ನಮ್ಮ ಮೆಟ್ರೋಗೆ ಪೂರಕವಾಗಿ ಫೀಡರ್ ಬಸ್ ಹೆಚ್ಚಳ

ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಮೊದಲ ಹಂತ ಮುಕ್ತಾಯವಾಗಿದ್ದು, ಉದ್ಘಾಟನೆಗೆ ಕಾಯಲಾಗುತ್ತಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವುದರಿಂದ ಇದಕ್ಕೆ ಪೂರಕವಾಗಿ ಬಿಎಂಟಿಸಿ ಫೀಡರ್ ಬಸ್ ಗಳ ಸಂಖ್ಯೆ ಏರಿಸಲಿದೆ.

ಬೆಂಗಳೂರು, ಮೇ 27: ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಮೊದಲ ಹಂತ ಮುಕ್ತಾಯವಾಗಿದ್ದು, ಉದ್ಘಾಟನೆಗೆ ಕಾಯಲಾಗುತ್ತಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವುದರಿಂದ ಇದಕ್ಕೆ ಪೂರಕವಾಗಿ ಬಿಎಂಟಿಸಿ ಫೀಡರ್ ಬಸ್ ಗಳ ಸಂಖ್ಯೆ ಏರಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್ ಹೇಳಿದ್ದಾರೆ.

ಜೂನ್‌ 15ರೊಳಗೆ 'ನಮ್ಮ ಮೆಟ್ರೊ' ಮೊದಲ ಹಂತದ (42 ಕಿ.ಮೀ) ಪೂರ್ಣ ಪ್ರಮಾಣದ ವಾಣಿಜ್ಯ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆ ಇದೆ. ಇದಾದ ಬಳಿಕ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 5 ಲಕ್ಷಕ್ಕೆ ಹೆಚ್ಚುವ ಸಾಧ್ಯತೆ ಇದೆ.

ಮೆಟ್ರೋ ನಿಲ್ದಾಣಗಳಿಂದ ನಗರದ ವಿವಿಧೆಡೆಗೆ ಪ್ರಯಾಣಿಸಲು ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಫೀಡರ್ ಬಸ್ ಗಳನ್ನು ಒದಗಿಸಲಿದೆ. ಹಾಲಿ ಇರುವ ಫೀಡರ್ (ಸಂಪರ್ಕ) ಬಸ್ ಗಳ ಜತೆಗೆ 100 ಅಧಿಕ ಬಸ್ ಗಳನ್ನು ಸೇವೆಗೆ ಒದಗಿಸಲಾಗುವುದು ಎಂದು ಬಿಎಂಟಿಸಿ ಪ್ರಕಟಿಸಿದೆ.

BMTC has announced more feeder service along the Namma Metro line

ಬಿಎಂಟಿಸಿ ಫೀಡರ್ ಬಸ್ ಸೇವೆ: 2011ರಿಂದ ಆರಂಭವಾಗಿದ್ದು, ಎಂ.ಜಿ.ರಸ್ತೆಯ ವೆುಟ್ರೊ ರೈಲು ನಿಲ್ದಾಣದಿಂದ ಬೈಯಪ್ಪನಹಳ್ಳಿವರೆಗೆ ಮೊದಲ ವೆುಟ್ರೊ ಸಂಚಾರಕ್ಕೆ ಸಂಪರ್ಕ ಒದಗಿಸಲಾಯಿತು.
* 6 ಮೆಟ್ರೊ ನಿಲ್ದಾಣಗಳಿಗೆ 24 ಮೆಟ್ರೊ ಫೀಡರ್ ಬಸ್‌ಗಳು ಸಂಚರಿಸುತ್ತಿವೆ.
* ನಂತರ ಪ್ರತಿ 10 ನಿಮಿಷಗಳ ಅಂತರದಲ್ಲಿ 1,248 ಟ್ರಿಪ್‌ಗಳ ಮೂಲಕ ಒಟ್ಟು 60 ಬಸ್‌ಗಳು ಸೇವೆ ಒದಗಿಸಲಾಗಿದೆ.
* ಆದರೆ, ಮೆಟ್ರೋ ನಿಲ್ದಾಣಗಳಿಂದ ಫೀಡರ್ ಬಸ್ ಸೇವೆ ಬಳಸುವವರ ಸಂಖ್ಯೆ ಕಡಿಮೆ. ಸಂಖ್ಯೆ ಹೆಚ್ಚಳಕ್ಕಾಗಿ ಫೀಡರ್ ಬಸ್ ಪ್ರಯಾಣ ದರವನ್ನು 2017ರ ಫೆಬ್ರವರಿಯಲ್ಲಿ ಇಳಿಕೆ ಮಾಡಲಾಗಿತ್ತು.

ನಮ್ಮ ಮೆಟ್ರೊ ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಸಂಚಾರ ಆರಂಭವಾದ ಬಳಿಕ ಸಂಸ್ಥೆಗೆ ನಷ್ಟ ಉಂಟಾಗಿದೆ. 32 ಆಸನಗಳ ಮಧ್ಯಮ ಗಾತ್ರದ 100 ಬಸ್ ಗಳನ್ನು ಜೆನರ್ಮ್ ಅಡಿಯಲ್ಲಿ ಖರೀದಿಸಿ ವಿವಿಧ ಬಡಾವಣೆಗಳಲ್ಲಿ ಸಂಚಾರಕ್ಕೆ ಬಿಡಲಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ(ಬಿಎಂಟಿಸಿ ವೆಬ್ ತಾಣದಲ್ಲಿ ಮನವಿ ಸಲ್ಲಿಸಬಹುದು) ನೋಡಿಕೊಂಡು ಸಂಪರ್ಕ ಸಾರಿಗೆ ವಾಹನ/ಟ್ರಿಪ್ ಗಳ ಸಂಖ್ಯೆ ಹೆಚ್ಚಿಸುತ್ತೇವೆ ಎಂದು ಬಿಎಂಟಿಸಿ ಎಂಡಿ ಏಕ್‌ರೂಪ್‌ ಕೌರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+