BMTC: ಬಿಎಂಟಿಸಿಯಿಂದ ಯಶವಂತಪುರ-ದೇವನಹಳ್ಳಿ ನಡುವೆ ನೇರ ಬಸ್ ಸೇವೆ-ಯಾವಾಗಿನಿಂದ? ಇಲ್ಲಿದೆ ಮಾಹಿತಿ
BMTC Bus: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲೊ ಬಿಎಂಟಿಸಿ ಕೂಡ ಒಂದಾಗಿದೆ. ಇನ್ನು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಗಾಗಾ ಹೊಸ ಮಾರ್ಗಗಲ್ಲಿ ಬಸ್‌ಗಳನ್ನು ಒದಗಿಸುತ್ತಾ ಬಂದಿದೆ. ಇದೀಗ ಯಶವಂತಪುರ-ದೇವನಹಳ್ಳಿ ನಡುವೆ ನೇರ ಬಸ್ ಸೇವೆ ಕಲ್ಪಿಸಲು ನಿರ್ಧರಿಸಿದೆ. ಹಾಗಾದರೆ ಸೇವೆ ಯಾವಾಗಿನಿಂದ ಪ್ರಾರಂಭವಾಗಲಿದೆ ಹಾಗೂ ಸಮಯ, ಮಾರ್ಗಗಳ ವಿವರವನ್ನು ಇಲ್ಲಿ ತಿಳಿಯಿರಿ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈ ಹೊಸ ಮಾರ್ಗಗಳ ನಡುವೆ ಅಕ್ಟೋಬರ್ 3ರಿಂದ ಅಂದರೆ ನಾಳೆಯಿಂದ ನೇರ ಬಸ್ ಪರಿಚಯಿಸಲಾಗುತ್ತಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತಿಳಿಸಿದೆ.

ಬಸ್ ಸೇವೆ ಸಮಯಗಳ ವಿವರ: ಬಸ್ ಮಾರ್ಗ ಸಂಖ್ಯೆ - 298 ಎಂವೈ ಹೊಸ ಮಾರ್ಗ ಯಶವಂತಪುರ-ದೇವನಹಳ್ಳಿ ನಡುವೆ ಸಂಚರಿಸಲಿದೆ. ಈ ಬಸ್ ಮತ್ತಿಕೆರೆ, ಬಿ.ಇ.ಎಲ್ ಸರ್ಕಲ್, ಹೆಬ್ಬಾಳ, ಯಲಹಂಕ 2ನಲ್ಲಿ ನಿಲುಗಡ ಆಗಲಿದೆ. ಯಶವಂತಪುರದಿಂದ ಬೆಳಿಗ್ಗೆ 5:45, 7:20, 9:35, ಮಧ್ಯಾಹ್ನ 3:20, ಸಂಜೆ 4:20, ರಾತ್ರಿ 8:20 ಗಂಟೆಗೆ ಹೊರಡಲಿವೆ. ಇನ್ನು ದೇವನಹಳ್ಳಿಯಿಂದ ಬೆಳಗ್ಗೆ 5:45, 7:20, ಮಧ್ಯಾಹ್ನ 1:05, 2.05, 6:10, 7:45 ಗಂಟೆಗೆ ಹೊರಡಲಿವೆ.
ಮೂರು ಬಸ್‌ಗಳ ಸಂಚಾರ: ಯಲಹಂಕದಿಂದ ದೇವನಹಳ್ಳಿಗೆ ಹೊಸ ಮಾರ್ಗದಲ್ಲಿ ಮೂರು ಬಸ್‌ಗಳನ್ನು ಪರಿಚಯಿಸಲು ಬಿಎಂಟಿಸಿ ಪರಿಚಯಿಸಿದೆ. ಬಾಗಲೂರು, ಭಟ್ರಮಾರೇನಹಳ್ಳಿ, ಬೆಟ್ಟಕೋಟೆ, ಬೈಚಾಪುರ ಮಾರ್ಗವಾಗಿ ಸೆಪ್ಟೆಂಬರ್ 16ರಿಂದ ಬಸ್‌ಗಳು ಸಂಚರಿಸುತ್ತಿವೆ.
ದಿನಕ್ಕೆ ಯಲಗಂಕದಿಂದ ದೇವನಹಳ್ಳಿಗೆ 12 ಟ್ರಿಪ್ ಮತ್ತು ದೇವನಹಳ್ಳುಯಿಂದ ಯಲಹಂಕಕ್ಕೆ 12 ಟ್ರಿಪ್ ಇರಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಶ್ರೀನಿವಾಸಪುರ ಕ್ರಾಸ್, ಕರಿಯಣ್ಣನ ಪಾಳ್ಯ, ರಘುವನಹಳ್ಳಿ ಕ್ರಾಸ್, ಆವಲಹಳ್ಳಿ ಬಿಡಿಎ, ಅಂಜನಾಪುರ, ಬಸವನಪುರ ಗೇಟ್, ಬೆಟ್ಟದಾಸನಪುರ ಮಾರ್ಗವಾಗಿ ನಾಲ್ಕು ಬಸ್‌ಗಳು ದಿನಕ್ಕೆ 12 ಟ್ರಿಪ್ ಸಂಚರಿಸಲಿವೆ ಎಂದು ತಿಳಿಸಿದ್ದರು.
ನಾಲ್ಕು ಬಸ್‌ಗಳ ಸೇವೆ: ಈಗಾಗಲೇ ಸೆಪ್ಟೆಂಬರ್ 14ರಿಂದ ಹೊಸ ಬಸ್ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿವೆ. ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಬಸ್ ಸೇವೆಯನ್ನು ಬಿಎಂಟಿಸಿ ಆರಂಭಿಸಿದೆ. ಒಟ್ಟು ನಾಲ್ಕು ಬಸ್‌ಗಳು ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಚಾರ ಮಾಡಲಿವೆ. 378-F ಸಂಖ್ಯೆಯ ಈ ಮಾರ್ಗದಲ್ಲಿ ಶ್ರೀನಿವಾಸಪುರ ಕ್ರಾಸ್, ಕರಿಯಣ್ಣನಪಾಳ್ಯ, ರಘುವನಹಳ್ಳಿ, ಆವಲಹಳ್ಳಿ, ಬಿಡಿಎ, ಅಂಜನಾಪುರ, ಬಸವನಪುರ ಗೇಟ್, ಬೆಟ್ಟದಾಸನಪುರದ ಮೂಲ ಬಸ್‌ಗಳ ಸೇವೆ ದೊರೆಯಲಿದೆ.












Click it and Unblock the Notifications