• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಗು ನೋಡಿಕೊಳ್ಳಬೇಕೆಂದರೂ ಪಾಳಿ ಬದಲು, ಬಿಎಂಟಿಸಿ ನಿರ್ವಾಹಕಿ ಆತ್ಮಹತ್ಯೆಗೆ ಯತ್ನ

|

ಬೆಂಗಳೂರು, ಮಾರ್ಚ್ 1: ಬಿಎಂಟಿಸಿ ಬಸ್ ಚಾಲಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಘಟಕ ವ್ಯವಸ್ಥಾಪಕರು ಕರ್ತವ್ಯದ ಪಾಳಿ ಬದಲಾಯಿಸಿದ್ದರಿಂದ ಮಗು ನೋಡಿಕೊಳ್ಳಲು ಸಮಯ ಸಿಗುವುದಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಮತ್ತೆ ಬಿಎಂಟಿಸಿ ಚಿಂತನೆ

ಅಸ್ವಸ್ಥರಾಗಿದ್ದ ಇರ್ವಾಹಕಿ ಜ್ಯೋತಿ(33) ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.

ಘಟಕದಲ್ಲಿ ಜರುಗಿದ ಈ ಘಟನೆಯಿಂದ ಆಕ್ರೋಶಗೊಂಡಿದ್ದ ಚಾಲಕ ಮತ್ತು ನಿರ್ವಾಹಕರು ಬಸ್ ಕಾರ್ಯಾಚರಣೆ ಸ್ಥಗಿತಗೊಳಿಸಿ ಘಟಕದ ವ್ಯವಸ್ಥಾಪಕ ಪ್ರಶಾಂತ್ ವಿರುದ್ಧ ಪ್ರತಿಭಟನೆ ನಡೆಸಿದರು.

ಪ್ರಮುಖ ಹೆದ್ದಾರಿಗಳಲ್ಲಿ ಶೀಘ್ರ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರ

ಮಧ್ಯಾಹ್ನ 12ರಿಂದ ರಾತ್ರಿ 11ರವರೆಗೂ ಸುಮಾರು 100ಕ್ಕೂ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ನಿರ್ವಾಹಕಿ ಜ್ಯೋತಿ 14 ವರ್ಷಗಳಿಂದ ಬಿಎಂಟಿಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮ್ಮನಹಳ್ಳಿ ಘಟಕದಲ್ಲಿ 6 ವರ್ಷಗಳಿಂದ ಮೊದಲ ಪಾಳಿ ಬೆಳಗ್ಗೆ 6ರಿಂದ ಮಧ್ಯಾಹ್ನ 1 ರವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ನಿಗದಿತ ಆದಾಯ ತರುತ್ತಿಲ್ಲವೆಂದು ಘಟಕ ವ್ಯವಸ್ಥಾಪಕ ಪ್ರಶಾಂತ್ ಗುರುವಾರ ಜ್ಯೋತಿ ಅವರನ್ನು ಮೊದಲ ಪಾಳಿಯಿಂದ ಜನರಲ್ ಶಿಫ್ಟ್ ಅಂದರೆ ಬೆಳಗ್ಗೆ 8ರಿಂದ ರಾತ್ರಿ 8 ರವರೆಗೆ ಕರ್ತವ್ಯ ನಿಯೋಜಿಸಿದ್ದರು.

ಮೆಟ್ರೋ ನಿಲ್ದಾಣದಲ್ಲಿ ಶೀಘ್ರ ಎಲೆಕ್ಟ್ರಿಕ್‌ ವಾಹನ ಚಾರ್ಜಿಂಗ್‌ ಕೇಂದ್ರ ಆರಂಭ

ಅದಕ್ಕೆ ಜ್ಯೋತಿ ಅವರು ತಮಗೆ ಮೂರು ವರ್ಷದ ಮಗುವಿದ್ದು, ಅದನ್ನು ತಾವೇ ಪಾಲನೆ ಮಾಡಬೇಕಿದೆ. ಹಾಗಾಗಿ ಮೊದಲ ಪಾಳಿಯಲ್ಲೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕೆಂದು ಕೋರಿದ್ದರು ಆದರೆ ಅವರ ಮನವಿಗೆ ಯಾವುದೇ ಸ್ಪಂದನೆ ದೊರೆತಿರಲಿಲ್ಲ.

English summary
Upset over change of shift timings, a 33-year-old BMTC bus conductor tried to kill herself by consuming poison at Sumanahalli BMTC Depot (no. 31) on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X