BMTC: ಹೊಸ ಮಾರ್ಗ 1, ಮೆಟ್ರೋ ಫೀಡರ್ 6 ಬಸ್‌ಗಳು ಆರಂಭ! ಸಮಯ, ವೇಳಾಪಟ್ಟಿ

ಬೆಂಗಳೂರು, ಫೆಬ್ರವರಿ 15: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ನಮ್ಮ ಮೆಟ್ರೋ ದರ ಏರಿಕೆ ಬೆನ್ನಲ್ಲೆ ಆಕ್ರೋಶಗೊಂಡಿರುವ ಸಾರ್ವಜನಿಕರು ಬಿಎಂಟಿಸಿ ಬಸ್‌ಗಳತ್ತ ಮುಖ ಮಾಡಿದ್ದಾರೆ. ಇತ್ತ BMTC ಹೊಸ ಹೊಸ ಮಾರ್ಗಗಳಲ್ಲಿ ಬಸ್ ಓಡಿಸಲು ಆರಂಭಿಸಿದೆ. ಹೊಸ ಬಸ್ ಮಾರ್ಗಗಳು, ನಿಲುಗಡೆ, ವಿವರ ಇಲ್ಲಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಹಾಗೂ ನಮ್ಮ ಮೆಟ್ರೋ ಬೆಂಗಳೂರಿನ ಜನ ಅವಿಭಾಜ್ಯವಾಗಿವೆ. ಸುರಕ್ಷಿತ ಸಾರಿಗೆ ಒದಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಇತ್ತೀಚೆಗೆ ನಮ್ಮ ಮೆಟ್ರೋ ದರ ಏರಿಕೆ ಮಾಡುವ ಮೂಲಕ ಪ್ರಯಾಣಿಕರ ಕೆಂಗಣ್ಣಿಗೆ ಗುರಿ ಆಯಿತು. ಇದಾದ ಕೂಡಲೇ ಜನರು ದುಡ್ಡಿದ್ದವರಿಗೆ ಮಾತ್ರವೇ ಮೆಟ್ರೋ ಸಾರಿಗೆ. ನಾವು ಮೆಟ್ರೋ ಏರಲ್ಲ, ನಮಗೆ ಬಿಎಂಟಿಸಿ ಬಸ್ ಸಾಕು ಎಂದು ಅನೇಕರು ಹೇಳಿದ್ದಾರೆ

BMTC New Route 1 KR Market-Jai Bhuvaneshwari Nagar New 6 Metro Feeder Bus RR Nagar

ಇದೀಗ ಬೆಂಗಳೂರು ಬಸ್ ಸಾರಿಗೆಯು ಎಂದಿನಂತೆ ಹೊಸ ಹೊಸ ಮಾರ್ಗಗಳಲ್ಲಿ ಬಸ್ ಬಿಡಲಾರಂಭಿಸಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮಾರ್ಗ ಮತ್ತು ನೂತನ ಮೆಟ್ರೋ ಫೀಡರ್ ಮಾರ್ಗ ಫೆಬ್ರವರಿ 10ರಿಂದಲೇ ಪರಿಚಯಿಸಿದೆ.

ಎಲ್ಲಿಂದ ಎಲ್ಲಿಗೆ ಬಿಎಂಟಿಸಿ ಹೊಸ ಸೇವೆ, ಮಾರ್ಗ

ನಗರದ ಕೆ.ಆರ್.ಮಾರುಕಟ್ಟೆಯಿಂದ ಜೈಭುವನೇಶ್ವರಿ ನಗರವರೆಗೆ ಹೊಸ ಮಾರ್ಗದಲ್ಲಿ ಬಿಎಂಟಿಸಿ ಒಂದು ಬಸ್ (77-F) ಸೇವೆ ಆರಂಭವಾಗಿದೆ. ಈ ಬಸ್ ಮಹಾಲಕ್ಷ್ಮೀ ಬಡಾವಣೆ, ರಾಜರಾಜಿನಗರ ಮಾರ್ಗವಾಗಿ ನಿಗದಿತ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ನಿಗಮದ ಅಧಿಕಾರಿಗಳು ಇದನ್ನು ಅನುಸರಿಸಿದ್ದಾರೆ.

ಬಸ್ ಬಿಡುವ ಸಮಯ

ಕೃ.ರಾ.ಮಾರುಕಟ್ಟೆ: 0730, 0950, 1150, 1525, 1805, 2010

ಜೈ ಭುವನೇಶ್ವರಿ ನಗರ: 0630, 0830, 1050, 1425, 1625, 1910

BMTC ಮೆಟ್ರೋ ಫಿಡರ್ ಬಸ್ ಎಲ್ಲಿಂದ-ಎಲ್ಲಿಗೆ?

ಬಿಎಂಟಿಸಿ ಒಟ್ಟು 06 ಮಾರ್ಗಗಳಲ್ಲಿ ಮೆಟ್ರೋ ಫಿಡರ್ ಬಸ್ ಸೇವೆ ಆರಂಭಿಸಿದೆ. MF 14A ಬಸ್‌ಗಳೂ ರಾಜರಾಜೇಶ್ವರಿ ಮಟ್ರೋ ನಿಲ್ದಾಣದಿಂದ ತಲಘಟ್ಟಪುರ ಮೆಟ್ರೋ ನಿಲ್ದಾಣವರೆಗೆ ಬಿಟ್ಟಿದೆ. ಈ ಬಸ್ ಆರ್‌ಆರ್‌ ನಗರದಿಂದ, ಹಲಗೆವಡೇರಹಳ್ಳಿ, ಶ್ರೀನಿವಾಸಪುರ ಕ್ರಾಸ್, ಜಕ್ಕನಗೌಡಪಾಳ್ಯ ಮಾರ್ಗವಾಗಿ ಸಾಗಲಿದೆ.

ಫಿಡರ್ ಬಸ್ ಬಿಡುವ ಸಮಯ

* ರಾಜರಾಜೇಶ್ವರಿ ಮೆಟ್ರೋ ನಿಲ್ದಾಣ

ಬೆಳಗ್ಗೆ 6:20, 6:45, 07:00, 07:10, 7:40, 8:05, 08:20, 08:30, 8:40, 8:50, 9:10, 9:35, 09:50, 10:00, 10:10, 10:35, 11:00, 11:25, 11:30, 11:40, 11:50, 12:00, ಮಧ್ಯಾಹ್ನ 12:20, 12:45, 12:50, 13:00, 13:10, 13:20, 13:40, 14:05, 14:20, 14:30, 14:35, 14:50, 15:05, 15:25, 15:30, 15:50, 16:00, 16:25, 16:40, ಸಂಜೆ 17:00, 17:05, 17:25, 17:35, 17:50, 18:00, 18:30, 18:35, 18:55, ರಾತ್ರಿ 19:25, 20:00, 20:10, 20:25 ಗಂಟೆಗೆ ಬಿಡುತ್ತದೆ.

* ತಲಘಟ್ಟಪುರ ಮೆಟ್ರೋ ನಿಲ್ದಾಣ

ಬೆಳಗ್ಗೆ 7:00, 7:25, 07:40, 07:50, 8:25, 8:50, 09:05, 09:15, 9:30, 9:55, 10:20, 10:45, 10:50, 11:00, 11:10, 11:20, 11:40, ಮಧ್ಯಾಹ್ನ 12:05, 12:10, 12:20, 12:30, 12:40, 13:00, 13:25, 13:30, 13:40, 13:50, 14:10, 14:25, 14:45, 14:50, 15:10, 15:20, 15:30, 15:45, 16:20, 16:25, 16:45, 16:55, 17:10, 17:20, 17:45, 17:50, 18:10, 18:15, 18:30, 18:40, ರಾತ್ರಿ 19:10, 19:20, 19:40, 20:05, 20:40, 20:50, 21:05 ಗಂಟೆಗೆ ಸಂಚರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+