BMTC: ಇಂದಿನಿಂದ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸೇವೆ: ಇಲ್ಲಿದೆ ಮಾರ್ಗ, ಸಮಯಗಳ ವಿವರ
BMTC Good News: ರಾಜ್ಯ ರಾಜಧಾನಿ ಬೆಂಗಳೂರು ಜೀವನಾಡಿ ಸಾರಿಗೆ ಬಿಎಂಟಿಸಿ ಪ್ರಯಾಣಕರ ಅನುಕೂಲತೆಗೆ ತಕ್ಕಂತೆ ಆಗಾಗ ಹೊಸ ಮಾರ್ಗಗಳಲ್ಲಿ ಬಸ್ ಸೇವೆ ನೀಡುತ್ತಲೇ ಬಂದಿದೆ. ಹಾಗೆಯೇ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನವೆಂಬರ್ 17 ಸೋಮವಾರದಿಂದ ಈ ಹೊಸ ಮಾರ್ಗಗಳಲ್ಲಿ ಸೇವೆ ಆರಂಭಿಸಲಿದೆ. ಹಾಗಾದ್ರೆ, ಎಲ್ಲಿಂದ ಎಲ್ಲಿಗೆ ಹಾಗೂ ಸಮಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಎಂಟಿಸಿ ಪ್ರಯಾಣಿಕರ ಬೇಡಿಕೆ ಮೇರೆಗೆ ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತನ್ನ ಸೇವೆಯನ್ನ ವಿಸ್ತರಣೆ ಮಾಡುತ್ತಲಿದೆ. ನಗರದಲ್ಲಿ ಒಂದು ದಿನ ಬಿಎಂಟಿಸಿ ಬಸ್ ಅಂದ್ರೆ, ಇಲ್ಲಿನ ಜನರು ಪರದಾಡಬೇಕಾಗುತ್ತದೆ. ಯಾಕಂದ್ರೆ ಬಹುತೇಕ ನಾಗರೀಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ, ಕಾರ್ಮಿಕರು, ಉದ್ಯೋಗಿಗಳು ಇದೇ ಸಾರಿಗೆಯನ್ನು ಅವಲಂಬನೆ ಮಾಡಿದ್ದಾರೆ. ಆದ್ದರಿಂದ ಇದರ ಸೇವೆ ಇಲ್ಲಿದಿದ್ದರೆ ತುಂಬಾ ಸಮಸ್ಯೆ ಆಗುವುದದಂತೂ ಖಚಿತ. ಇದನ್ನ ಗಮನದಲ್ಲಿಟ್ಟುಕಂಡೇ ಸೇವೆಯನ್ನು ವಿಸ್ತರಿಸುತ್ತಲಿದೆ ಬಿಎಂಟಿಸಿ.

ಈ ಬಿಎಂಟಿಸಿ ಬಸ್‌ಗಳಲ್ಲಿ ಪ್ರತಿನಿತ್ಯ ಏನಿಲ್ಲ ಅಂದ್ರೂ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಇದೀಗ ಪ್ರಯಾಣಿಕರಿಗೆ ಬಿಎಂಟಿಸಿ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಇಂದಿನಿಂದ ಅಂದರೆ ನವೆಂಬರ್ 17ರಿಂದ ಹೊಸ ಮಾರ್ಗದಲ್ಲಿ ಬಸ್ ಸೇವೆಯನ್ನು ಆರಂಭ ಮಾಡಲಿದೆ.
ಬೆಂಗಳೂರು ಮೆಜೆಸ್ಟಿಕ್ ಕೆಂಪೇಗೌಡ ಬಸ್ ಟರ್ಮಿನಲ್‌ನಿಂದ ನಗರದ ಹೊರ ವಲಯದ ಕನ್ನಲ್ಲಿಗೆ ಸಂಪರ್ಕ ಕಲ್ಪಿಸಲಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ಹೊಸ ಮಾರ್ಗಗಳನ್ನು ಇಂದಿನಿಂದ ಅಂದರೆ ಸೋಮವಾರದಿಂದ ಆರಂಭ ಮಾಡುತ್ತಿದೆ ಎಂದು ಬಿಎಂಟಿಸಿ ತಿಳಿಸಿದೆ.
ಮಾರ್ಗ, ಸಮಯ, ನಿಲುಗಡೆ: ಮಾರ್ಗ ಸಂಖ್ಯೆ - 238-ಯುಕೆ ಆಗಿದ್ದು, ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್- ಕನ್ನಲ್ಲಿವರೆಗೂ ಬಸ್ ಸಂಚಾರ ಆರಂಭಿಸಲಾಗುತ್ತಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 7:55, 9:25, 10:35, 11:50 ಹಾಗೂ ಮಧ್ಯಾಹ್ನ, 1, 2:35, 3:45 ಗಂಟೆಗೆ ಬಸ್ ಬಿಡಲಿದೆ. ಇನ್ನು ಕನ್ನಲ್ಲಿಯಿಂದ ಬಸ್ ಬಳಿಗ್ಗೆ 8:40, 10:50, ಮಧ್ಯಾಹ್ನ 12:10, 1:25, 3:00 ಸಂಜೆ 5:35 ಗಂಟೆಗೆ ಹೊರಡಲಿದೆ ಎಂದು ಬಿಎಂಟಿಸಿ ತಿಳಿಸಿದೆ.
ಇನ್ನೂ ಈ ಮಾರ್ಗದಲ್ಲಿ ಸಂಚರಿಸುವ ಬಸ್ ಸುಜಾತ ಟಾಕೀಸ್, ಮಾಗಡಿ ರಸ್ತೆ 01ನೇ ಕ್ರಾಸ್, ವಿಜಯನಗರ, ಚಂದ್ರ ಲೇಔಟ್, ಮೂಡಲಪಾಳ್ಯ, ನಾಗರಭಾವಿ ಸರ್ಕಲ್, ಮುದ್ದಯ್ಯನಪಾಳ್ಯ, ಚಿಕ್ಕಕೋಡಿಗೆಹಳ್ಳಿಯಲ್ಲಿ ನಿಲುಗಡೆ ಹೊಂದಿರಲಿದೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ. ಬಿಎಂಟಿಸಿ ಇಂತಹ ಸೇವೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದಿನಿಂದಲೂ ಸಹ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಸೇವೆಯನ್ನು ವಿಸ್ತರಣೆ ಮಾಡುತ್ತಾ ಬಂದಿದೆ.
ವಜ್ರ ಬಸ್‌ಗಳ ಸೇವೆ: ಈಗಾಗಲೇ ಮೆಜೆಸ್ಟಿಕ್‌ನಿಂದ ನೆಲಮಂಗಲ ನಡುವೆ 6 ಹೊಸ ಹವಾನಿಯಂತ್ರಿತ ಎಲೆಕ್ಟ್ರಿಕ್ ವಜ್ರ ಬಸ್‌ಗಳು ನವೆಂಬರ್ 3 ರಿಂದ ಸಂಚಾರ ಆರಂಭಿಸಿವೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮೆಜೆಸ್ಟಿಕ್-ನೆಲಮಂಗಲ ನಡುವೆ ಹೊಸ ಮಾರ್ಗ ಆರಂಭಿಸಿದೆ. 30 ನಿಮಿಷ ಅಂತರದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಬಸ್‌ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ. ಕೆಂಪೇಗೌಡ ಬಸ್ ನಿಲ್ದಾಣ - ನೆಲಮಂಗಲಕ್ಕೆ ಈ ಸೇವೆಯನ್ನು ಕಲ್ಪಿಸಲಾಗಿತ್ತು. ಮಾರ್ಗ ಸಂಖ್ಯೆ - ವಿ 258 ಸಿ ಆಗಿದ್ದು, ಇದು ನೂತನ ಹವಾನಿಯಂತ್ರಿತ ಎಲೆಕ್ಟ್ರಿಕ್ ವಜ್ರ ಬಸ್ ಆಗಿದೆ.












Click it and Unblock the Notifications