BMTC: ಕೆಂಗೇರಿ-ಎಲೆಕ್ಟ್ರಾನಿಕ್ ಸಿಟಿ ಬಿಎಂಟಿಸಿ ಹೊಸ ಮಾರ್ಗ, ವಿವರಗಳು

ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಹೊಸ ಮಾರ್ಗವನ್ನು ಘೋಷಣೆ ಮಾಡುತ್ತದೆ. ಈಗ ಎಲೆಕ್ಟ್ರಾನಿಕ್ ಸಿಟಿಗೆ ಸಂಚಾರ ನಡೆಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಮಾರ್ಗವೊಂದನ್ನು ಘೋಷಣೆ ಮಾಡಿದೆ. ಬಸ್ ಸಾಗುವ ಮಾರ್ಗ, ಟ್ರಿಪ್ ಸಂಖ್ಯೆ, ಬಸ್ ಎರಡೂ ಕಡೆಯಿಂದ ಹೊರಡುವ ಸಮಯದ ವಿವರಗಳನ್ನು ಜನರ ಅನುಕೂಲಕ್ಕಾಗಿ ಪ್ರಕಟಿಸಿದೆ.

ಬಿಎಂಟಿಸಿ ಸೆಪ್ಟೆಂಬರ್ 14ರ ಶನಿವಾರದಿಂದ 378-F ಎಂಬ ಹೊಸ ಮಾರ್ಗವನ್ನು ಪರಿಚಯಿಸುತ್ತಿದೆ. ಈ ಮಾರ್ಗದ ಬಸ್‌ಗಳು ಕೆಂಗೇರಿ-ಎಲೆಕ್ಟ್ರಾನಿಕ್ ಸಿಟಿ ನಡುವೆ ಸಂಪರ್ಕವನ್ನು ಕಲ್ಪಿಸುತ್ತವೆ. ಈ ಮಾರ್ಗದಲ್ಲಿ ಸಾಮಾನ್ಯವಾದ 4 ಬಸ್‌ಗಳು ಸಂಚಾರ ನಡೆಸಲಿವೆ ಎಂದು ಮಾಹಿತಿ ನೀಡಲಾಗಿದೆ.

BMTC New Route Connecting Kengeri To Electronics City

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ದಿನಾಂಕ 14.09.2024 ರಿಂದ ಬಸ್ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

ಮಾರ್ಗ, ಬಸ್ಸುಗಳ ಸಮಯ: ಕೆಂಗೇರಿ-ಎಲೆಕ್ಟ್ರಾನಿಕ್ ಸಿಟಿ ನಡುವಿನ ಮಾರ್ಗದ ಬಸ್‌ಗಳು ಶ್ರೀನಿವಾಸಪುರ ಕ್ರಾಸ್, ಕರಿಯಣ್ಣನ ಪಾಳ್ಯ, ರಘುವನಹಳ್ಳಿ ಕ್ರಾಸ್, ಆವಲಹಳ್ಳಿ ಬಿಡಿಎ, ಅಂಜನಾಪುರ, ಬಸವನಪುರ ಗೇಟ್, ಬೆಟ್ಟದಾಸನಪುರ ಮೂಲಕ ಸಂಚಾರವನ್ನು ನಡೆಸುತ್ತವೆ.

ಬಸ್ ಬಿಡುವ ವೇಳೆ ಎಲೆಕ್ಟ್ರಾನಿಕ್ ಸಿಟಿ: 6.15, 6.45, 9.05, 10, 10.30, 11, 13.10, 14.55, 15.25, 17.25,19.20, 19.40. ಕೆಂಗೇರಿ ಬಿಡುವ ವೇಳೆ 7.10, 7.50, 8.20, 8.50, 11.25, 15.20, 16.40, 17.10. ಪ್ರಯಾಣಿಕರು ಈ ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬಹುದು.

ಹೊಸ ಬಸ್‌ಗಳ ಸೇರ್ಪಡೆ: ಬಿಎಂಟಿಸಿಗೆ ಹೊಸ ಹೊಸ ಬಸ್‌ಗಳು ಸೇರ್ಪಡೆಯಾಗುತ್ತಿವೆ. ಹಳೆಯ ಬಸ್‌ಗಳನ್ನು ಗುಜರಿಗೆ ಹಾಕಿ, ಹೊಸ ಬಸ್‌ಗಳನ್ನು ಓಡಿಸಲಾಗುತ್ತದೆ. ಅಲ್ಲದೇ ಹೊಸ ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಲಾಗುತ್ತದೆ.

ಗುರುವಾರ ವಿಧಾನಸೌಧ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ 100 ನೂತನ ಬಿಎಂಟಿಸಿ ಬಸ್‌ಗಳನ್ನು ಲೋಕಾರ್ಪಣೆಗೊಳಿಸಿದರು. ಬೆಂಗಳೂರು ನಗರದ ಜನರ ಅನುಕೂಲಕ್ಕಾಗಿ ಮೊದಲ ಹಂತದಲ್ಲಿ 100 ನೂತನ ಬಿಎಂಟಿಸಿ ಬಸ್ ಲೋಕಾರ್ಪಣೆ ಮಾಡಲಾಗಿದೆ. ರಾಜ್ಯ ಸರ್ಕಾರ 336 ಕೋಟಿ ವೆಚ್ಚದಲ್ಲಿ ಒಟ್ಟು 840 ಹೊಸ ಬಸ್‌ಗಳ ಖರೀದಿಗೆ ಒಪ್ಪಿಗೆಯನ್ನು ನೀಡಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಬಿಎಂಟಿಸಿ ಹೊಸ ಹೊಸ ಬಡಾವಣೆಗಳು ಮತ್ತು ನಮ್ಮ ಮೆಟ್ರೋ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಮೆಟ್ರೋ ಫೀಡರ್ ಹೊಸ ಬಸ್‌ಗಳ ಮಾರ್ಗವನ್ನು ಪರಿಚಯಿಸುತ್ತಿದೆ. ಈ ವರ್ಷ ಬಿಎಂಟಿಸಿ 40ಕ್ಕೂ ಅಧಿಕ ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿದೆ.

ನಮ್ಮ ಮೆಟ್ರೋ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಫೀಡರ್‌ ಸೇವೆಗೆ ಸಹ ಹೆಚ್ಚಿನ ಬೇಡಿಕೆ ಇದೆ. ಹೊಸ ಮಾರ್ಗಕ್ಕೆ ಬರುತ್ತಿರುವ ಬೇಡಿಕೆ ಗಮನಿಸಿದರೆ ಬೆಂಗಳೂರು ನಗರದಲ್ಲಿ ಬಸ್‌ಗಳಿಗೆ ಬೇಡಿಕೆ ತಗ್ಗಿಲ್ಲ. ಅದರಲ್ಲೂ ಶಕ್ತಿ ಯೋಜನೆ ಆರಂಭವಾದ ಬಳಿಕ ಹೊಸ ಬಸ್ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+