BMTC: ನೈಸ್ ರಸ್ತೆಯ ಬಸ್‌ಗಳಿಗೆ 01 ವರ್ಷ, ಮಾಸಿಕ ₹01 ಕೋಟಿ ಆದಾಯ, 25ಲಕ್ಷ ಪ್ರಯಾಣಿಕರು

ಬೆಂಗಳೂರು, ಡಿಸೆಂಬರ್ 26: ಬೆಂಗಳೂರು ಜನರ ಜೀವನಾಡಿ, ದೈನಂದಿನ ಸಂಚಾರದ ಭಾಗವೇ ಆಗಿರುವ ಹಾಗೂ ದಶಕಗಳಿಂದಲೂ ಸೇವೆಯಲ್ಲಿ ನಿರತವಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮತ್ತೊಂದು ಮೈಲುಗಲ್ಲು ಸಾಧಿಸಿದೆ. ನೈಸ್ ರಸ್ತೆಗೆ ಬಸ್‌ಗಳನ್ನು ಆರಂಭಿಸಿದ ವರ್ಷದಲ್ಲೇ ಜನಮನ್ನಣೆ ಗಳಿಸಿದೆ. ಅಧಿಕ ಆದಾಯ ಗಳಿಸುವ ಜೊತೆಗೆ ಲಕ್ಷ ಲಕ್ಷ ಜನರಿಗೆ ಸೇವೆ ಉತ್ತಮ ಸೇವೆ ನೀಡಿ ಖ್ಯಾತಿ ಪಡೆದಿದೆ.

ಬೆಂಗಳೂರಿನ ಮಾದಾವರದಿಂದ-ಎಲೆಕ್ಟ್ರಾನಿಕ್ ಸಿಟಿಗೆ ನೈಸ್ ರಸ್ತೆ ಮೂಲಕ ರಾಜ್ಯ ಸರ್ಕಾರವು ಬಿಎಂಟಿಸಿ ಬಸ್‌ಗಳನ್ನು ಬಿಡಲಾಯಿತು. ನಗರದ ಗಲ್ಲಿ ಗಲ್ಲಿಗಳಲ್ಲಿ ಓಡಾಡಿ ಜನರಿಗೆ ಸೇವೆ ನೀಡುವ ಬಿಎಂಟಿಸಿಯ ಸೇವೆ ನಗರ ಹೊರವಲಯದ ಜನರಿಗೆ ಸಿಗುವಂತೆ ಮಾಡುವ ಉದ್ದೇಶದಿಂದ ನೈಸ್ ರಸ್ತೆಯ 10 ಮಾರ್ಗಗಳಲ್ಲಿ (ನೈಸ್ 10) ಬಿಎಂಟಿಸಿ ಬಸ್ ಸಂಚಾರ ಆರಂಭಿಸಲಾಯಿತು.

BMTC Nice Road Buses Complete 1 Year Serving 25 Lakh Commuters Earning Rs 1 Crore Monthly

2024ರ ಡಿಸೆಂಬರ್ 23ರಂದು ಈ ಬಸ್‌ಗಳಿಗೆ ಸಾರಿಗೆ ಸಚಿವರು ಚಾಲನೆ ನೀಡಿದರು. ಆರಂಭದಲ್ಲಿ 60 ಸಾವಿರದಷ್ಟು ಜನರಿಗೆ ಸೇವೆ ನೀಡುತ್ತಿದ್ದ ಬಿಎಂಟಿಸಿ ಬಸ್‌ಗಳಿಗೆ ಲಕ್ಷಾಂತರ ಜನರು ಮಾರು ಹೋದರು. ಮಾಸಿಕವಾಗಿ 3 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಇದರಿಂದ 01 ಕೋಟಿಗೂ ಅಧಿಕ ಆದಾಯ ಸಂಗ್ರಹಿಸುವ ಮೂಲಕ ಬಿಎಂಟಿಸಿ ಹೊಸ ದಾಖಲೆ ಬರೆಯಿತು.

ವರ್ಷದ ಯಶಸ್ವಿ ಸೇವೆಗೆ ಧನ್ಯವಾದ ಹೇಳಿದ ಬಿಎಂಟಿಸಿ

ಈ ಕುರಿತು ಟ್ವೀಟ್ ಮಾಡಿರುವ ಬಿಎಂಟಿಸಿ ಸಂಸ್ಥೆಯು, ನೈಸ್ 10 ಮಾರ್ಗಗಳಿಗೆ ಯಶಸ್ವಿ ಒಂದು ವರ್ಷವಾಗಿದೆ. 10 ನಿಮಿಷ ಅಂತರದಲ್ಲಿ ಬಸ್ಸುಗಳ ಕಾರ್ಯಾಚರಣೆ ಮಾಡುತ್ತಿವೆ. ಆರಂಭದಲ್ಲಿ ಮಾಸಿಕ 60,000 ಪ್ರಯಾಣಿಕರಿಂದ 3,00,000 ಪ್ರಯಾಣಿಕರ ವರೆಗೆ ಸೇವೆ ನಡೆದುಕೊಂಡುದೆ.

BMTC Nice Road Buses Complete 1 Year Serving 25 Lakh Commuters Earning Rs 1 Crore Monthly

ಈವರೆಗೆ ಒಟ್ಟು 25 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮಾಸಿಕ ಒಂದು ಕೋಟಿ ರೂಪಾಯಿ ಆದಾಯ ಬಂದಿದೆ. ಈ ಯಶಸ್ಸಿಗೆ ಕಾರಣವಾದ ಎಲ್ಲರಿಗೆ ನಿಗಮವು ಧನ್ಯವಾದ ತಿಳಿಸಿದೆ.

ಉದ್ಯೋಗಿಗಳು, ಸಾರ್ವಜನಿಕರಿಂದ ಭಾರೀ ಬೇಡಿಕೆ

ನಾಗವಾರದಿಂದ ನೈಸ್ ರಸ್ತೆ ಮೂಲಕ ಪ್ರತಿ ಹತ್ತು ನಿಮಿಷಕ್ಕೊಂದು ಬರುವ ಬಿಎಂಟಿಸಿ ಬಸ್‌ಗಳು ಮಾಗಡಿ ರಸ್ತೆ ನೈಸ್ ಜಂಕ್ಷನ್, ಮೈಸೂರು ರಸ್ತೆ, ಕನಕಪುರ ಸೇರಿದಂತೆ ಕೆಲವೆಡೆ ನಿಲ್ದಾಣ ನೀಡುತ್ತದೆ. ಹೀಗೆ ಸಾಗಿ ಎಲೆಕ್ಟ್ರಾನಿಕ್ ಸಿಟಿವರೆಗೆ ಸೇವೆ ನೀಡಲಾಗುತ್ತಿದೆ. ಐಟಿ ಕಂಪನಿ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರಿಂದ ನೈಟ್ ಟೆನ್ ಮಾರ್ಗಗಳ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಈ ಬಸ್‌ಗಳ ಸಂಖ್ಯೆ, ಪ್ರಯಾಣಿಕರು ಹಾಗೂ ಆದಾಯದ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಂಚಾರ ದಟ್ಟಣೆ ತಪ್ಪಿಸಿಕೊಳ್ಳಲು ಹಾಗೂ ನೇರ ಬಸ್ ಸೇವೆ ಇರುವ ಕಾರಣ ಈ ಮಾರ್ಗದ ಜನರು ಬಿಎಂಟಿಸಿ ಬಸ್‌ಗಳ ಮೇಲೆ ಹೆಚ್ಚು ಹೆಚ್ಚು ಅವಲಂಬಿತರಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+