ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

810 ಹೊಸ ಬಸ್ ಖರೀದಿಗೆ ಮುಂದಾದ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಜೂನ್ 4 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 810 ಹೊಸ ಬಸ್ಸುಗಳನ್ನು ಖರೀದಿ ಮಾಡಲು ಸಿದ್ಧತೆ ನಡೆಸಿದೆ. ಜವಾಹರ್‌ಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆಯಡಿ ಈ ಬಸ್ಸುಗಳನ್ನು ಖರೀದಿಸಲಾಗುತ್ತಿದ್ದು, ಇವುಗಳಲ್ಲಿ ಎಸಿ ಮತ್ತು ಸಾಮಾನ್ಯ ಬಸ್ ಗಳು ಸೇರಿವೆ.

ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದು, ಬಿಎಂಟಿಸಿಗೆ 810 ಮತ್ತು ಕೆಎಸ್ಆರ್ ಟಿಸಿಗೆ 1,200 ಬಸ್ಸುಗಳನ್ನು ಖರೀದಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಬಿಎಂಟಿಸಿ 500 ಬಸ್ಸುಗಳನ್ನು ಖರೀದಿಸಲು ಕೇಂದ್ರ ಸರ್ಕಾದ ಒಪ್ಪಿಗೆಗಾಗಿ ಕಾದು ಕುಳಿತಿದೆ.

BMTC

ಬಿಎಂಟಿಸಿ ಖರೀದಿಸಲಿರುವ ನೂತನ 810 ಬಸ್ಸುಗಳಲ್ಲಿ 500 ಸಾಮಾನ್ಯ ಬಸ್ಸುಗಳಾಗಿದ್ದು, 310 ಎಸಿ ಬಸ್ಸುಗಳಾಗಿವೆ. ಜವಾಹರ್‌ಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆಯಡಿ ಈ ಬಸ್ ಗಳನ್ನು ಖರೀದಿ ಮಾಡಲಾಗುತ್ತಿದೆ. [250 ರೂ.ನೀಡಿ, ಬೆಂಗಳೂರು ನೋಡಿ]

ನೂತನವಾಗಿ ಖರೀದಿ ಮಾಡಲಾದ 500 ಬಸ್ಸುಗಳನ್ನು ಹಳೆಯ ಬಸ್ಸುಗಳು ಸಂಚರಿಸುವ ಮಾರ್ಗದಲ್ಲಿ ಓಡಿಸಲು ಚಿಂತನೆ ನಡೆಸಲಾಗಿದೆ. ಉಳಿದ ಬಸ್ಸುಗಳಲ್ಲಿ ನೂತನ ಮಾರ್ಗ ಬಸ್ಸುಗಳ ಸಂಖ್ಯೆ ಕಡಿಮೆ ಇರುವ ಮಾರ್ಗದಲ್ಲಿ ಓಡಿಸಲಾಗುತ್ತದೆ. [ಎರಡು ಹೊಸ ಮಾರ್ಗದಲ್ಲಿ ವಜ್ರ ಬಸ್ ಸೇವೆ]

ಕೇಂದ್ರ ಸರ್ಕಾರ ನೂತನ ಬಸ್ಸುಗಳ ಖರೀದಿಗಾಗಿ ಶೇ 35ರಷ್ಟು ಅನುದಾನ ನೀಡಲಿದೆ. ಶೇ 15ರಷ್ಟು ಅನುದಾನ ರಾಜ್ಯಸರ್ಕಾರದಿಂದ ಉಳಿದ 50 ರಷ್ಟು ಅನುದಾನದ ಪಾಲು ಬಿಎಂಟಿಸಿ ಸಂಸ್ಥೆಯದ್ದಾಗಿದೆ. 310 ಎಸಿ ಬಸ್ಸುಗಳನ್ನು ಖರೀದಿ ಮಾಡಲು ಈಗಾಗಲೇ ಒಪ್ಪಿಗೆ ದೊರಕಿದ್ದು, ಸದ್ಯದಲ್ಲೇ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.

English summary
The Bangalore Metropolitan Transport Corporation(BMTC) will purchase 810 new buses under the Centre’s Jawaharlal Nehru National Urban Renewal Mission scheme. In new buses as many as 500 buses are non-a/c buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X