ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸಿಕ ಬಸ್ ಪಾಸ್: ನಿಯಮ ಬದಲಿಸಿದ ಬಿಎಂಟಿಸಿ

|
Google Oneindia Kannada News

ಬೆಂಗಳೂರು ಮೇ 26: ಜುಲೈನಿಂದ ಅನ್ವಯವಾಗುವಂತೆ ಮಾಸಿಕ ಬಸ್ ಪಾಸ್‌ ನಿಯಮಗಳನ್ನು ಬಿಎಂಟಿಸಿ ಬದಲಿಸಿದೆ.

ಇನ್ನೂ ಮುಂದೆ ಬಿಎಂಟಿಸಿ 30 ದಿನಗಳ ಬಸ್ ಪಾಸ್ ವಿತರಿಸಲಿದೆ. ಇದು ಕ್ಯಾಲೆಂಡರ್ ತಿಂಗಳ ಬದಲಾಗಿ, ಪಾಸ್ ಖರೀದಿಸಿದ ದಿನಾಂಕದಿಂದ 30 ದಿನಗಳವರಗೆ ಮಾನ್ಯವಾಗಿರಲಿದೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳು ಪರಿಸರಕ್ಕೆ ಓಕೆ: ಖಜಾನೆಗೆ ಹೊಗೆಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳು ಪರಿಸರಕ್ಕೆ ಓಕೆ: ಖಜಾನೆಗೆ ಹೊಗೆ

ಸದ್ಯ ಕ್ಯಾಲೆಂಡರ್ ತಿಂಗಳಿಗೆ ಮಾತ್ರ ಬಿಎಂಟಿಸಿ ಪಾಸ್ ವಿತರಿಸುತ್ತಿತ್ತು. ಈ ನಿಯಮವು ಒಂದು ವಾರದ ನಂತರ ಮಾಸಿಕ ಬಸ್ ಪಾಸ್ ಖರೀದಿಸುವ ಬಿಎಂಟಿಸಿ ಪ್ರಯಾಣಿಕರಿಗೆ ಲುಕ್ಸಾನ್ ಆಗುತ್ತಿತ್ತು.

ಈ ನೂತನ ನಿಯಮವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ವಿತರಿಸುವ ಸಾಮಾನ್ಯ, ವಜ್ರ ಮತ್ತು ವಾಯು ವಜ್ರ ಬಸ್‌ಗಳ ಮಾಸಿಕ ಪಾಸ್‌ಗಳಿಗೆ ಅನ್ವಯವಾಗಲಿದೆ.

BMTC changes monthly bus pass rules

ಗುರುತಿನ ಚೀಟಿಯ ನಿಯಮ ಸಡಿಲಿಕೆ:

ಇದೇ ವೇಳೆ ಗುರುತಿನ ಚೀಟಿಯ ನಿಯಮಗಳನ್ನು ಬಿಎಂಟಿಸಿ ಸಡಿಲಿಸಿದೆ. ಪ್ರಸ್ತುತ ಮಾಸಿಕ ಬಸ್ ಪಾಸ್ ಖರೀದಿಸಲು ಬಯಸುವವರು ಬಿಎಂಟಿಸಿ ಯಿಂದ ಗುರುತಿನ ಚೀಟಿ ಪಡೆಯಬೇಕಿತ್ತು.

ಕೆಲಸದಿಂದ ವಜಾ, ನಮ್ಮ ಕುಟುಂಬ ಬೀದಿಗೆ ಬಿದ್ದಿದೆ; ಬಿಎಂಟಿಸಿ ನೌಕರನಿಂದ ದಯಾಮರಣ ಅರ್ಜಿ!ಕೆಲಸದಿಂದ ವಜಾ, ನಮ್ಮ ಕುಟುಂಬ ಬೀದಿಗೆ ಬಿದ್ದಿದೆ; ಬಿಎಂಟಿಸಿ ನೌಕರನಿಂದ ದಯಾಮರಣ ಅರ್ಜಿ!

"2022ರ ಜುಲೈನಿಂದ ಅನ್ವಯವಾಗುವಂತೆ ಗುರುತಿನ ಚೀಟಿ ಕಡ್ಡಾಯ ನಿಮಯವನ್ನು ಬಿಎಂಟಿಸಿ ರದ್ದುಪಡಿಸಲಿದೆ. ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್, ಪಾಸ್ ಪೋರ್ಟ್, ಚಾಲನಾ ಪರವಾನಗಿ ಸೇರಿದಂತೆ ಸರಕಾರದಿಂದ ವಿತರಿಸಿದ ಯಾವುದಾದರು ಒಂದು ಗುರುತಿನ ಚೀಟಿಯನ್ನು ಪ್ರಯಾಣಿಕರು ತೋರಿಸಬಹುದು,'' ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದರು.

(ಒನ್ಇಂಡಿಯಾ ಸುದ್ದಿ)

Recommended Video

Rajat Patidar ಯಾರು?RCB ಸೇರೋದಕ್ಕೆ ಏನೆಲ್ಲಾ ಕಷ್ಟ ಪಟ್ಟಿದ್ದಾರೆ ಗೊತ್ತಾ? | #cricket | Oneindia Kannada

English summary
Starting July, the BMTC will begin issuing 30-day passes that will be valid from the date of purchase rather than for the calendar month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X