BMTC: ಸಿಹಿ ಸುದ್ದಿ: ಈ ಹೊಸ ಮಾರ್ಗಗಳಲ್ಲಿ ಬಸ್ ಸಂಚಾರ, ವಿವರ
ಬೆಂಗಳೂರು, ಫೆಬ್ರವರಿ 28: ಇತ್ತೀಚೆಗಷ್ಟೇ ನಮ್ಮ ಮೆಟ್ರೋ ಫಿಡರ್ ಬಸ್ ಸೇವೆಗಳ ಮಾಹಿತಿಗೆ ಕ್ಯೂ ಆರ್ ಆಧಾರಿತ ಆಪ್ ಪರಿಚಯಿಸಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಕಳೆದ ಸೋಮವಾರದಿಂದ (ಫೆ.26) ಈ ಕೆಳಗಿನ ಬಸ್ ಮಾರ್ಗಗಳನ್ನು ಪರಿಚಯಿಸಿದೆ.
ಒಂದು ವಾರದ ಹಿಂದಷ್ಟೇ ಹೆಚ್ಚುವರಿ ಬಸ್‌ಗಳನ್ನು ಹೊಸ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಿದ್ದ ಬಿಎಂಟಿಸಿ ಇದೀಗ ಮತ್ತಷ್ಟು ಹೊಸ ಮಾರ್ಗಗಳಲ್ಲಿ ಬಸ್ ಬಿಟ್ಟಿದೆ.

ಬೆಂಗಳೂರು ದೊಮ್ಮಸಂದ್ರ, ಕೊಡತಿ ಗೇಟ್, ಕೈಕೊಡ್ರಹಳ್ಳಿ, ಇಬ್ಬಲೂರು ಜಂಕ್ಷನ್ ಮಾರ್ಗವಾಗಿ ಅಗರ ದಾರಿ ಹಾದು ಮೂಲಕ ಸರ್ಜಾಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗಿನ ಮಾರ್ಗ (500)ದಲ್ಲಿ ಬಿಎಂಟಿಸಿ ಬಸ್‌ಗಳು ಸಂಚಾರ ಸೇವೆ ನೀಡಲಿವೆ.
ಹೊಸ ಮಾರ್ಗಗಳ ಮಾಹಿತಿ
ಈ ಹೊಸ ಮಾರ್ಗದಲ್ಲಿ ಎರಡು ಬಿಎಂಟಿಸಿ ಬಸ್‌ಗಳು ಪ್ರತಿನಿತ್ಯ ಒಟ್ಟು 12 ಟ್ರಿಪ್‌ಗಳನ್ನು ಹೊಡೆಯಲಿವೆ. ಅದೇ ರೀತಿ ಮತ್ತೊಂದು ಮಾರ್ಗವಾದ (505) ಕಸವನಹಳ್ಳಿ, ದೊಡ್ಡಕನ್ನಳ್ಳಿ, ಕೃಪಾನಿಧಿ ಕಾಲೇಜು ಮೂಲಕ ಗುಂಜೂರು ಮತ್ತು ವರ್ತೂರು ಮಾರ್ಗವರಿ ವರ್ತೂರು ಕೋಡಿಗೆ ಹೊಸ ರಸ್ತೆವರೆಗೆ ಸಂಚರಿಸಲಿದೆ. ಈ ಮಾರ್ಗದಲ್ಲಿ ಎರಡು ಬಸ್‌ಗಳನ್ನು ನಿಯೋಜನೆಗೊಳ್ಳಲಿದ್ದು, ಅವರು ಪ್ರತಿದಿನ 14 ಟ್ರಿಪ್‌ಗಳನ್ನು ಹೊಡೆಯಲಿವೆ.
ಈ ಮೂಲಕ ಸಾರ್ವಜನಿಕ ಸಾರಿಗೆ ಬಳಸುವಂತೆ ಆದ್ಯತೆ ನೀಡಿರುವ ನಿಗಮವು ಆಯಾ ಪ್ರದೇಶಗಳ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸುತ್ತಿದೆ.

ವಾರದ ಹಿಂದೆ ಈ ಹೊಸ ಮಾರ್ಗದಲ್ಲಿ ಬಸ್ ಬಿಡುಗಡೆ
ಕಳೆದ ವಾರವಷ್ಟೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೆಂಗಳೂರಿನ ಹೊರವಲಯದ ಹೊಸ ಮಾರ್ಗಗಳಿಗೆ ಬಸ್ ಬಿಟ್ಟಿದೆ. ಸರ್ಜಾಪುರದಿಂದ ಬನ್ನೆರುಘಟ್ಟ ನ್ಯಾಷನಲ್ ಉದ್ಯಾನಕ್ಕೆ ವಾಯು ವಜ್ರ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಇವು 30 ಟ್ರಿಪ್ ಹೊಡೆಯಲಿವೆ.
ನಗರದ ಸರ್ಜಾಪುರದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ನಿತ್ಯ ನಾಲ್ಕು ವಾಯು ವಜ್ರಬಸ್‌ಗಳು ಸಂಚರಿಸಲಿವೆ. ಈ ಮೂಲಕ ನಗರದ ಟ್ರಾಫಿಕ್ ಇಳಿಕೆ ಮಾಡಲು ಸಹ ನಿಗಮ ಕೊಡುಗೆ ನೀಡುತ್ತಿದೆ.
ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಈ ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿರುವ ಕಾರಣ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಸಾರ್ವಜನಿಕರಿಗೆ ಹೆಚ್ಚುವರಿ ಬಸ್ ಸಿಕ್ಕಂತಾಗಿದೆ.












Click it and Unblock the Notifications