ಬಿಎಂಟಿಸಿಯಲ್ಲಿ ಟಿಕೆಟ್‌ಗಾಗಿ ಚಿಲ್ಲರೆ ಇಲ್ಲವೇ?: ಗೂಗಲ್ ಪೇ, ಫೋನ್ ಪೇ ಬಳಸಿ!

ಬೆಂಗಳೂರು, ನ. 23: ಬಿಎಂಟಿಸಿಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರ ಸಮಸ್ಯೆ ಎಂದರೆ ಅದು ಚಿಲ್ಲರೆ ನೀಡುವುದು. ಹೌದು ಪ್ರತಿ ಬಾರಿ ಚಿಲ್ಲರೆ ಕೊಡಿ ಎನ್ನುವ ಕಂಡಕ್ಟರ್‌, ಚಿಲ್ಲರೆ ಇಲ್ಲ ನೀವೇ ಕೊಡಿ ಎನ್ನುವ ಪ್ರಯಾಣಿಕರು, ನೀವುಗಳು ಕೊಟ್ಟರೆ ತಾನೇ ನಮ್ಮ ಬಳಿ ಚಿಲ್ಲರೆ ಇರುವುದು? ಎನ್ನುವ ಜಟಾಪಟಿ ಇನ್ನು ಕೊನೆಯಾಲಿದೆ.

ಹೌದು, ಪ್ರಯಾಣಿಕರು ಸಿಟಿ ಬಸ್‌ಗಳಲ್ಲಿ ಟಿಕೆಟ್ ಖರೀದಿಸಲು ಚಿಲ್ಲರೆ ಹಣ ನೀಡಲು ಕಷ್ಟಪಡಬೇಕಾಗಿಲ್ಲ. ಇನ್ನು ಮುಂದೆ ಗೂಗಲ್ ಪೇ, ಪೋನ್‌ ಪೇನಂತಹ ಆಪ್‌ಗಳ ಮೂಲಕ ಹಣ ಪಾವತಿಸಿ ಟಿಕೆಟ್ ತೆಗೆದುಕೊಳ್ಳಬಹುದು. ಏಕೆಂದರೆ ಬಿಎಂಟಿಸಿ ಅಧಿಕಾರಿಗಳು ಏಕೀಕೃತ ಪಾವತಿ ವ್ಯವಸ್ಥೆ (UPI) ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC) ಮೂಲಕ ಪಾವತಿ ಮಾಡುವ ಹೊಸ ಟಿಕೆಟ್ ಯಂತ್ರಗಳನ್ನು ಅಳವಡಿಸುತ್ತಿದ್ದಾರೆ.

ಡಿಜಿಟಲ್ ವ್ಯಾಲೆಟ್ ಆಗಿ ಕಾರ್ಯನಿರ್ವಹಿಸುವ ಮೊಬಿಲಿಟಿ ಕಾರ್ಡ್, ಪ್ರಯಾಣಿಕರಿಗೆ ವಿವಿಧ ಸಾರಿಗೆ ಮತ್ತು ಸಂಬಂಧಿತ ಸೇವೆಗಳಾದ ಬೈಕು ಬಾಡಿಗೆ ಅಥವಾ ಪಾರ್ಕಿಂಗ್‌ಗೆ ಪಾವತಿ ಮಾಡಲು ಅವಕಾಶ ನೀಡುತ್ತದೆ. 2019 ರಲ್ಲಿ ಇದನ್ನು ಪ್ರಾರಂಭಿಸಲಾಗಿದ್ದರೂ, ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದಾಗಿ ಜಾರಿಗೆ ಬಂದಿರಲಿಲ್ಲ.

ಡಿಸೆಂಬರ್ ಅಂತ್ಯಕ್ಕೆ 8,000 ಹೊಸ ಇಟಿಎಂ ಅಳವಡಿಕೆ

ಡಿಸೆಂಬರ್ ಅಂತ್ಯಕ್ಕೆ 8,000 ಹೊಸ ಇಟಿಎಂ ಅಳವಡಿಕೆ

ಕಳೆದ ಎರಡು ವರ್ಷಗಳಿಂದ ಸೂಕ್ತವಾದ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು (ಇಟಿಎಂ) ಹುಡುಕುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಈಗ ಅದನ್ನು ಜಾರಿಗೆ ತರಲು ನಿರ್ಧರಿಸಿದೆ.

ಡಿಸೆಂಬರ್ ಅಂತ್ಯದ ವೇಳೆಗೆ ನಿಗಮವು ಡಿಜಿಟಲ್ ಪಾವತಿಗೆ ಅನುವು ಮಾಡಿಕೊಡುವ 8,000 ಹೊಸ ಇಟಿಎಂಗಳನ್ನು ಅಳವಡಿಸಿಕೊಳ್ಳಲಿದೆ ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಎ. ವಿ. ಸೂರ್ಯ ಸೇನ್ ಹೇಳಿದ್ದಾರೆ.

" ಈ ಯಂತ್ರಗಳು ಟಿಕೆಟ್‌ಗಳನ್ನು ಮುದ್ರಿಸುವ ಜೊತೆಗೆ ಯುಪಿಐ ಆಧಾರಿತ ಪಾವತಿಗಳು ಮತ್ತು ಮೊಬಿಲಿಟಿ ಕಾರ್ಡ್‌ಗಳಿಂದಾಗುವ ಪಾವತಿಗಳನ್ನು ಒಳಗೊಂಡಂತೆ ಕಾರ್ಡ್ ಬಳಕೆಗೂ ಅವಕಾಶ ನೀಡುತ್ತವೆ" ಎಂದು ಮಾಹಿತಿ ನೀಡಿದ್ದಾರೆ.

ಡಿಜಿಟಲ್ ವ್ಯವಹಾರದತ್ತ ಸಾಗುತ್ತಇರುವ ಬಿಎಂಟಿಸಿ

ಡಿಜಿಟಲ್ ವ್ಯವಹಾರದತ್ತ ಸಾಗುತ್ತಇರುವ ಬಿಎಂಟಿಸಿ

ಬಿಎಂಟಿಸಿ ತನ್ನ ಸಿಬ್ಬಂದಿಗೆ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಬಳಕೆ ಮಾಡಉವ ಕುರಿತು ತರಬೇತಿ ನೀಡಲು ಆರಂಭಿಸಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಈ ವ್ಯವಸ್ಥೆಯು ಜಾರಿಯಾಗಲಿದೆ.

ಪ್ರತಿದಿನ, ಬಿಎಂಟಿಸಿ 6,200 ಬಸ್‌ಗಳನ್ನು ರಸ್ತೆಗೆ ಬಿಡುತ್ತದೆ. ಅದು ನಗರದಾದ್ಯಂತ 50,000 ಟ್ರಿಪ್‌ಗಳನ್ನು ಹೊಡೆಯುತ್ತದೆ. ದಿನಕ್ಕೆ 3.56 ಕೋಟಿ ರೂಪಾಯಿ ಆದಾಯವನ್ನು ತರುತ್ತದೆ. ಈ ಆದಾಯವೆಲ್ಲಾ ಬಹುತೇಕ ನಗದು ರೂಪದಲ್ಲಿರುತ್ತದೆ.

2018 ರಿಂದ ನಿಗಮವು ಡಿಜಿಟಲ್ ವಹಿವಾಟಿನತ್ತ ಹೊರಳಲು ಹೆಣಗಾಡುತ್ತಿದೆ. ಬಿಎಂಟಿಸಿಯಲ್ಲಿ ಮೊಬಿಲಿಟಿ ಕಾರ್ಡ್ ಅನ್ನು ಅಳವಡಿಸಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ.

ಬಸ್, ಮೆಟ್ರೋ ಸೇರಿ ಹಲವು ಬಳಕೆಗೆ ಮೊಬಿಲಿಟಿ ಕಾಡ್‌

ಬಸ್, ಮೆಟ್ರೋ ಸೇರಿ ಹಲವು ಬಳಕೆಗೆ ಮೊಬಿಲಿಟಿ ಕಾಡ್‌

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಇನ್ನು ಒಂದೇ ಕಾಡ್‌ ಬಳಸುವ ವ್ಯವಸ್ಥೆ ಭವಿಷ್ಯದಲ್ಲಿ ಜಾರಿಗೆ ಬರಲಿದೆ. ಇದಕ್ಕಾಗಿ ಭೌತಿಕ ಮೂಲಸೌಕರ್ಯ ಸಿದ್ಧವಾಗಿದೆ ಎಂದು ಬೆಂಗಳೂರು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

"ನಮ್ಮ ಮೆಟ್ರೋ ನೆಡ್‌ವರ್ಕ್‌ನಲ್ಲಿರುವ ಎಲ್ಲಾ ಮೆಟ್ರೋ ನಿಲ್ದಾಣಗಳು ಮೊಬಿಲಿಟಿ ಕಾಡ್‌ ಸಕ್ರಿಯಗೊಳಿಸಿದ ಸ್ವಯಂಚಾಲಿತ ಶುಲ್ಕ ಸಂಗ್ರಹಣೆ ಗೇಟ್‌ಗಳು ಇವೆ" ಎಂದು ಬಿಎಂಆರ್‌ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಕಾರ್ಯಾಚರಣೆ ಮತ್ತು ನಿರ್ವಹಣೆ) ಶಂಕರ್ ಎ. ಎಸ್. ಹೇಳಿದ್ದಾರೆ.

ಇನ್ನೆರಡು ವಾರಗಳಲ್ಲಿ ಬಿಎಂಆರ್‌ಸಿಎಲ್ ಔಪಚಾರಿಕ ಪ್ರಕಟಣೆಯೊಂದಿಗೆ ಬರಲಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

"ಯಾವುದೇ ಪಾವತಿ ಗೇಟ್‌ವೇ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಇನ್ನೊಂದು ವಾರ ಬೇಕಾಗಬಹುದು. ಅದು ಮುಗಿದ ನಂತರ, ಮೊಬಿಲಿಟಿ ಕಾರ್ಡ್‌ಗಳನ್ನು ಬಳಸಲು ನಾವು ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.

ಮೊಬಿಲಿಟಿ ಕಾಡ್‌ಗಿಂತ ಯುಪಿಎ ಪಾವತಿ ಶೀಘ್ರ ಜಾರಿ

ಮೊಬಿಲಿಟಿ ಕಾಡ್‌ಗಿಂತ ಯುಪಿಎ ಪಾವತಿ ಶೀಘ್ರ ಜಾರಿ

ನೋಯ್ಡಾ ಮೂಲದ ಕಂಪನಿಯಾದ ಪೈನ್ ಲ್ಯಾಬ್ಸ್‌ನಿಂದ ಬಿಎಂಟಿಸಿ ಇಟಿಎಂಗಳನ್ನು ಬಾಡಿಗೆಗೆ ಪಡೆಯುತ್ತಿದೆ. ಇದು ನಿಲ್ದಾಣಗಳು, ಹಂತಗಳು ಮತ್ತು ಗೊತ್ತುಪಡಿಸಿದ ದರಗಳನ್ನು ಒಳಗೊಂಡಿರುವ ಆಂತರಿಕ ಸಾಫ್ಟ್‌ವೇರ್ ಟಿಕೆಟ್‌ಗಳ ಆಫ್‌ಲೈನ್ ಮಾರಾಟವನ್ನು ಸಕ್ರಿಯಗೊಳಿಸುತ್ತದೆ.

ಎನ್‌ಸಿಎಂಸಿಗಿಂತ ವೇಗವಾಗಿ ಯುಪಿಐ ಪಾವತಿಗಳು ಪ್ರಾರಂಭವಾಗುತ್ತವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಈ ಪಾವತಿ ಅಪ್ಲಿಕೇಶನ್‌ಗಳ ಜನಪ್ರಿಯತೆಯನ್ನು ಪರಿಗಣಿಸಿ, ಹೊಸ ಕಾರ್ಡ್ ಖರೀದಿಸುವ ಕಲ್ಪನೆಯನ್ನು ಹೂಡಿಕೆಯಾಗಿ ನೋಡಲಾಗುತ್ತದೆ. ಆದರೆ ಎನ್‌ಸಿಎಂಸಿ ಒಂದು ವಿಶಿಷ್ಟ ಸಾಧನವಾಗಿದ್ದು, ಇದು ಬಹು ಸಾರ್ವಜನಿಕ ಸಾರಿಗೆ ಸೇವೆಗಳನ್ನು ಬಳಸುವವರಿಗೆ ರಿಯಾಯಿತಿಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ" ಎಂದು ಬಿಎಂಟಿಸಿ ಅಧಿಕಾರಿ ವಿವರಿಸಿದ್ದಾರೆ.

ಇನ್ನು ಬಿಎಂಟಿಸಿ ಟಿಕೆಟ್ ವ್ಯವಸ್ಥೆ ಡಿಜಿಟಲ್ ಮಾಡಿ ಸಾವಿರಾರು ನೌಕರರಿಂದ ನೌಕರಿ ಕಸಿಯುವ ತಂತ್ರ ಎಂದು ಹಲವರು ಆರೋಪಿಸಿದ್ದಾರೆ.

(ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+