆಟ್ರೋ ಸಂಚಾರ ಆರಂಭವಾಗಲಿದ್ದು, ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗಲಿದೆ. ಆದ್ದರಿಂದ ಮೆಟ್ರೋ ಫೀಡರ್ ಬಸ್‌ಗಳ ಸಂಖ್ಯೆ ಹೆಚ್ಚಿಸಲು ಬಿಎಂಟಿಸಿ ಮುಂದಾಗಿದೆ.

BMTC To Run Full Length E Buses For Namma Metro Feeder Routes

ಬಿಎಂಟಿಸಿ ಮಾಹಿತಿ ಪ್ರಕಾರ ಮೆಟ್ರೋ ಫೀಡರ್ ಬಸ್‌ಗಳ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲು ಬಿಎಂಟಿಸಿ ಮುಂದಾಗಿದೆ. 2023ರ ಡಿಸೆಂಬರ್‌ನಲ್ಲಿ ಮೆಟ್ರೋ ಫೀಡರ್ ಸೇವೆಗೆ ಮಿಡಿ ಬಸ್‌ಗಳನ್ನು ಖರೀದಿ ಮಾಡಲು ಬಿಎಂಟಿಸಿ ಟೆಂಡರ್ ಕರೆದಿತ್ತು, 2024ರ ಮಾರ್ಚ್‌ನಲ್ಲಿ ಪುನಃ ಟೆಂಡರ್ ಕರೆಯಲಾಗಿತ್ತು. ಆದರೆ ಅಧಿಕ ಬಿಡ್‌ಗಳ ಕಾರಣ ಹೊಸ ಬಸ್ ಖರೀದಿ ಒಪ್ಪಂದವನ್ನು ಬಿಎಂಟಿಸಿ ಕೈ ಬಿಟ್ಟಿದೆ.

ಎಲೆಕ್ಟ್ರಿಕ್ ಬಸ್ ಓಡಿಸಲಿದೆ: 120 ಮಿಡಿ ಬಸ್ ಖರೀದಿ ಪ್ರಕ್ರಿಯೆ ದುಬಾರಿಯಾದ ಕಾರಣ ಟಾಟಾ ಮೋಟಾರ್ಸ್ ಸಬ್ಸಿಡರಿ ಮೂಲಕ ಬಿಎಂಟಿಸಿ 148 ಉದ್ದವಾದ ಎಲೆಕ್ಟ್ರಿಕ್‌ ಬಸ್‌ಗಳನ್ನೇ ಲೀಸ್ ಮೇಲೆ ಪಡೆಯಲಿದೆ. ಇದನ್ನು ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಮೆಟ್ರೋ ಫೀಡರ್ ಬಸ್ ಆಗಿ ಓಡಿಸಲಿದೆ.

ಬಿಎಂಟಿಸಿ ಟೆಂಡರ್‌ನಲ್ಲಿ ಪ್ರತಿದಿನ 180 ಕಿ. ಮೀ. ಸಂಚಾರ ನಡೆಸಬೇಕು. ವಾರ್ಷಿಕ 350 ದಿನ ಅಥವ 63,000 ಕಿ. ಮೀ. ಸಂಚಾರ ನಡೆಸಬೇಕು ಎಂದು ಷರತ್ತು ವಿಧಿಸಿತ್ತು. ಅಲ್ಲದೇ ಬಸ್‌ಗಳನ್ನು ನೀಡುವ ಕಂಪನಿಯೇ ಡ್ರೈವರ್ ಒದಗಿಸಬೇಕು ಎಂದು ಹೇಳಿತ್ತು. ಆದರೆ ಈ ಟೆಂಡರ್‌ಗೆ ಯಾರೂ ಸಹ ಒಪ್ಪಿಗೆ ನೀಡಲಿಲ್ಲ.

2ನೇ ಬಾರಿಗೆ ಟೆಂಡರ್‌ನಲ್ಲಿ ಅಶೋಕ್ ಲೈಲ್ಯಾಂಡ್‌ನ ಸಬ್ಸಿಡರಿ ಕಂಪನಿ ಸ್ವಿಚ್ ಮೊಬಿಲಿಟಿ ಒಂದೇ ಪಾಲ್ಗೊಂಡಿತ್ತು. ಅದು ಕಿ. ಮೀ. ಗೆ 88 ರೂ. ನೀಡಬೇಕು ಎಂದು ಬಿಡ್ ಮಾಡಿತು. ಆದರೆ ಮಾತುಕತೆಗಳ ಬಳಿಕ 86 ರೂ.ಗಳಿಗೆ ಒಪ್ಪಿಗೆ ಸೂಚಿಸಲಾಗಿತ್ತು. ಇದು ಸಹ ಅಧಿಕ ದರ ಎಂಬ ಕಾರಣಕ್ಕೆ ಬಸ್ ಖರೀದಿಯನ್ನೇ ಬಿಎಂಟಿಸಿ ಕೈ ಬಿಟ್ಟಿದೆ.

ಸದ್ಯದ ಮಾಹಿತಿ ಪ್ರಕಾರ ಟಾಟಾ ಮೋಟಾರ್ಸ್ ಸಬ್ಸಿಡರಿ ಕಂಪನಿ ಟಿಎಂಎಲ್ ಸ್ಮಾರ್ಟ್‌ ಸಿಟಿ ಮೊಬಿಲಿಟಿ ಸಲ್ಯೂಷನ್ಸ್ ಈಗಾಗಲೇ ಬಿಎಂಟಿಸಿಗೆ 40.01 ಕಿ. ಮೀ. ದರಕ್ಕೆ ನಾನ್‌-ಎಸಿ ಇ-ಬಸ್‌ಗಳನ್ನು ಗುತ್ತಿಗೆ ನೀಡಿದೆ. ಅಶೋಕ್ ಲೈಲ್ಯಾಂಡ್‌ನ ಒಹೆಚ್‌ಎಂ ಮೊಬಿಲಿಟಿ 320 ಎಸಿ ಬಸ್‌ಗಳನ್ನು ಕಿ. ಮೀ.ಗೆ 65.8 ದರದಲ್ಲಿ ನೀಡಿದೆ.

ಆದ್ದರಿಂದ ಹೊಸ ಮಿಡಿ ಬಸ್ ಖರೀದಿ ಮಾಡುವ ಬದಲು 148 ಹೊಸ ಇಲೆಕ್ಟ್ರಿಕ್ ಬಸ್‌ ಲೀಸ್ ಮೇಲೆ ಪಡೆದು ಓಡಿಸಲು ಬಿಎಂಟಿಸಿ ಮುಂದಾಗಿದೆ. ಸರ್ಕಾರದ ಒಪ್ಪಿಗೆಯನ್ನು ಪಡೆದು ಮುಂದಿನ ಪ್ರಕ್ರಿಯೆ ಕೈಗೊಳ್ಳಲು ಬಿಎಂಟಿಸಿ ಮುಂದಾಗಿದೆ. ಬಿಎಂಟಿಸ್ ಬಸ್ ಲೀಸ್ ಅವಧಿ 12 ವರ್ಷಗಳಾಗಿದ್ದು, ಇದರಿಂದಾಗಿ ಸಂಸ್ಥೆ, ಕಂಪನಿ ಎರಡಕ್ಕೂ ಅನುಕೂಲವಾಗಲಿದೆ ಎಂಬುದು ಅಂದಾಜಿಸಲಾಗಿದೆ.

ಈಗಾಗಲೇ ಟಾಟಾ ಜೊತೆ 921 ಬಸ್ ಪೂರೈಕೆಗೆ ಬಿಎಂಟಿಸಿ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ 841 ಇ-ಬಸ್‌ಗಳು ಈಗಾಗಲೇ ಪೂರೈಕೆಯಾಗಿವೆ. 80 ಬಸ್‌ಗಳು 2025ರ ಮಾರ್ಚ್‌ನಲ್ಲಿ ಆಗಮಿಸಲಿವೆ. ಮುಂದಿನ ವರ್ಷ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗುವ ಕಾರಣ ಹೊಸ ಫೀಡರ್‌ ಬಸ್‌ಗಳನ್ನು ಬಿಎಂಟಿಸಿ ಓಡಿಸಲಿದೆ.

ಸದ್ಯ 151 ಮೆಟ್ರೋ ಫೀಡರ್ ಬಸ್‌ಗಳು 43 ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕವನ್ನು ಕಲ್ಪಿಸುತ್ತಿವೆ. ಅಂದಾಜಿನ ಪ್ರಕಾರ ಈ ಬಸ್‌ಗಳಲ್ಲಿ ಪ್ರತಿದಿನ 1 ಲಕ್ಷ ಜನರು ಸಂಚಾರವನ್ನು ನಡೆಸುತ್ತಿದ್ದಾರೆ. ನಮ್ಮ ಮೆಟ್ರೋ ಫೀಡರ್ ಬಸ್‌ಗೆ ಬೇಡಿಕೆಯೂ ಹೆಚ್ಚಿದ್ದು, ಬಿಎಂಟಿಸಿ ಬಸ್ ಓಡಿಸಲು ಯೋಜನೆ ರೂಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+