ರಸ್ತೆಯಲ್ಲಿ ಗೂಂಡಾ ವರ್ತನೆ ತೋರಿದ ಬಸ್ ಚಾಲಕ; ವಿಡಿಯೋ ವೈರಲ್

ಬೆಂಗಳೂರು, ಜನವರಿ 30: ಬೆಂಗಳೂರು ಮಹಾನಗರದಲ್ಲಿ ಬಿಎಂಟಿಸಿ ಸಾರ್ವಜನಿಕ ಸಾರಿಗೆಗೆ ಹೆಸರುವಾಸಿಯಾಗಿದೆ. ಆದರೆ, ಕೆಲವೊಮ್ಮೆ ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರು ತೋರುವ ಅತಿರೇಕದ ವರ್ತನೆಯಿಂದ ಬಿಎಂಟಿಸಿ ಕುಖ್ಯಾತವೂ ಆಗಿದೆ.

ಬಿಎಂಟಿಸಿ ವಜ್ರಾ ಬಸ್‌ನ ಚಾಲಕನೊಬ್ಬ (KA 57 F822) ಬಸ್ ಓವರಟೇಕ್ ಮಾಡಿದಾ ಎಂದು ಬೈಕ್ ಚಾಲಕನೊಬ್ಬನನ್ನು ಥಳಿಸಿರುವ ಘಟನೆ ನಡೆದಿದೆ. ಬಸ್‌ನಲ್ಲಿದ್ದ ಹಮೀದ್ ಎನ್ನುವರು ಈ ಘಟನೆಯನ್ನು ವಿಡಿಯೋ ಮಾಡಿ ಟ್ವಿಟ್ಟರ್‌ಗೆ ಹಾಕಿದ್ದಾರೆ. ಬಿಎಂಟಿಸಿ ಚಾಲಕನ ವರ್ತನೆಯನ್ನು ಖಂಡಿಸಿ, ಬಿಎಂಟಿಸಿ ಟ್ವಿಟ್ಟರ್ ಅಕೌಂಟ್‌ಗೆ ವಿಡಿಯೋವನ್ನು ಟ್ಯಾಗ್ ಮಾಡಿದ್ದಾರೆ.

BMTC Bus Driver Looks Like A Goon In The Street; The Video Is Viral

ಹಮೀದ್ ಎನ್ನುವರು, 'ರಸ್ತೆಗಿಳಿದು ಜನರನ್ನು ಥಳಿಸುವ ಅಧಿಕಾರವನ್ನು ಬಿಎಂಟಿಸಿ ಚಾಲಕನಿಗೆ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ವಿಡಿಯೋ ಮಾಡುತ್ತಿದ್ದ ಹಮೀದ್ ಮೇಲೆಯೂ ಚಾಲಕ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಘಟನೆ ಎಲ್ಲಿ ನಡೆದಿದೆ? ಏನಕ್ಕೆ ನಡೆಯಿತು ಎನ್ನುವ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿ, ಅತಿರೇಕದ ವರ್ತನೆ ತೋರಿದ ಬಸ್ ಚಾಲಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+