BMTC: ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ ಗೊರಗುಂಟೆಪಾಳ್ಯ ಸೇರಿ ಈ ನಾಲ್ಕು ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ ಸೇವೆ

ನಾಗರೀಕರಿಗೆ ಮತ್ತಷ್ಟು ಉತ್ತಮ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ಬಿಎಂಟಿಸಿ ಹೊಸ ಮಾರ್ಗಗಳಲ್ಲಿ ಬಸ್ ಸೇವೆಯನ್ನು ವಿಸ್ತರಣೆ ಮಾಡುತ್ತಿದೆ. ಈಗ ಹೊಸದಾಗಿ ನಾಲ್ಕು ಮಾರ್ಗಗಳಲ್ಲಿ ಬಸ್ ಸೇವೆಯನ್ನು ಆರಂಭಿಸಿದೆ.

ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ ಗೊರಗುಂಟೆ ಪಾಳ್ಯದವರೆಗೆ ಹೊಸ ಬಸ್ ಸೇವೆ ಆರಂಭಿಸಿದ್ದು, ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಭಾಗದ ಮೆಟ್ರೋ ಪ್ರಯಾಣಿಕರಿಗೆ ಇದು ಅನುಕೂಲಕರವಾಗಲಿದೆ.

BMTC Launches Non-AC Bus Services on Four New Routes

ಇದರ ಜೊತೆಯಲ್ಲೇ ಮತ್ತೆ ಹೊಸದಾಗಿ ಮೂರು ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸೇವೆಯನ್ನು ಆರಂಭಿಸಿದೆ. ಎಲ್ಲಾ ಮಾರ್ಗಗಳಲ್ಲಿ ಎಸಿ ಬಸ್ ಅಲ್ಲದ ಸಾಮಾನ್ಯ ಬಸ್‌ಗಳು ಸಂಚರಿಸಲಿದ್ದು, ಬಸ್ ಮಾರ್ಗ, ಬಸ್ ಸಂಖ್ಯೆ ಮತ್ತು ಸಮಯದ ವಿವರಗಳನ್ನು ಬಿಎಂಟಿಸಿ ಹಂಚಿಕೊಂಡಿದೆ.

ಎಂಎಫ್ -28 ವಿದ್ಯಾರಣ್ಯಪುರ-ಲಗ್ಗೆರೆ

ವಿದ್ಯಾರಣ್ಯಪುರದಿಂದ ಲಗ್ಗೆರೆ ಮಾರ್ಗ ಸಂಖ್ಯೆ ಎಂಎಫ್ -28 ರಲ್ಲಿ ಮೂರು ಬಸ್‌ಗಳ ಸೇವೆಯನ್ನು ಆರಂಭಿಸಲಾಗಿದೆ. ರಾಮಚಂದ್ರಾಪುರ, ಬಿಇಎಲ್ ವೃತ್ತ, ಹೆಚ್‌ಎಂಟಿ ಆಡಿಟೋರಿಯಂ, ಜಾಲಹಳ್ಳಿ ಕ್ರಾಸ್ ಮಾರ್ಗವಾಗಿ ಲಗ್ಗೆರೆ ತಲುಪಲಿದೆ.

ವಿದ್ಯಾರಣ್ಯಪುರದಿಂದ ಬೆಳಿಗ್ಗೆ 6.45 ರಿಂದ ಬಸ್ ಸೇವೆ ಆರಂಭವಾಗಿ ಕೊನೆಯ ಬಸ್‌ ರಾತ್ರಿ 8.10ಕ್ಕೆ ಹೊರಡಲಿದೆ. ಲಗ್ಗೆರೆಯಿಂದ ವಿದ್ಯಾರಣ್ಯಪುರಕ್ಕೆ ಬೆಳೆಗ್ಗೆ 6.40ಕ್ಕೆ ಹೊರಡಲಿದ್ದು, ರಾತ್ರಿ 9.10ಕ್ಕೆ ಕೊನೆಯ ಬಸ್‌ ಇರಲಿದೆ.

ಕೆಆರ್ ಮಾರುಕಟ್ಟೆ-ವಿದ್ಯಾರಣ್ಯಪುರ

ಕೆಆರ್ ಮಾರುಕಟ್ಟೆಯಿಂದ ವಿದ್ಯಾರಣ್ಯಪುರಕ್ಕೆ 276-ಇ ಹೊಸ ಮಾರ್ಗದಲ್ಲಿ 5 ಬಸ್‌ಗಳ ಸೇವೆಯನ್ನು ಆರಂಭಿಸಲಾಗಿದೆ. ಕೆಂಪೇಗೌಡ ಬಸ್‌ ನಿಲ್ದಾಣ, ಮಲ್ಲೇಶ್ವರ, ಮತ್ತಿಕೆರೆ, ಬಿಇಎಲ್ ಸರ್ಕಲ್ ಮೂಲಕ ಬಸ್‌ಗಳು ಸಂಚರಿಸಲಿವೆ.

ಕೆಆರ್ ಮಾರುಕಟ್ಟೆಯಿಂದ ಬೆಳಗ್ಗೆ 7.15ಕ್ಕೆ ಮೊದಲ ಬಸ್ ಸಂಚಾರ ಆರಂಭಿಸಲಿದ್ದು, ರಾತ್ರಿ 9 ಗಂಟೆಗೆ ಕೊನೆಯ ಬಸ್ ಹೊರಡಲಿದೆ. ವಿದ್ಯಾರಣ್ಯಪುರದಿಂದ ಕೆಆರ್ ಮಾರುಟಕಟ್ಟೆಗೆ ಮೊದಲ ಬಸ್ ಬೆಳಗ್ಗೆ 4.15ಕ್ಕೆ ಆರಂಭವಾಗಲಿದ್ದು, ರಾತ್ರಿ 9.35ಕ್ಕೆ ಕೊನೆಯ ಬಸ್ ಹೊರಡಲಿದೆ.

ಯಶವಂತಪುರ ಟಿಟಿಎಂಸಿ-ನಾಯಂಡಹಳ್ಳಿ ಜಂಕ್ಷನ್‌

ಯಶವಂತಪುರ ಟಿಟಿಎಂಸಿ ಯಿಂದ ಮಲ್ಲೇಶ್ವರಂ ಮೂಲಕ ನಾಯಂಡಹಳ್ಳಿ ಜಂಕ್ಷನ್‌ಗೆ 401ಎನ್‌ವೈ ಮಾರ್ಗಸಂಖ್ಯೆಯಲ್ಲಿ ಹೊಸದಾಗಿ ಏಳು ಬಸ್‌ಗಳ ಸೇವೆ ಆರಂಭಿಸಲಾಗಿದೆ. ಮಲ್ಲೇಶ್ವರಂ, ಮೋದಿ ಆಸ್ಪತ್ರೆ, ಹಾವನೂರು ಸರ್ಕಲ್, ಕೆ.ಹೆಚ್‌.ಬಿ ಕಾಲೋನಿ, ಸುಮನಹಳ್ಳಿ ಜಂಕ್ಷನ್, ನಾಗರಬಾವಿ ಸರ್ಕಲ್‌ ಮಾರ್ಗದಲ್ಲಿ ಬಸ್ ಸಂಚರಿಸಲಿದೆ.

ಯಶವಂತಪುರ ಟಿಟಿಎಂಸಿಇಯಿಂದ ಬೆಳಗ್ಗೆ 5.20ಕ್ಕೆ ಮೊದಲ ಬಸ್ ಹೊರಡಲಿದ್ದು, ರಾತ್ರಿ 8.25ಕ್ಕೆ ಕೊನೆಯ ಬಸ್ ಸಂಚರಿಸಲಿದೆ. ನಾಯಂಡಹಳ್ಳಿಯಿಂದ 6.25ಕ್ಕೆ ಮೊದಲ ಬಸ್ ಹೊರಡಲಿದ್ದು, ರಾತ್ರಿ 7.40ಕ್ಕೆ ಕೊನೆಯ ಬಸ್ ಸಂಚರಿಸಲಿದೆ.

ಗೊರಗುಂಟೆಪಾಳ್ಯ-ಕೆಆರ್ ಪುರ ಮೆಟ್ರೋ

500ಕ್ಯೂಎ ಮಾರ್ಗದಲ್ಲಿ ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಕೆಆರ್ ಪುರ ಮೆಟ್ರೊ ನಿಲ್ದಾಣಕ್ಕೆ 11 ಬಸ್‌ಗಳ ಸೇವೆ ಆರಂಭವಾಗಿದೆ. ಹೆಬ್ಬಾಳ, ಟಿನ್‌ಫ್ಯಾಕ್ಟರಿ ಮಾರ್ಗದಲ್ಲಿ ಈ ಬಸ್‌ಗಳು ಸಂಚರಿಸಲಿವೆ.

ಗೊರಗುಂಟೆಪಾಳ್ಯದಿಂದ ಮುಂಜಾನೆ 3 ಗಂಟೆಗೆ ಮೊದಲ ಬಸ್ ಸಂಚಾರ ಆರಂಭವಾಗಲಿದೆ, ರಾತ್ರಿ 11.30ಕ್ಕೆ ಕೊನೆಯ ಬಸ್ ಹೊರಡಲಿದೆ. ಕೆಆರ್ ಪುರದಿಂದ ಕೂಡ ಮುಂಜಾನೆ 3 ಗಂಟೆಗೆ ಮೊದಲ ಬಸ್ ಸೇವೆ ಆರಂಭವಾಗಲಿದ್ದು, ರಾತ್ರಿ 11.35ಕ್ಕೆ ಕೊನೆಯ ಬಸ್ ಹೊರಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+