ನಾರ್ಥಿಗೆ ಕಪಾಳಮೋಕ್ಷ ಮಾಡಿದ ಬಿಎಂಟಿಸಿ ಬಸ್ ಕಂಡಕ್ಟರ್, ಏನಿದು ವೈರಲ್ ವಿಡಿಯೋ ?
BMTC conductor viral video: ಬೆಂಗಳೂರಿನಲ್ಲಿ ಉತ್ತರ ಭಾರತೀಯರ ಹಾವಳಿ ಮುಂದುವರಿದಿದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಸಹ ಅತಿರೇಖದ ವರ್ತನೆ ತೋರಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಉತ್ತರ ಭಾರತೀಯ ವ್ಯಕ್ತಿ ಇದರಲ್ಲಿ ಭಾಷೆ ವಿಚಾರ ಹಾಗೂ ಕನ್ನಡಿಗರ ಬಗ್ಗೆ ಕಮೆಂಟ್ ಮಾಡಿರುವುದು ಇದೆ. ಒಟ್ಟಾರೆ ಈ ಬೆಳವಣಿಗೆ ಬೆಂಗಳೂರಿನ ಬಗ್ಗೆ ದೇಶದಾದ್ಯಂತ ಚರ್ಚೆ ಆಗುವುದಕ್ಕೆ ಕಾರಣವಾಗಿದೆ. ಉತ್ತರ ಭಾರತೀಯರ ಕಡೆ ತಪ್ಪಿದ್ದಾಗ ಸುದ್ದಿ ಮಾಡದ ಕೆಲವರು ಕನ್ನಡಿಗರ ತಪ್ಪು ಇರುವಾಗ ಮಾತ್ರ ಸುದ್ದಿ ಮಾಡುತ್ತಿದ್ದಾರೆ ಎನ್ನುವುದನ್ನೂ ಸಹ ಕನ್ನಡಿಗರು ಹೇಳುತ್ತಿದ್ದಾರೆ. ಏನಿದು ವೈರಲ್ ವಿಡಿಯೋ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ನಾರ್ಥ್‌ನಿಂದ ಬರುವ ಕೆಲವರು ಕನ್ನಡಿಗರೊಂದಿಗೆ ಕಿರಿಕ್ ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಕನಿಷ್ಠ 30ಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿದೆ. ಇದೀಗ ವ್ಯಕ್ತಿಯೊಬ್ಬರು ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ಖರೀದಿ ಮಾಡದೆ ಪ್ರಯಾಣ ಮಾಡಿದ್ದು ಈ ರೀತಿ ಪ್ರಯಾಣ ಮಾಡುವಾಗ ಚೆಕ್ಕಿಂಗ್ ಬಂದಿದ್ದಾರೆ ಎಂದು ಹೇಳಲಾಗಿದೆ.

ಚೆಕ್ಕಿಂಗ್ ಮಾಡುವಾಗ ಉತ್ತರ ಭಾರತೀಯ ಟಿಕೆಟ್ ಖರೀದಿ ಮಾಡದೆ ಇರುವುದು ಪತ್ತೆ ಆಗಿದೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಕಂಡಕ್ಟರ್ ಆ ವ್ಯಕ್ತಿಗೆ ಕಪಾಳಕ್ಕೆ ಬಾರಿಸಿದ್ದಾರೆ ಎನ್ನಲಾಗಿದ್ದು ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಿಂದಿಯಲ್ಲಿ ಮಾತನಾಡಿರುವ ವ್ಯಕ್ತಿ ಇದು ಇಂಡಿಯಾ... ನೀವು ನನಗೆ ಯಾಕೆ ಕಪಾಳಕ್ಕೆ ಹೊಡೆದಿದ್ದು ಎಂದು ಪ್ರಶ್ನೆ ಮಾಡಿದ್ದಾನೆ. ಕನ್ನಡದಲ್ಲಿ ಮಾತನಾಡಿ ಎಂದು ವ್ಯಕ್ತಿಗೆ ಹೇಳುತ್ತಿರುವುದು ಸಹ ಈ ವೈರಲ್ ವಿಡಿಯೋದಲ್ಲಿ ಇದೆ. ದೇವನಹಳ್ಳಿಯಿಂದ ಮೆಜೆಸ್ಟಿಕ್ ಮಾರ್ಗವಾಗಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಸಂಖ್ಯೆ KA 57 F-4029 ನಲ್ಲಿ ಈ ಘಟನೆ ನಡೆದಿದೆ.
"ಸರ್ ನೀವು ಯಾಕೆ ನನಗೆ ಹೊಡೆದ್ರಿ ಅಂತಾ ನಾರ್ಥಿ ಕೇಳಿದ್ದು ಇದಕ್ಕೆ ಕಂಡಕ್ಟರ್ ಟಿಕೆಟ್ ಯಾಕೆ ಖರೀದಿ ಮಾಡಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ನಾರ್ಥಿ ನೀವು ನನ್ನನ್ನು ಕೇಳಬೇಕಿತ್ತು. ನನಗೆ ಟಿಕೆಟ್ ಖರೀದಿ ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ನೀನು ವಿಡಿಯೋ ಮಾಡಿಕೋ ಏನು --- ಮಾಡೋಕೆ ಆಗಲ್ಲ" ಎಂದು ಬಿಎಂಟಿಸಿ ಬಸ್ ಕಂಡಕ್ಟರ್ ಅವಾಚ್ಯ ಶಬ್ದಗಳನ್ನು ಬಳಸಿರುವುದು ಸಹ ವೈರಲ್ ವಿಡಿಯೋದಲ್ಲಿ ಇದೆ.
ನಾನು ಟಿಕೆಟ್ ಖರೀದಿ ಮಾಡಿಲ್ಲ ದಂಡ ಪಾವತಿ ಮಾಡಿದ್ದೇನೆ. ಆದರೆ ನೀವು ಹೊಡೆದಿದ್ದು ಯಾಕೆ ಅಂತಾ ಪ್ರಶ್ನೆ ಮಾಡಿದ್ದಾನೆ. ನೀನು ದಂಡ ಕಟ್ಟಿದೆ ಸರಿ ಈಗ ನಾನೂ ದಂಡ ಕಟ್ಟಬೇಕಲ್ಲಾ ಎಂದು ಬಿಎಂಟಿಸಿ ಕಂಡಕ್ಟರ್ ಗರಂ ಆಗಿರುವುದು ವಿಡಿಯೋದಲ್ಲಿ ಇದೆ. ನಿನಗೆ ಭಾಷೆ ಬರಲ್ಲ ನಾನು ಹೇಳುವುದು ಅರ್ಥವಾಗುತ್ತಿಲ್ಲ ಎಂದು ಕಂಡಕ್ಟರ್ ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ಭಾಷೆ ವಿಚಾರ ಮಾತನಾಡಬೇಡಿ, ನಾನು ಇಂಡಿಯನ್ ಅಂತಾ ನಾರ್ಥಿ ಹೇಳಿರುವುದು ಇದೆ.
ನಾರ್ಥಿ ಟ್ವೀಟ್: ಇನ್ನು ಬಿಎಂಟಿಸಿಯಲ್ಲಿ ಬಸ್ ಕಂಡಕ್ಟರ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಉತ್ತರ ಭಾರತೀಯ ವ್ಯಕ್ತಿ ಸೋಷಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ BMTC ಬಸ್‌ನಲ್ಲಿ ನನ್ನ ಭಯಾನಕ ಅನುಭವ - ದಯವಿಟ್ಟು ನನಗೆ ನ್ಯಾಯ ಸಿಗಲು ಸಹಾಯ ಮಾಡಿ 🚨
My Horrific Experience on BMTC Bus – Please Help Me Get Justice 🚨
— HR SINGS (@hridaymusic111) August 28, 2025
Today on BMTC bus KA 57 F-4029, I paid a ₹420 penalty, yet the conductor slapped me hard across the face & abused me. I have video proof. No passenger deserves this. Please help me get justice. #BMTC #Justice pic.twitter.com/BBfXuTldn6
ಇಂದು BMTC ಬಸ್ KA 57 F-4029 ನಲ್ಲಿ ನಾನು ₹420 ದಂಡ ಪಾವತಿಸಿದೆ. ಆದರೆ ಕಂಡಕ್ಟರ್ ನನ್ನ ಮುಖಕ್ಕೆ ಬಲವಾಗಿ ಹೊಡೆದು ನಿಂದಿಸಿದ. ನನ್ನ ಬಳಿ ವೀಡಿಯೊ ಪುರಾವೆ ಇಲ್ಲ. ಯಾವುದೇ ಪ್ರಯಾಣಿಕರು ಇದಕ್ಕೆ ಅರ್ಹರಲ್ಲ. ದಯವಿಟ್ಟು ನನಗೆ ನ್ಯಾಯ ಸಿಗಲು ಸಹಾಯ ಮಾಡಿ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ. ಆದರೆ ನಾನು ಟಿಕೆಟ್ ಖರೀದಿ ಮಾಡಿಲ್ಲ ಎನ್ನುವುದನ್ನು ಬರೆದುಕೊಂಡಿಲ್ಲ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications