Double Decker Bus: ಬಿಎಂಟಿಸಿ ಡಬಲ್ ಡೆಕ್ಕರ್ ಬಸ್ ಯೋಜನೆಗೆ ಮತ್ತೆ ಹಿನ್ನಡೆ! ಯಾಕೆ?
ಬೆಂಗಳೂರು, ಸೆಪ್ಟಂಬರ್ 07: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವರ್ಷ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಡಬಲ್ ಡೆಕ್ಕರ್ ಬಸ್ ಮರು ಪರಿಚಯಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿತ್ತು. ಇದರ ಹೊರತಾಗಿ ಡಬಲ್ ಡೆಕ್ಕರ್ ಬಸ್ ಸಂಚಾರದ ಕನಸಿಗೆ ಹಿನ್ನೆಡೆ ಆಗಿದೆ. ಏಕೆ? ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದ್ದೇನು? ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ನಿರ್ವಹಣೆ ಸಮಸ್ಯೆಗಳು ಮತ್ತು ಅಧಿಕ ನಿರ್ವಹಣಾ ವೆಚ್ಚದ ಕಾರಣದಿಂದಾಗಿ 1997 ರಲ್ಲಿ ನಗರದಲ್ಲಿ ಡಬಲ್ ಡೆಕ್ಕರ್ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಅದಾಗಿ 25 ವರ್ಷಗಳ ನಂತರ 2023 ರಲ್ಲಿ ಸರ್ಕಾರ ಈ ಉಪಕ್ರಮಕ್ಕೆ ಒಪ್ಪಿಗೆ ನೀಡಿದ ಬಳಿಕ ಬಿಎಂಟಿಸಿ ಟೆಂಡರ್ ಕರೆದಿತ್ತು. ಆದರೆ ಈ ಟೆಂಡರ್‌ನಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿ ಕಂಪನಿಗಳು ಪಾಲ್ಗೊಂಡಿವೆ.

ಅತ್ಯಧಿಕ ಹಣದ ಪ್ರಸ್ತಾಪ
ಈ ಕಂಪನಿಗಳು ಇಂದು ಡಬಲ್ ಡೆಕ್ಕರ್ ಬಸ್ ಪೂರೈಕೆ, ವೆಚ್ಚದ ಎಲ್ಲ ಸೇರಿ ಅತ್ಯಧಿಕ ಹಣದ ಪ್ರಸ್ತಾಪ ಇಟ್ಟಿವೆ. ಇದರಿಂದಾಗಿ ಬೆಂಗಳೂರಿಗೆ ಡಬ್ಬಲ್ ಡೆಕ್ಕರ್ ಬಸ್‌ಗಳು ಮರಳುವ ಕನಸಿಗೆ ಮತ್ತೊಮ್ಮೆ ಹಿನ್ನಡೆ ಆಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ನಾಗರಿಕರು ಸಾರಿಗೆ ವಿಷಯದಲ್ಲಿ ದಶಕಗಳ ಡಬಲ್ ಡೆಕ್ಕರ್ ಬಸ್‌ಗಳ ಪರಂಪರೆ ಮತ್ತೆ ಮುಂದುವರಿಯಲಿವೆ ಎಂಬ ಕನಸು ಕಂಡಿದ್ದರು.ಆದರೆ ಅದಕ್ಕೆ ಆರಂಭದಲ್ಲೆ ವಿಘ್ನ ಎದುರಾಗಿದೆ. ಈ ಬಸ್‌ಗಳನ್ನು BMTCಯು ನಗರದಾದ್ಯಂತ ಪ್ರಮುಖ ಹತ್ತು ಮಾರ್ಗಗಳಲ್ಲಿ ಓಡಿಸಲು ಪ್ಲಾನ್ ಮಾಡಿಕೊಂಡಿತ್ತು. ಫ್ಲೈಓವರ್, ಅಸೂಕ್ತ ರಸ್ತೆ ಗಳ ಮಧ್ಯೆಯೂ ಈ ಬಸ್‌ಗಳ ಕಾರ್ಯನಿರ್ವಹಣೆಗೆ ಬಿಎಂಟಿಸಿ ಸಜ್ಜಾಗಿತ್ತು.
ಬಿಎಂಟಿಸಿ ನಿಗಮವು ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಮತ್ತು ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ (NCAP) ಅಡಿ ಐದು ಡಬಲ್ ಡೆಕ್ಕರ್ ಎಸಿ ಬಸ್ ಗಳನ್ನು ನಗರಕ್ಕೆ ಪುನರ್ ಪರಿಚಯಿಸಲು ಯೋಜಿಸಿತ್ತು. ಅದಕ್ಕಗಾಗಿ ಟೆಂಡರ್ ಆಹ್ವಾನಿಸಿತ್ತು ಎಂದು 'ಬೆಂಗಳೂರು ಮಿರರ್' ವರದಿ ಮಾಡಿದೆ.
ರೂ.99 ರಿಂದ 102.5 ರೂ. ಬಿಡ್
ಡಬಲ್ ಡೆಕ್ಕರ್ ಬಸ್ ಮೊದಲ ಟೆಂಡರ್ ನಲ್ಲಿ ಕೇವಲ ಒಬ್ಬ ಬಿಡ್ಡರ್ ಪಾಲ್ಗೊಂಡಿದ್ದರು. ನಂತರ ಮತ್ತೆ ಟೆಂಡರ್ ಕರೆಯಲಾಯಿತು. ಆಗ ಕೆಲವೇ ಕೆಲವು ಕಂಪನಿಗಳು ಪಾಲ್ಗೊಂಡಿದ್ದು, ಹೆಚ್ಚಿನ ಹಣ ಕೇಳಿವೆ. ಒಂದು ಕಿಲೋಮೀಟರ್‌ಗೆ ರೂ.99 ರಿಂದ 102.5 ರೂ.ವರೆಗೆ ಬಿಡ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
ಕೇಳಿದಷ್ಟು ಹಣಕ್ಕೆ ಟೆಂಡರ್ ಮುಗಿಸಿದರೆ ಟಿಕೆಟ್ ದರ ಹೆಚ್ಚಿಸಬೇಕಾಗುತ್ತದೆ. ಇದರಿಂದ ನಿಗಮಕ್ಕೆ ನಷ್ಟವಾಗುತ್ತದೆ. ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗಲಿವೆ ಎಂಬ ಕಾರಣಕ್ಕಾಗಿ ಈ ದುಬಾರಿ ಟೆಂಡರ್ ರದ್ದುಗೊಂಡಿದೆ. ಮತ್ತೆ ಕರೆಯುವ ನಿರೀಕ್ಷೆ ಇದೆ. ಖರ್ಚು ಹೆಚ್ಚು ಆದಾಯ ಕಡಿಮೆ ಆದರೆ ಸರಿದೂಗಿಸುವುದು ಭವಷ್ಯದಲ್ಲಿ ಕಷ್ಟವಾಗುವ ಉದ್ದೇಶದಿಂದ ಅಧಿಕಾರಿಗಳು ಟೆಂಡರ್ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.
ಡೆಬಲ್ ಡೆಕ್ಕರ್ ಬಸ್ ಕನಸಾಗಿಯೇ ಉಳಿದು ಬಿಡುತ್ತಾ?
ಸದ್ಯ ಬಿಎಂಟಿಸಿಯು ಪ್ರತಿ ಕಿಲೋಮೀಟರ್‌ಗೆ ಪ್ರತಿ ಕಿಲೋಮೀಟರ್‌ಗೆ ರೂ.40 ನಂತೆ ಎಲೆಕ್ಟ್ರಿಕ್ ಬಸ್‌ಗಳು ಹಾಗೂ ರೂ.60 ದರದಲ್ಲಿ ಸಾಮಾನ್ಯ ಬಸ್‌ಗಳನ್ನು ನಿರ್ವಹಿಸುತ್ತದೆ. ಆದರೆ ಡಬಲ್ ಡೆಕ್ಕರ್ ಬಸ್‌ಗಳಿಗೆ ಪ್ರತಿ ಕಿಮೀಗೆ ರೂ.99 ರಿಂದ 102.5 ರೂ.ವರೆಗೆ ನೀಡಲು ಆಗುವುದಿಲ್ಲ. ಅಲ್ಲದೇ ಕಡಿಮೆ ಹಣಕ್ಕೆ ಬಿಡ್‌ದಾರು ಒಪ್ಪಿಲ್ಲ ಎನ್ನಲಾಗಿದೆ. ಹೀಗಾಗಿ ಡಬಲ್ ಡೆಕ್ಕರ್‌ಗೆ ಆರಂಭದಲ್ಲೇ ವಿಘ್ನಗಳು ಎದುರಾಗಿದೆ. ಇದು ಹೀಗೆ ಮುಂದುವರಿದರೆ ಡೆಬಲ್ ಡೆಕ್ಕರ್ ಮರು ಪರಿಚಯಿಸುವ ಕನಸು ಕನಸಾಗಿಯೇ ಉಳಿದು ಬಿಡುತ್ತಾ? ಕಾದು ನೋಡಬೇಕಿದೆ.
-
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral












Click it and Unblock the Notifications