Namma Metro; ಕೆಆರ್‌ ಪುರ ನಿಲ್ದಾಣಕ್ಕೆ 37 ಬಿಎಂಟಿಸಿ ಫೀಡರ್‌ ಬಸ್

ಬೆಂಗಳೂರು, ಅಕ್ಟೋಬರ್ 10; ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ನೇರಳೆ ಮಾರ್ಗ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಅಕ್ಟೋಬರ್ 9ರ ಸೋಮವಾರದಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಚಲಘಟ್ಟ-ಕೆಂಗೇರಿ ನಡುವೆ ಮೆಟ್ರೋ ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಹೆಚ್ಚಿಸಿದೆ. ವಿವಿಧ ಪ್ರದೇಶಗಳಿಂದ 37 ಹೊಸ ಬಿಎಂಟಿಸಿ ಬಸ್‌ಗಳು ಕೆಆರ್ ಪುರ ನಮ್ಮ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುತ್ತವೆ.

BMTC 37 Feeder Buses To KR Pura Namma Metro Station

ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಇತರ ಪ್ರದೇಶಗಳಿಂದ ಕೆಆರ್ ಪುರದ ಮೆಟ್ರೋ ನಿಲ್ದಾಣ ಸಂಪರ್ಕಿಸಲು ಮೆಟ್ರೋ ಫೀಡರ್ ಬಸ್ ಸೇವೆ ಆರಂಭಿಸಲಾಗಿದೆ ಎಂದು ಬಿಎಂಟಿಸಿ ಹೆಚ್ಚುವರಿ ಸಂಚಾರ ಮ್ಯಾನೇಜರ್ ಜಿ. ಟಿ. ಪ್ರಕಾಕರ ರೆಡ್ಡಿ ಹೇಳಿದ್ದಾರೆ.

ಎರಡು ಹೊಸ ಮಾರ್ಗದಲ್ಲಿ ಬಸ್; ಬಿಎಂಟಿಸಿ ಎರಡು ಹೊಸ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಆರಂಭಿಸಿದೆ. ಕೆಆರ್ ಪುರ ಮೆಟ್ರೋ ನಿಲ್ದಾಣ- ಸಿಲ್ಕ್ ಬೋರ್ಡ್ ಜಂಕ್ಷನ್, ಕೆಆರ್ ಪುರ ಮೆಟ್ರೋ ನಿಲ್ದಾಣ-ಕೆಆರ್ ಪುರ ಮೆಟ್ರೋ ನಿಲ್ದಾಣ ನಡುವೆ ಬಸ್ ಸಂಚಾರ ನಡೆಸಲಿದೆ.

ಕೆಆರ್ ಪುರ ಮೆಟ್ರೋ ನಿಲ್ದಾಣ-ಸಿಲ್ಕ್ ಬೋರ್ಡ್‌ ಜಂಕ್ಷನ್ ನಡುವೆ 22 ವೊಲ್ವೋ ಬಸ್‌ಗಳು ಸಂಚಾರ ನಡೆಸಲಿವೆ. ಇನ್ನೊಂದು ಮಾರ್ಗದಲ್ಲಿ 15 ಸಾಮಾನ್ಯ ಬಸ್ ಸಂಚಾರ ನಡೆಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೊಲ್ವೋ ಬಸ್ ಕೆಆರ್ ಪುರ ಮೆಟ್ರೋ ನಿಲ್ದಾಣ-ಸಿಲ್ಕ್ ಬೋರ್ಡ್‌ ಜಂಕ್ಷನ್ ಮಾರ್ಗದಲ್ಲಿ ಹೊರ ವರ್ತುಲ ರಸ್ತೆ, ಮಾರತ್‌ಹಳ್ಳಿ, ಇಬ್ಬಲೂರು ಮೂಲಕ ಸಂಚಾರ ನಡೆಸಲಿದೆ. 8 ರಿಂದ 10 ನಿಮಿಷಕ್ಕೆ ಒಂದು ಬಸ್ ಸಂಚಾರ ನಡೆಸಲಿದೆ.

ಕೆಆರ್ ಪುರ ಮೆಟ್ರೋ ನಿಲ್ದಾಣ-ಕೆಆರ್ ಪುರ ಮೆಟ್ರೋ ನಿಲ್ದಾಣದ ಬಸ್ ಮಾರತ್‌ಹಳ್ಳಿ, ಕುಂದಲಹಳ್ಳಿ, ಐಟಿಪಿಎಲ್, ಗರುಡಾಚಾರ್ ಪಾಳ್ಯದ ಮೂಲಕ ಸಂಚಾರ ನಡೆಸುತ್ತದೆ. 5 ರಿಂದ 10 ನಿಮಿಷಕ್ಕೆ ಒಂದು ಬಸ್ ಸಂಚಾರ ನಡೆಸುತ್ತದೆ.

ಬಿಎಂಟಿಸಿ ಮೆಟ್ರೋ ಫೀಡರ್‌ ಬಸ್‌ಗಳು ದಿನಕ್ಕೆ 300 ರಿಂದ 350 ಟ್ರಿಪ್ ಸಂಚಾರ ನಡೆಸಲಿದ್ದು, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಹಕಾರಿಯಾಗಲಿವೆ. ಬೆಳಗ್ಗೆ 5.40 ರಿಂದ ರಾತ್ರಿ 10.30, 11 ಗಂಟೆಯ ತನಕ ಬಸ್‌ಗಳು ಸಂಚಾರ ನಡೆಸಲಿವೆ.

ಹೊರ ವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್ ಲೇನ್‌ ಅನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಎಂದು ಬಿಎಂಟಿಸಿ ಬೇಡಿಕೆ ಇಟ್ಟಿದೆ. ಇದರಿಂದಾಗಿ ಕೆಆರ್ ಪುರ ಮತ್ತು ಸಿಲ್ಕ್ ಬೋರ್ಡ್‌ ನಡುವಿನ ಪ್ರಯಾಣದ ಅವಧಿ 15 ನಿಮಿಷ ಕಡಿಮೆಯಾಗಲಿದೆ.

ಕೆಆರ್ ಪುರ-ಸಿಲ್ಕ್ ಬೋರ್ಡ್ ಬೆಂಗಳೂರು ನಗರದ ಅತಿ ಹೆಚ್ಚು ದಟ್ಟಣೆಯ ರಸ್ತೆಗಳಲ್ಲಿ ಒಂದು. ಬಿಎಂಟಿಸಿ ಈ ಮಾರ್ಗದಲ್ಲಿ ಈಗಾಗಲೆ 315 ಬಸ್‌ಗಳನ್ನು ಓಡಿಸುತ್ತಿದೆ.

ಹೊರ ವರ್ತುಲ ರಸ್ತೆ ಮೂಲಕ ಸಿಲ್ಕ್ ಬೋರ್ಡ್, ಕೆಆರ್ ಪುರ, ಹೆಬ್ಬಾಳ, ಗೊರಗುಂಟೆಪಾಳ್ಯಕ್ಕೆ ಬಸ್‌ಗಳು ಸಂಪರ್ಕ ಕಲ್ಪಿಸುತ್ತವೆ. ಈ ಮಾರ್ಗದಲ್ಲಿ 100 ವಜ್ರ ಬಸ್‌ಗಳು, 215 ಸಾಮಾನ್ಯ ಬಸ್‌ಗಳು ಸಂಚಾರ ನಡೆಸುತ್ತವೆ.

ಬಿಎಂಆರ್‌ಸಿಎಲ್ ಯಾವುದೇ ಸಾಂಕೇತಿಕ ಕಾರ್ಯಕ್ರಮವನ್ನು ಮಾಡದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಪ್ಪಿಗೆ ಪಡೆದು ಅಕ್ಟೋಬರ್ 9ರ ಸೋಮವಾರ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಚಲಘಟ್ಟ-ಕೆಂಗೇರಿ ನಡುವಿನ ಮೆಟ್ರೋ ರೈಲುಗಳ ಸಂಚಾರ ಆರಂಭಿಸಿದೆ.

ಇದರಿಂದಾಗಿ ಬೆಂಗಳೂರು ನಗರದ ಜನರಿಗೆ ಅನುಕೂಲವಾಗಿದೆ. ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ತನಕ ಜನರು ನಮ್ಮ ಮೆಟ್ರೋ ಮೂಲಕ ಸಂಚಾರ ನಡೆಸಬಹುದಾಗಿದೆ. ಬಹಳಷ್ಟು ಸಮಯದ ಉಳಿತಾಯವಾಗಲಿದೆ.

ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಚಲಘಟ್ಟ-ಕೆಂಗೇರಿ ನಡುವಿನ ಮೆಟ್ರೋ ರೈಲುಗಳ ಸಂಚಾರ ಆರಂಭದ ಬಳಿಕ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಪೂರ್ಣ ರೈಲು ಸಂಚಾರ ಆರಂಭವಾದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+