BMTC: ಬಿಎಂಟಿಸಿ ಬಸ್ ಹೊಸ ಮಾರ್ಗ ಘೋಷಣೆ, ರೈಲು ಪ್ರಯಾಣಿಕರಿಗೆ ಅನುಕೂಲ

ಬೆಂಗಳೂರು, ಆಗಸ್ಟ್‌ 24: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಗಸ್ಟ್ 26ರಿಂದ ಹೊಸ ಮಾರ್ಗವೊಂದರಲ್ಲಿ ಬಸ್ ಸಂಚಾರ ಆರಂಭಿಸಲಿದೆ. ಈ ಮಾರ್ಗದಿಂದ ನಗರದ ಎರಡು ಪ್ರಮುಖ ರೈಲು ನಿಲ್ದಾಣಗಳ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕಳೆದ ಒಂದು ವರ್ಷದಲ್ಲಿ 40 ವಿವಿಧ ಪ್ರದೇಶಗಳಿಂದ ಹೊಸ ಬಸ್‌ ಮಾರ್ಗವನ್ನು ಬಿಎಂಟಿಸಿ ಪರಿಚಯಿಸಿ, ಯಶಸ್ವಿಯಾಗಿದೆ.

ಬಿಎಂಟಿಸಿ ಈಗ 300-ಆರ್ ಸಂಖ್ಯೆಯ ಮಾರ್ಗವನ್ನು ಘೋಷಣೆ ಮಾಡಿದೆ. ಈ ಮಾರ್ಗದಲ್ಲಿ ಆಗಸ್ಟ್ 26ರಿಂದ ಬಸ್‌ಗಳು ಸಂಚಾರ ನಡೆಸಲಿವೆ. ಈ ಮಾರ್ಗ ಯಶವಂತಪುರ ರೈಲು ನಿಲ್ದಾಣ ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಸಂಪರ್ಕವನ್ನು ಕಲ್ಪಿಸಲಿದೆ.

BMTC Introduced New Routes Yeswantpur And Sir M Visvesvaraya Terminal

ಈ ಮಾರ್ಗದ ಬಸ್‌ಗಳು ಯಶವಂತಪುರ ರೈಲು ನಿಲ್ದಾಣ, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ಸಮಯವನ್ನು ಬಿಎಂಟಿಸಿ ಪ್ರಕಟಣೆ ಮೂಲಕ ತಿಳಿಸಿದೆ. ಪ್ರಯಾಣಿಕರು ಈ ಬಸ್ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.

ಬಸ್ ಮಾರ್ಗದ ವಿವರ: 300-ಆರ್ ಮಾರ್ಗ ಸಂಖ್ಯೆ ಯಶವಂತಪುರ ರೈಲು ನಿಲ್ದಾಣ ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೈಯಪ್ಪನಹಳ್ಳಿ ನಡುವಿನ ಮಾರ್ಗದ ಬಸ್‌ ಯಶವಂತಪುರ ಬಸ್ ನಿಲ್ದಾಣ, ಕಂಟೋನ್ಮೆಂಟ್ ರೈಲು ನಿಲ್ದಾಣ, ಮಾರುತಿ ಸೇವಾ ನಗರ ಮೂಲಕ ಸಂಚಾರವನ್ನು ನಡೆಸಲಿದೆ.

ಯಶವಂತಪುರ ರೈಲು ನಿಲ್ದಾಣದಿಂದ ಬಸ್ ಹೊರಡುವ ಸಮಯ. 5.00, 6.05, 7.20, 8.25, 9.45, 11.10, 14.25, 16.10, 17.10, 18.45, 19.45, 21.30.

ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಬಸ್ ಹೊರಡುವ ಸಮಯ. 5.00, 6.05, 7.10, 8.30, 9.30, 11.15, 14.55, 15.55, 17.30, 18.30, 19.50, 20.50.

ಹೊಸ ಹೊಸ ಮಾರ್ಗಗಳು: ಬಿಎಂಟಿಸಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸುತ್ತದೆ. ಮತ್ತೊಂದು ಕಡೆ ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಫೀಡರ್ ಬಸ್ ಸೇವೆ ಪರಿಚಯಿಯಸುತ್ತದೆ. ಈಗ ನಗರದ ಒಂದು ರೈಲು ನಿಲ್ದಾಣದಿಂದ ಮತ್ತೊಂದು ರೈಲು ನಿಲ್ದಾಣಕ್ಕೆ ಬಸ್ ಸೇವೆಯನ್ನು ಆರಂಭಿಸಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ ಕಳೆದ ಒಂದು ವರ್ಷದಲ್ಲಿ ಬಿಎಂಟಿಸಿ 40 ಹೊಸ ಮಾರ್ಗದಲ್ಲಿ ಬಸ್‌ ಸಂಚಾರ ಆರಂಭಿಸಿದೆ. ಇದಕ್ಕೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬಸ್‌ಗಳು ಶೇ 70ರಷ್ಟು ಭರ್ತಿಯಾಗಿ ಸಂಚರಿಸುತ್ತಿವೆ.

6 ಸಾವಿರಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳು ನಗರದಲ್ಲಿವೆ. ಇವುಗಳಲ್ಲಿ ಸಾಮಾನ್ಯ ಬಸ್, ಹವಾನಿಯಂತ್ರಣ ರಹಿತ ಬಸ್, ಹವಾನಿಯಂತ್ರಣ ಸಹಿತ ಬಸ್, ವಿಮಾನ ನಿಲ್ದಾಣ ಮಾರ್ಗದ ವೊಲ್ವೋ ಬಸ್‌ಗಳು ಸೇರಿವೆ. ಅಲ್ಲದೇ ಇತ್ತೀಚೆಗೆ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಸಹ ಬಿಎಂಟಿಸಿ ಆರಂಭಿಸಿದೆ.

ಹೊಸ ಮಾರ್ಗವನ್ನು ಪರಿಚಯಿಸಲು ಬಿಎಂಟಿಸಿ ತನ್ನದೇ ಆದ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತದೆ. ಅಪಾರ್ಟ್‌ಮೆಂಟ್‌ ನಿವಾಸಿಗಳ ಸಭೆ, ಲೇಔಟ್‌ಗಳ ಸಮುದಾಯ ಸಭೆಯಲ್ಲಿ ನಡೆಯುವ ಚರ್ಚೆಯ ಮಾಹಿತಿ ಸಂಗ್ರಹ ಮಾಡುತ್ತದೆ. ಬಸ್ ಮಾರ್ಗಕ್ಕೆ ಇರುವ ಬೇಡಿಕೆ ಕುರಿತು ಪರಿಶೀಲನೆ ನಡೆಸುತ್ತದೆ.

ಅಲ್ಲದೇ ಬಸ್ ಚಾಲಕರು, ನಿರ್ವಾಹಕರಿಂದ ಅಭಿಪ್ರಾಯವನ್ನು ಕೇಳುತ್ತದೆ. ಹೊಸ ಮಾರ್ಗದಲ್ಲಿ ಪೀಕ್ ಹವರ್‌ನಲ್ಲಿ ಇರುವ ಸಂಚಾರ ದಟ್ಟಣೆ, ಹೊಸ ಬಸ್ ಓಡಿಸಿದರೆ ಆಗುವ ಲಾಭದ ಕುರಿತು ಮಾಹಿತಿ ಪಡೆದು ಮಾರ್ಗವನ್ನು ಅಂತಿಮಗೊಳಿಸುತ್ತದೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗದಿದ್ದರೆ ಮಾರ್ಗವನ್ನು ಪರಿಷ್ಕರಣೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+