ಬಿಎಂಟಿಸಿ ವೊಲ್ವೋ ಬಸ್ಸುಗಳಲ್ಲಿ ಉಚಿತ ವೈಫೈ ಸೇವೆ

ಬೆಂಗಳೂರು, ನವೆಂಬರ್ 27 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವೊಲ್ವೋ ಬಸ್ಸುಗಳಲ್ಲಿ ಉಚಿತವಾಗಿ ವೈಫೈ ಸೇವೆ ಒದಗಿಸಲು ನಿರ್ಧರಿಸಿದೆ. ವಿಮಾನ ನಿಲ್ದಾಣ ಮತ್ತು ಐಟಿ ಕಾರಿಡಾರ್‌ಗಳಲ್ಲಿ ಸಂಚರಿಸುವ ಬಸ್ಸುಗಳಲ್ಲಿ ಮಾತ್ರ ಈ ಸೌಲಭ್ಯ ದೊರೆಯತ್ತದೆ.

ಐಟಿ ಉದ್ಯೋಗಿಗಳನ್ನು ಸೆಳೆಯಲು ಬಿಎಂಟಿಸಿ ವೈಫೈ ಸೌಲಭ್ಯ ನೀಡಲು ಮುಂದಾಗಿದೆ. ಪ್ರಾಯೋಗಿಕವಾಗಿ ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ಐಟಿ ಕಾರಿಡಾರ್‌ಗಳಲ್ಲಿ ಸಂಚಾರ ನಡೆಸುವ ಸುಮಾರು 200 ಬಸ್ಸುಗಳಿಗೆ ವೈಫೈ ಆಳವಡಿಸಲಾಗುತ್ತದೆ. [ಉದ್ಧಟತನದ ಚಾಲಕರ ಕಿವಿ ಹಿಂಡಲು ಮುಂದಾದ ಬಿಎಂಟಿಸಿ]

bmtc

ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ವಾಯು ವಜ್ರ ಮತ್ತು ಐಟಿ ಕಾರಿಡಾರ್‌ಗಳಲ್ಲಿ ಸಂಚಾರ ನಡೆಸುವ ವಜ್ರ ಬಸ್ಸುಗಳಲ್ಲಿ ವೈಫೈ ಆಳವಡಿಸಲು ಬಿಎಂಟಿಸಿ ಟೆಂಡರ್ ಕರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. [ಬೆಂಗಳೂರು ರಸ್ತೆಗಿಳಿದ ಯುಡಿ ವೋಲ್ವೊ ಬಸ್ ವಿಶೇಷತೆ ಏನು?]

ಸಮೀಕ್ಷೆ ವರದಿ : ವೊಲ್ವೋ ಬಸ್ಸುಗಳಲ್ಲಿ ವೈಫೈ ಸೌಲಭ್ಯ ಒದಗಿಸುವ ಕುರಿತು ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆ ವರದಿಯೂ ಈ ಸೇವೆ ಸಹಾಯಕವಾಗಲಿದೆ ಎಂದು ಬಂದಿರುವುದರಿಂದ ಪ್ರಾಯೋಗಿಕವಾಗಿ ಸೇವೆ ಆರಂಭಿಸಲು ಬಿಎಂಟಿಸಿ ಮುಂದಾಗಿದೆ. [ಅಂದ ಹಾಗೆ ಈ ಕಂಡಕ್ಟರ್ ಹೆಸರು ತಾಂಡಚಂದ್!]

ಮೆಜೆಸ್ಟಿಕ್‌ನಿಂದ ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್‌ ಮುಂತಾದ ಸ್ಥಳಗಳಿಗೆ ತಲುಪಲು ಕನಿಷ್ಠ ಒಂದೂವರೆ ಗಂಟೆ ಬೇಕು. ಆದ್ದರಿಂದ ಕೆಲವು ಸಿಬ್ಬಂದಿಗಳು ಕಾರು, ಟ್ಯಾಕ್ಸಿಗಳನ್ನು ಬಳಸುತ್ತಾರೆ. ಬಸ್ಸುಗಳಲ್ಲಿ ವೈಫೈ ಸೌಲಭ್ಯ ನೀಡಿದರೆ ಅವರು ಪ್ರಯಾಣದ ವೇಳೆಯೂ ಕೆಲಸ ಮಾಡಬಹುದು ಎನ್ನುತ್ತಾರೆ ಅಧಿಕಾರಿಗಳು.

ಬಸ್ಸುಗಳಲ್ಲಿ ಸಿಸಿಟಿವಿ ಆಳವಡಿಕೆ : ಮಹಿಳೆಯರ ಸುರಕ್ಷತೆ ದೃಷ್ಠಿಯಿಂದ ಎಲ್ಲಾ ಬಸ್ಸುಗಳಲ್ಲಿ ಸಿಸಿಟಿವಿ ಅಳವಡಿಸಲು ಬಿಎಂಟಿಸಿ ಮುಂದಾಗಿದೆ. ಸಿಸಿಟಿವಿ ಕಡ್ಡಾಯವಾಗಿ ಅಳವಡಿಸುವಂತೆ ಗೃಹ ಇಲಾಖೆ ಈಗಾಗಲೇ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+