ಅಗತ್ಯ ಮಾಹಿತಿ; ಬಿಎಂಟಿಸಿ ಪ್ರಯಾಣಿಕರೇ ಗಮನಿಸಿ

ಬೆಂಗಳೂರು, ಸೆಪ್ಟೆಂಬರ್ 02: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಸ್‌ನಲ್ಲಿ ಸಂಚಾರ ನಡೆಸುವ ಜನರಿಗೆ ಅಗತ್ಯ ಮಾಹಿತಿ ಇದಾಗಿದೆ.

Recommended Video

      Sandalwood Drug Mafiaಗೆ ರಾಜಕೀಯ ನಂಟು ಇದೆ - HD Kumaraswamy | Oneindia Kannada

      ಬಿಎಂಟಿಸಿ ಜನರಿಂದ ದೂರು, ಸಲಹೆಗಳನ್ನು ಪಡೆಯಲು ಸಹಾಯವಾಣಿಯನ್ನು ಸ್ಥಾಪನೆ ಮಾಡಿದೆ. ಪ್ರಸ್ತುತ ಸಹಾಯವಾಣಿ ಸಂಖ್ಯೆಯನ್ನು ಬದಲಾವಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

      ಇದುವರೆಗೂ 18004251663 ನಂಬರ್‌ಗೆ ಪ್ರಯಾಣಿಕರು ಕರೆ ಮಾಡಿ ದೂರು ಕೊಡಬಹುದಿತ್ತು. ಸಲಹೆಗಳನ್ನು ಸಹ ನೀಡಲು ಅವಕಾಶವಿತ್ತು. ಆದರೆ, ಇನ್ನು ಮುಂದೆ ಈ ಸಂಖ್ಯೆ ಲಭ್ಯವಿರುವುದಿಲ್ಲ.

      BMTC Changes Helpline Number

      ಪ್ರಯಾಣಿಕರು ಇನ್ನು ಮುಂದೆ 080-22483777 ಸಂಖ್ಯೆಗೆ ಕರೆ ಮಾಡಬೇಕು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 10ರ ತನಕ ಈ ಸಹಾಯವಾಣಿ ಸಂಖ್ಯೆ ಕಾರ್ಯ ನಿರ್ವಹಣೆ ಮಾಡಲಿದೆ.

      ಬಸ್ ಸಂಚಾರ, ಪಾಸುಗಳು ಮುಂತಾದ ಮಾಹಿತಿಗಳನ್ನು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪಡೆಯಬಹುದಾಗಿದೆ. ಬಿಎಂಟಿಸಿ ಬಸ್‌ ಸೇವೆಯ ಬಗ್ಗೆ ದೂರುಗಳಿದ್ದಲ್ಲಿ ಇದೇ ನಂಬರ್‌ಗೆ ಕರೆ ಮಾಡಿ ನೀಡಬಹುದಾಗಿದೆ.

      ಬಿಎಂಟಿಸಿಯ ದಿನ, ಮಾಸಿಕ ಪಾಸುಗಳ ಬಗ್ಗೆ ಮಾಹಿತಿ ಪಡೆಯಲು ಜನರು ನಮ್ಮ ಬಿಎಂಟಿಸಿ ವೆಬ್‌ಸೈಟ್‌ಗೆ ಸಹ ಭೇಟಿ ನೀಡಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+