RSS ವಿಚಾರ ಮುಗಿದಿದ್ದರೆ BMTC ಬಗ್ಗೆಯೂ ಚರ್ಚಿಸಿ; ರಸ್ತೆಯಲ್ಲೇ ಕೆಟ್ಟುನಿಂತ ಬಸ್ ವಿಡಿಯೋ ವೈರಲ್
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ರಸ್ತೆಯಲ್ಲೇ ಕೆಟ್ಟುನಿಲ್ಲುತ್ತಿವೆ. ಈ ಪೈಕಿ ಕೆಟ್ಟುನಿಂತ ಬಸ್‌ವೊಂದನ್ನು ಬಸ್ ಕಂಡಕ್ಟರ್, ಸಿಬ್ಬಂದಿ ತಳ್ಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಸೇರಿದಂತೆ ಜೆಡಿಎಸ್ ರಾಜ್ಯ ಸಾರಿಗೆ ಸಂಸ್ಥೆಗಳ ಪರಿಸ್ಥಿತಿಯನ್ನು ಟೀಕಿಸಿದೆ.
ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಬಿಎಂಟಿಸಿ ಬಸ್ ವಿಡಿಯೋ ಹಂಚಿಕೊಂಡಿರುವ ವ್ಯಕ್ತಿಯು, 'ಉದಯವಾಯ್ತು ಚೆಲುವ ಕನ್ನಡ ನಾಡು. ಸಚಿವ ಪ್ರಿಯಾಂಕ್ ಖರ್ಗೆ ಅವರೇ RSS ವಿಷಯ ಮುಗಿದಿದ್ದರೆ ಕ್ಯಾಬಿನೆಟ್ ನಲ್ಲಿ ಇದರ ಬಗ್ಗೆಯೂ ಸ್ವಲ್ಪ ಚರ್ಚಿಸುತ್ತೀರಾ' ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೇ 'ಇನ್ಮುಂದೆ ಮಹಿಳಾ ಕಂಡಕ್ಟರ್ ಗಳನ್ನು ನೇಮಕ ಮಾಡುವ ಮೊದಲು ಮಿಲಿಟರಿ ತರಬೇತಿ ನೀಡಬೇಕು' ಎಂದು ಬಸ್ ಪರಿಸ್ಥಿತಿಗೆ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಇತ್ತೀಚೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನಿರಂತರವಾಗಿ ಆರ್‌ಎಸ್‌ಎಸ್ ಮತ್ತು ಅಯೋಧ್ಯ ಶ್ರೀರಾಮಂದಿರ ಹುಂಡಿ ಹಣ ಕಳ್ಳತನ ಕುರಿತು ಸಾಕಷ್ಟು ಟೀಕಿಸಿದ್ದರು. ಆರ್‌ಎಸ್‌ಎಸ್ ನೋಂದಣಿ ಕುರಿತು ದೂರಿದ್ದರು. ಈ ಸಂಬಂಧ ನೆಟ್ಟಿಗರೊಬ್ಬರು ಆ ವಿಷಯ ಮುಗಿದಿದ್ದರೆ ಜನರ, ಸಾರಿಗೆ ಸಮಸ್ಯೆಗಳತ್ತ ಗಮನ ಹರಿಸುವಂತೆ ಆಗ್ರಹಿಸಿದ್ದಾರೆ.
ಜೆಡಿಎಸ್ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಸರ್ಕಾರ ಯಶಸ್ವಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡಿದ್ದ ಭ್ರಮೆಯಲ್ಲಿ ತೇಲುತ್ತಿದೆ. ಆದರೆ ಸರ್ಕಾರ ಮಟ್ಟದಲ್ಲಿ ಸಾರಿಗೆ ವ್ಯವಸ್ಥೆ ಅಧೋಗತಿಗೆ ತಲುಪಿದೆ. ಈ ಬಗ್ಗೆ ಗಮನ ಹರಿಸಿಲ್ಲ ಎಂದು ಕೆಟ್ಟು ನಿಂತ ಬಿಎಂಟಿಸಿ ಬಸ್ ವಿಡಿಯೋ ಹಂಚಿಕೊಂಡು ಜೆಡಿಎಸ್ ಟೀಕಿಸಿದೆ.
ಗ್ಯಾರಂಟಿ ಭ್ರಮೆಯಲ್ಲಿ ತೇಲುತ್ತಿರುವ @INCKarnataka ಸರ್ಕಾರದಲ್ಲಿ ಸಾರಿಗೆ ವ್ಯವಸ್ಥೆ ಅಧೋಗತಿಗೆ ತಲುಪಿದೆ.❎ ನೌಕರರಿಗೆ ಸಂಬಳವಿಲ್ಲ❎ ಬಸ್ಸುಗಳಿಗೆ ಡೀಸೆಲ್ ಹಾಕಿಸಲು ಹಣವಿಲ್ಲ❎ 8000+ ಕೋಟಿ ರೂ. ನಷ್ಟದಲ್ಲಿ ಸಾರಿಗೆ ಇಲಾಖೆ❎ಇಂಧನ ಬಾಕಿ ₹600 ಕೋಟಿಗೂ ಹೆಚ್ಚುಕೆಟ್ಟು ನಿಲ್ಲುವ ಡಕೋಟಾ ಬಸ್‌ಗಳನ್ನು ಮಹಿಳಾ ಕಂಡಕ್ಟರ್‌ಗಳು ತಳ್ಳುವ ದುಃಸ್ಥಿತಿ ಬಂದಿದೆ. ಡಿಕೆಶಿ ಸರ್ಕಾರದ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?@byrathi_suresh @CMofKarnataka @BMTC_BENGALURU @KSRTC_Journeys #CongressFailsKarnataka
— Janata Dal Secular (JDS) (@JanataDal_S) October 25, 2026
ಸಾವಿರಾರು ಕೋಟಿ ರೂ. ಹಣ ಬಾಕಿ
ಮುಂದುವರಿದು, ಶಕ್ತಿ ಯೋಜನೆಯಿಂದಾಗಿ ರಾಜ್ಯ ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಸರ್ಕಾರದ ಬಳಿ ಬಸ್ಸುಗಳಿಗೆ ಡೀಸೆಲ್ ಹಾಕಿಸಲು ಹಣವಿಲ್ಲ. ಸಾರಿಗೆ ಇಲಾಖೆಗೆ 8000 ಕೋಟಿ ರೂಪಾಯಿಗೂ ಅಧಿಕ ಹಣ ಬರಬೇಕಿದ್ದು, ಬಾರದೇ ಇಲಾಖೆ ನಷ್ಟದಲ್ಲಿದೆ. ಇಂಧನ ಬಾಕಿ 600 ಕೋಟಿಗೂ ರೂ.ಗೂ ಹೆಚ್ಚು ಹಣ ಪಾವತಿಸಲಾಗಿಲ್ಲ ಎಂದು ಸರ್ಕಾರ ಆಡಳಿತವನ್ನು ಬಿಚ್ಚಿಟ್ಟಿದೆ. ಸಾರಿಗೆ ಇಲಾಖೆಯ ನಾಲ್ಕು ಸಾರಿಗೆ ಸಂಸ್ಥೆಗಳು ಶಕ್ತಿ ಯೋಜನೆ ಬಳಿಕ ಅಧೋಗತಿ ತಲುಪಿವೆ ಎಂದು ದೂರಿದೆ.
ಕೆಟ್ಟು ನಿಲ್ಲುವ ಡಕೋಟಾ ಬಸ್‌ಗಳನ್ನು ಮಹಿಳಾ ಕಂಡಕ್ಟರ್‌ಗಳು ತಳ್ಳುವ ದುಃಸ್ಥಿತಿ ಬಂದಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಉದಯವಾಯ್ತು ಚೆಲುವ ಕನ್ನಡ ನಾಡು @BMTC_BENGALURU@KSRTC_Journeys ಗುರು @PriyankKhargeRSS ವಿಷಯ ಮುಗಿದಿದ್ದರೆ ಕ್ಯಾಬಿನೆಟ್ ನಲ್ಲಿ ಇದರ ಬಗ್ಗೆಯೂ ಸ್ವಲ್ಪ ಚರ್ಚಿಸಿಇನ್ಮುಂದೆ ಮಹಿಳಾ ಕಂಡಕ್ಟರ್ ಗಳನ್ನು ನೇಮಕ ಮಾಡುವ ಮೊದಲು ಮಿಲಿಟರಿ ತರಬೇತಿ ನೀಡಿ#KarnatakaHomeMinster @VolvoTrucks #KarnatakaRains #Somalia #Volvo https://t.co/Cuc1fwGqsw
— Dr. Mahesh ThuppeKallu (@MaheshThuppeKal) October 24, 2026


Click it and Unblock the Notifications
