BMTC: ಟುಮೊಕ್ ಒಪ್ಪಂದ ಸ್ಥಗಿತದಿಂದ ಪಾಸ್ ವ್ಯವಸ್ಥೆ, ಪ್ರಯಾಣಿಕರಿಗೆ ಹೊಡೆತ?
ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಡಿಜಿಟಲ್ ಪಾಸ್ ಖರೀದಿಗೆ ಅನುಕೂಲವಾಗಿದ್ದ ಟಮೊಕ್ ಕಂಪನಿ ಜೊತೆಗಿನ ಒಪ್ಪಂದ ರದ್ದಿಗೆ ಮುಂದಾದ ಬಿಎಂಟಿಸಿ. ಇದರಿಂದ ಪ್ರಯಾಣಿಕರಿಗೆ ಹೊಡೆತ ಬೀಳಲಿದಿಯಾ? ತಿಳಿಯಿರಿ.
ಬೆಂಗಳೂರು, ಫೆಬ್ರವರಿ 09: ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಡಿಜಿಟಲ್ ಪಾಸ್‌ಗಳನ್ನು ನೀಡಲು ಅನುಕೂಲವಾಗಿದ್ದ ಸ್ಟಾರ್ಟ್‌ಅಪ್ ಕಂಪನಿಯೊಂದಿಗಿನ ಒಪ್ಪಂದ ಸ್ಥಗಿತಗೊಳಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMRC) ನಿರ್ಧರಿಸಿದೆ. ಇದರಿಂದ ಪಾಸ್ ಖರೀದಿಗೆ ಹೊಡೆ ಬೀಳುವ ಸಾಧ್ಯತೆ ಇದ್ದು, ಪ್ರಯಾಣಿಕರಿಗೂ ತೊಂದರೆ ಆಗಲಿದೆ.
ಬಿಎಂಟಿಸಿಯ ಈ ಒಪ್ಪಂದ ರದ್ದು ನಿರ್ಧಾರವು ಸಾರ್ವಜನಿಕ ಸಾರಿಗೆ ನಂಬಿಕೊಂಡ ಬೆಂಗಳೂರಿನ ಲಕ್ಷಾಂತರ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ. ಬಿಎಂಟಿಸಿಯು ಕಳೆದ ವರ್ಷ 2022ರ ಏಪ್ರಿಲ್ ನಲ್ಲಿ ಡಿಜಿಟಲ್ ಪಾಸ್‌ಗಳ ವ್ಯವಸ್ಥೆಗಾಗಿ ಸ್ಟಾರ್ಟ್ ಕಂಪನಿಯಾದ ಟುಮೊಕ್ (Tummoc) ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.
ಟುಮೊಕ್ ಬಿಎಂಟಿಸಿ ಟಿಕೆಟ್ ಮತ್ತು ಟ್ರ್ಯಾಕಿಂಗ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ನಿಂದ ಪ್ರಯಾಣಿಕರಿಗೆ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್ ಖರೀದಿಸಲು ನೆರವಾಗಿತ್ತು. ಪ್ರತಿ ನಿತ್ಯದ ಟಿಕೆಟಿಂಗ್ ವ್ಯವಸ್ಥೆಯನ್ನು ಈ ಒಪ್ಪಂದ ವ್ಯಾಪ್ತಿಗೆ ತರಳು ಆರಂಭದಲ್ಲಿ ಯೋಜಿಸಲಾಗಿತ್ತು. ಆದರೆ ಆಗಿನ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರೊಬ್ಬರು ಬೇರೆಡೆ ವರ್ಗವಾದ್ದರಿಂದ ಈ ಯೋಜನೆ ಮತ್ತಷ್ಟು ನಿಧಾನವಾಯಿತು.

ಬಿಎಂಟಿಸಿ ನಗದು ರಹಿತ ನಿತ್ಯದ ಟಿಕೆಟ್, ಬಸ್‌ಗಳ ಸಮಯದ ಮಾಹಿತಿ (ಟ್ರ್ಯಾಕಿಂಗ್) ನೀಡುವ ವ್ಯವಸ್ಥೆ ರೂಪಿಸುವಲ್ಲಿ ವಿಫಲವಾಗಿದೆ. ಡಿಜಿಟಲ್ ಪಾಸ್‌ಗಳು ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರವಾಗಿತ್ತು. ಈ ಒಪ್ಪಂದದಿಂದ ಮತ್ತೆ ಹಳೆಯ ಟಿಕೆಟ್ ವ್ಯವಸ್ಥೆಗೆ ಮರಳುವ ಸಾಧ್ಯತೆ ಇದೆ. ಜೊತೆಗೆ ಪ್ರಯಾಣಿಕರಿಗೆ ತೊಂದರೆ ಅನುಭಿವಿಸುತ್ತಾರೆ ಹಾಗೂ ನಗದು ಹಣದ ಕೊರತೆ ಸೃಷ್ಟಿಯಾಗಿ ಹಂತ ಹಂತವಾಗಿ ಅದು ಬಿಎಂಟಿಸಿ ಆದಾಯದ ಮೇಲೂ ದುಷ್ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.
ಡಿಜಿಟಲ್ ಪಾಸ್‌ಗಳ ಮಾರಾಟದಲ್ಲಿ ಭಾರಿ ಏರಿಕೆ
ಹಿಂದಿನ ತಿಂಗಳು ನಿಗಮವು ಟುಮೊಕ್ ಸಂಸ್ಥೆ ಜೊತೆ ಸೇರಿ ದಾಖಲೆ ಮಟ್ಟದ್ದಲಿ ಅಂದರೆ ಒಟ್ಟು ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಪಾಸ್ ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ವಿತರಿಸಲಾದ ಡಿಜಿಟಲ್ ಪಾಸ್‌ಗಳ ಸಂಖ್ಯೆ 4,500 ರಿಂದ ಜನವರಿ 2023 ರಲ್ಲಿ 1.5 ಲಕ್ಷಕ್ಕೆ ಹೆಚ್ಚಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿಗೆ ಸಂಪರ್ಕಿಸಿದರೂ ಟುಮೂಕ್ ಪ್ರತಿಕ್ರಿಯಿಸಲಿಲ್ಲ.
ಟುಮೋಕ್ ಕಂಪನಿಗೆ ಸುಮಾರು ಎರಡು ಲಕ್ಷಕ್ಕು ಹೆಚ್ಚು ಬಳಕೆದಾರರಿದ್ದಾರೆ. ಇದರ ತಿಂಗಳ ಬೆಳವಣಿಗೆ ಶೇ.15-20 ರನ್ನಲಾಗಿದೆ. ಸರ್ಕಾರದಿಂದಲೇ ನೋಂದಾವಣೆಗೊಂಡ ಸ್ಟಾರ್ಟ್ ಅಪ್ ಕಂಪನಿ ಇದಾಗಿದೆ. ಇದು ನಿಗಮಕ್ಕೆ 9,500 ಸುಧಾರಿತ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ ಒದಗಿಸಿದೆ. ಇದರೊಂದಿಗಿನ ಒಪ್ಪಂದದ ನಂತರ ಪಾಸ್‌ಗಳ ಖರೀದಿಯಲ್ಲಿ ಏರಿಕೆ ಕಂಡು ಬಂದಿತ್ತು.

ಹೊಸ ವ್ಯವಸ್ಥೆ ತರಲು ಬಿಎಂಟಿಸಿ ಚಿಂತನೆ
ಈ ಕುರಿತು ಪ್ರತಿಕ್ರಿಯಿಸಿದ ಬಿಎಂಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಅವರು, ಟುಮೊಕ್ ಜೊತೆ ನಾವು ಒಪ್ಪಂದ ಮಾಡಿಕೊಂಡಿಲ್ಲ. ಬಿಎಂಟಿಸಿ ಸಾಂಸ್ಥಿಕ ಕಾರ್ಯವಿಧಾನ ಅನುಸರಿಸುತ್ತಿದೆ. ಖಾಸಗಿ ಸಂಸ್ಥೆಗಳ ಜೊತೆ ಒಪ್ಪಂದ ಅಷ್ಟು ಸುರಕ್ಷಿತವಲ್ಲ ಎಂದು ಅವರು ಅಭಿಪ್ರಾಯಪಟ್ಟರು. ನಾವೇ ಸ್ವತಃ ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆ ಜೊತೆ ಸೇವೆ ನೀಡಲು ಸಜ್ಜಾಗುತ್ತಿದ್ದೇವೆ. ಪಾಸ್ ವ್ಯವಸ್ಥೆ ಹೆಚ್ಚು ವಿಶ್ವಾಸಾರ್ಹವಾಗಿದೆ ಈ ಸಂಬಂಧ ಎಲ್ಲವನ್ನೂ ಈಗಲೇ ಹೇಳಲು ಆಗುವುದಿಲ್ಲ ಎಂದರು.
ಬಿಎಂಟಿಸಿಯು ಬಸ್‌ಗಳು ಆಯಾಯ ಸಮಯಕ್ಕೆ ಎಲ್ಲಿವೆ ಎಂಬ ನೈಜ ಸಮಯ ಟ್ರ್ಯಾಕ್ ಮಾಡಲು 2016 ರಲ್ಲಿ ಆರಂಭಿಸಿದ 1ನೇ ಅಪ್ಲಿಕೇಶನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ನಂತರ 2019ರಲ್ಲಿ ಸಿದ್ಧಪಡಿಸಲಾದ ಇನ್ನೊಂದು ಆಪ್ ನಲ್ಲಿ ಸಹ ಸಮಸ್ಯೆಗಳು ಕಂಡು ಬಂದವು. ಅದಾದ ಬಳಿಕ ನಿಗಮ ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟೇಶನ್ ಸಿಸ್ಟಮ್ ಯೋಜನೆ ಆರಂಭಿಸಿತು. ಅದರ ಒಪ್ಪಂದದ ಅವಧಿ 2021 ಜುಲೈನಲ್ಲಿ ಮುಗಿದ ಹಿನ್ನೆಲೆ ಬಸ್ ಟ್ರ್ಯಾಕ್ ಸಾಧ್ಯವಾಗಲಿಲ್ಲ.
ನಿರ್ಭಯ ನಿಧಿಯಡಿ 'ನಿಂಬಸ್' ಅಪ್ಲಿಕೇಶನ್ ಆರಂಭಕ್ಕೆ 2021 ರಲ್ಲಿ ಮಣಿಪಾಲ್ ಗ್ರೂಪ್ ಮತ್ತು ಅಮ್ನೆಕ್ಸ್ ಇನ್ಫೋಟೆಕ್ನಾಲಜೀಸ್‌ನ ಒಕ್ಕೂಟಕ್ಕೆ ತಿಳಿಸಲಾಯಿತು. ಆದರೆ ಅದು ಇನ್ನು ಸಿದ್ಧವಾಗಿಲ್ಲ.











Click it and Unblock the Notifications