ಭಾರತ್ ಬಂದ್: ಬಸ್‌ ಸಂಚಾರ ಪುನಾರಂಭ ಮಾಡಿದ ಬಿಎಂಟಿಸಿ, ಕೆಎಸ್ಆರ್ ಟಿಸಿ

ಬೆಂಗಳೂರು, ಸೆಪ್ಟೆಂಬರ್ 10: ಭಾರತ್ ಬಂದ್ ಹಿನ್ನೆಲೆ ಸೋಮವಾರ ಬೆಳಗ್ಗೆಯಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಬಸ್‌ಗಳ ಸಂಚಾರ ನಿಧಾನಗತಿಯಲ್ಲಿ ಆರಂಭಗೊಳ್ಳುತ್ತಿದೆ.

ಬೆಂಗಳೂರಿನ ಕೇಂದ್ರ ಭಾಗವನ್ನು ಹೊರತುಪಡಿಸಿ ಹೊರವಲಯದಲ್ಲಿ ಬಸ್‌ ಗಳ ಸಂಚಾರ ಆರಂಭವಾಗಿದೆ. ಮೆಜೆಸ್ಟಿಕ್ ನಿಂದ ಕೆಂಪೇಗೌಡ ಏರ್‌ಪೋರ್ಟ್ ಗೆ 2 ಬಸ್‌ಗಳು ಹೊರಟಿವೆ.

ಕೆಆರ್ ಮಾರುಕಟ್ಟೆ ಸುತ್ತಮುತ್ತ ಅಂಗಡಿ ಮುಗ್ಗಟ್ಟುಗಳು ತೆರೆದಿದ್ದು, ಖಾಸಗಿ ಬಸ್‌ಗಳ ಸಂಚಾರ ಆರಂಭಗೊಂಡಿದೆ, ಮೆಜೆಸ್ಟಿಕ್‌ ಗೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್‌ಗಳು ಆಗಮಿಸುತ್ತಿವೆ. ಬಂದ್ ಕುರಿತು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಮಾತನಾಡಿ ಬೆಂಗಳೂರಿನಲ್ಲಿ ಯಾವುದೇ ಅಹಿತಕರ ನಡೆದಿಲ್ಲ.

BMTC, KSRTC resume bus services to various destinations

ರೈಲ್ವೆ ನಿಲ್ದಾಂ, ಮೇಖ್ರಿ ವೃತ್ತ, ಮೈಶೂರು ವೃತ್ತ, ಟೌನ್ ಹಾಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆದಿದೆ. ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ, ಚಾಲುಕ್ಯ ವೃತ್ತದಲ್ಲಿ ಅನುಚಿತವಾಗಿ ವರ್ತಿಸಿದರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ನಾಲ್ಕು ಕೆಎಸ್ ಆರ್ ಟಿಸಿ ನಿಗಮಗಳಿಗೆ ನಷ್ಟ ಉಂಟಾಗಿದೆ. ಕೆಎಸ್ ಆರ್ ಟಿಸಿ ಗೆ 8.50 ಕೋಟಿ, ಬಿಎಂಟಿಸಿಗೆ 4.50 ಕೋಟಿ ರೂ. ನಷ್ಟವಾಗಿದೆ. ಒಂದು ದಿನಕ್ಕೆ ಸಾರಿಗೆ ನಿಗಮಗಳಿಗೆ 21.5ರಿಂದ 22 ಕೋಟಿಯಷ್ಟು ನಷ್ಟ ಉಂಟಾಗಿದೆ. ರಾಮನಗರ, ದಾವಣಗೆರೆ, ಚಾಮರಾಜನಗರ, ಕೋಲಾರ, ಕೆಜಿಎಫ್ ಬಸ್‌ ನಿಲ್ದಾಣದಿಂದ ಕೂಡ ಬಸ್ ಸಂಚಾರ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+