• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಳೆಯ ಬಸ್‌ಪಾಸ್ ತೋರಿಸಿ ವಿದ್ಯಾರ್ಥಿಗಳು ಪ್ರಯಾಣಿಸಲು ಬಿಎಂಟಿಸಿ ಅನುಮತಿ

|

ಬೆಂಗಳೂರು, ಜನವರಿ 01: ಇಂದಿನಿಂದ ರಾಜ್ಯದ ಶಾಲಾ,ಕಾಲೇಜುಗಳು ತೆರೆಯುತ್ತಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹಳೆಯ ಪಾಸಿನಲ್ಲೇ ವಿದ್ಯಾರ್ಥಿಗಳು ಪ್ರಯಾಣಿಸಲು ಅವಕಾಶಮಾಡಿಕೊಟ್ಟಿದೆ.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜ. 1ರಿಂದ, 2019-20ನೇ ಸಾಲಿನಲ್ಲಿ ವಿತರಿಸಿದ್ದ ಸ್ಮಾರ್ಟ್‌ಕಾರ್ಡ್‌ ಪಾಸ್‌ನಲ್ಲೇ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

ಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರ ಇಂದಿನಿಂದ ಕಡಿತ

ಜ. 1ರಿಂದ ಮುಂದಿನ ಆದೇಶದವರೆಗೆ ಸಾಮಾನ್ಯ ಸೇವೆಯ ಬಸ್‌ಗಳಲ್ಲಿ ವಾಸ ಸ್ಥಳದಿಂದ ಶಾಲಾ-ಕಾಲೇಜಿಗೆ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಹಳೆಯ ಬಸ್‌ ಪಾಸ್‌, ಶಾಲಾ-ಕಾಲೇಜಿಗೆ ದಾಖಲಾಗಿರುವ ಶುಲ್ಕ ಪಾವತಿ ರಸೀದಿ ಹಾಗೂ ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸಿ ಪ್ರಯಾಣ ಮಾಡಬಹುದಾಗಿದೆ.

ಭಾರತಕ್ಕೆ ಫೆಬ್ರವರಿಯಲ್ಲಿ ಕೊರೊನಾ ಬಂದಿದ್ದು, ಅದರ ನಂತರ ದೇಶದಲ್ಲಿ ಲಾಕ್‌ಡೌನ್‌ ಆಗಿತ್ತು.

ಆದ್ದರಿಂದ ಶಾಲೆ-ಕಾಲೇಜುಗಳು ರಜೆ ಘೋಷಿಸಿದ್ದವು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲೆ-ಕಾಲೇಜುಗಳನ್ನು ಬಂದ್‌ ಮಾಡಲಾಗಿತ್ತು. ಇದೀಗ ಇಂದಿನಿಂದ ಮತ್ತೆ ಆರಂಭವಾಗಿದೆ.

ಇಂದಿನಿಂದ ಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರವನ್ನು ಕಡಿತಗೊಳಿಸಲಾಗುತ್ತಿದೆ. ಹೆಚ್ಚೆಚ್ಚು ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಬಿಎಂಟಿಸಿ ಈ ನಿರ್ಧಾಕ್ಕೆ ಘೋಷಿಸಿದೆ. ಬಿಎಂಟಿಸಿಯು ಎಸಿ ಬಸ್‌ಗಳ ಟಿಕೆಟ್ ದರದಲ್ಲಿ ಶೇ.20ರಷ್ಟು ಕಡಿತ ಮಾಡಿದೆ.

   ಸಿದ್ದು ಪದೇಪದೆ BSY ಬಗ್ಗೆ ಯಾಕೆ ಹೀಗೆ ಹೇಳುತ್ತಿದ್ದಾರೆ? | Oneindia Kannada

   ದೈನಂದಿನ ಪಾಸ್‌ ದರವನ್ನು 147 ರೂ. ಗಳಿಂದ 120 ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಸಾಮಾನ್ಯ ಮತ್ತು ವಾಯುವಜ್ರ ಸೇವೆಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

   English summary
   BMTC will accept Previous Year Student Bus Passes to Travel across the city.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X