BMTC: 1 ಕೋಟಿ ರೂ. ದಾಟಿದ ಬಿಎಂಟಿಸಿ ಯುಪಿಐ ಟಿಕೆಟ್‌ ಆದಾಯ

ಬೆಂಗಳೂರು, ಫೆಬ್ರವರಿ 09: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಯುಪಿಐ ಆಧಾರಿತ ಆ್ಯಪ್‌ಗಳ ಮೂಲಕ ಹಣ ಪಾವತಿಸಿಕೊಂಡು ಟಿಕೆಟ್‌ ನೀಡುವ ವ್ಯವಸ್ಥೆ ಜಾರಿಗೊಳಿಸಿದೆ. ನಗದು ತೆಗೆದುಕೊಂಡು ಹೋಗುವುದು, ಚಿಲ್ಲರೆ ಸಮಸ್ಯೆ ತಪ್ಪುವ ಕಾರಣಕ್ಕೆ ಈ ಸೇವೆಗೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಎಂಟಿಸಿ ಯುಪಿಐ ಆಧಾರಿತ ಟಿಕೆಟ್ ವ್ಯವಸ್ಥೆಯ ಆದಾಯ 1 ಕೋಟಿ ರೂ. ಗಡಿ ದಾಟಿದೆ.

ಕರ್ನಾಟಕ ಸರ್ಕಾರ 2025ರ ಜನವರಿ 5ರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಬಸ್‌ಗಳ ಪ್ರಯಾಣ ದರವನ್ನು ಏರಿಕೆ ಮಾಡಿತು. ಬಿಎಂಟಿಸಿ ಪ್ರಯಾಣ ದರವೂ ಶೇ 15ರಷ್ಟು ಏರಿಕೆ ಕಂಡಿತು. ಈ ದರ ಏರಿಕೆ ಬಳಿಕ ಪ್ರಯಾಣಿಕರು ಯುಪಿಐ ಬಳಕೆ ಹೆಚ್ಚಿಸಿದ್ದಾರೆ. 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಇದೆ. ಪುರುಷರು ಟಿಕೆಟ್ ಪಡೆದು ಪ್ರಯಾಣಿಸಬೇಕಿದೆ.

BMTC Ticket UPI Transactions Touched Rs 1 Crore

ಸದ್ಯ ಬಿಎಂಟಿಸಿಯಲ್ಲಿ ಯುಪಿಐ ಆಧಾರಿತ ಆ್ಯಪ್‌ಗಳ ಮೂಲಕ ಹಣ ಪಾವತಿಸಿಕೊಂಡು ಟಿಕೆಟ್‌ ಪಡೆಯುವುದರಿಂದ ಬರುವ ಪ್ರತಿದಿನದ ಆದಾಯ 1 ಕೋಟಿ ರೂ. ಗಡಿಯನ್ನು ದಾಟಿದೆ. ಚಿಲ್ಲರೆಯ ವಿಚಾರಕ್ಕೆ ಜಗಳವಿಲ್ಲದೇ, ಜೇಬಿನಲ್ಲಿ ಎಷ್ಟು ಹಣವಿದೆ ಎಂದು ಲೆಕ್ಕ ಹಾಕುವುದು ತಪ್ಪುವ ಕಾರಣ ಜನರು ಸಹ ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

56 ಲಕ್ಷದಿಂದ 1 ಕೋಟಿ ರೂ.ಗೆ ಏರಿಕೆ: ಬಿಎಂಟಿಸಿ ಮಾಹಿತಿ ಪ್ರಕಾರ ಯುಪಿಐ ಆಧಾರಿತ ಆ್ಯಪ್‌ಗಳ ಮೂಲಕ ಹಣ ನೀಡಿ ಟಿಕೆಟ್‌ ಪಡೆಯುವ ಆದಾಯ ಜನವರಿ 9 ರಂದು 56.6 ಲಕ್ಷ ಇತ್ತು. ಜನವರಿ 13ರಂದು 60.05 ಲಕ್ಷ ಆಗಿತ್ತು. ಜನವರಿ 20ರಂದು 80.01 ಲಕ್ಷ ಆಯಿತು. ಜನವರಿ 27ರಂದು 90.09 ಲಕ್ಷಕ್ಕೆ ಏರಿಕೆ ಆಗಿತ್ತು. ಫೆಬ್ರವರಿ 3ರಂದು ಇದು 1.03 ಕೋಟಿ ರೂ.ಗೆ ತಲುಪಿದೆ.

ಬಿಎಂಟಿಸಿಯಲ್ಲಿ ಶೇ 32ರಷ್ಟು ಟಿಕೆಟ್‌ಗಳನ್ನು ಯುಪಿಐ ಆಧಾರಿತ ಪಾವತಿ ವ್ಯವಸ್ಥೆ ಮೂಲಕ ನೀಡಲಾಗುತ್ತಿದೆ. ಈ ಮೊದಲು ಇದು ಶೇ 10ರಷ್ಟಿತ್ತು. 2023ರಲ್ಲಿ ಕ್ಯುಆರ್ ಕೋಡ್ ಮೂಲಕ ಬಿಎಂಟಿಸಿಯ ಆದಾಯ 48 ಕೋಟಿ ಆಗಿತ್ತು. 2024ರಲ್ಲಿ ಇದು 100 ಕೋಟಿ ರೂ. ದಾಟಿದೆ. 2025ರ ಜನವರಿ ತಿಂಗಳಿನಲ್ಲಿಯೇ ಈ ಆದಾಯ 19.66 ಕೋಟಿ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ಬಿಎಂಟಿಸಿಯ ಎಲ್ಲಾ ಬಸ್‌ಗಳಲ್ಲಿಯೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯುವ ವ್ಯವಸ್ಥೆ ಇದೆ. ಅಧಿಕಾರಿಗಳ ಮಾಹಿತಿ ಪ್ರಕಾರ ಟಿಕೆಟ್ ನೀಡುವ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್‌ಗಳಲ್ಲಿ ಈ ವ್ಯವಸ್ಥೆಯನ್ನು ಶೀಘ್ರವೇ ಅಳವಡಿಕೆ ಮಾಡಲಾಗುತ್ತದೆ.

ಡಿಜಿಟಲ್ ಬಳಕೆ ಹೆಚ್ಚಾಗುತ್ತಿದ್ದೂ ಬಿಎಂಟಿಸಿ ಇನ್ನೂ ಸಹ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ ಪರಿಚಯಿಸಿಲ್ಲ. ನಗದು ರಹಿತ ಪ್ರಯಾಣ ವ್ಯವಸ್ಥೆಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅತಿ ಹೆಚ್ಚು ಡಿಜಿಟಲ್ ಟಿಕೆಟ್ ನೀಡಿದ ನಿರ್ವಾಹಕರಿಗೆ ಬಹುಮಾನ ನೀಡುವ ಯೋಜನೆಯನ್ನು ಬಿಎಂಟಿಸಿ ಪರಿಚಯಿಸಿದೆ. ಈ ಮೂಲಕ ಜನರು ಹೆಚ್ಚಾಗಿ ಡಿಜಿಟಲ್ ಟಿಕೆಟ್‌ಗೆ ಒತ್ತು ನೀಡುವಂತೆ ನಿರ್ವಾಹಕರೇ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+